ಮುಂಬಾವನ್ನು ಉರುಳಿಸಿದ ಬುಲ್ಸ್
Team Udayavani, Sep 28, 2019, 9:55 AM IST
ಜೈಪುರ: ಶುಕ್ರವಾರದ ಜೈಪುರ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮಹತ್ವದ ಜಯ ಪಡೆದಿದೆ. ಈ ಜಯದ ಮೂಲಕ ಬೆಂಗಳೂರು ತಂಡದ ಪ್ಲೇ-ಆಫ್ ಸಾಧ್ಯತೆ ಹೆಚ್ಚಿದೆ.
ತೀವ್ರ ಪೈಪೋಟಿಯಿಂದ ಕೂಡಿದ ಈ ಹಣಾಹಣಿಯಲ್ಲಿ ಬೆಂಗಳೂರು ತಂಡ 35-33 ಅಂಕಗಳಿಂದ ಯು ಮುಂಬಾ ತಂಡವನ್ನು ಮಣಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಆತಿಥೇಯ ಜೈಪುರ ವಿರುದ್ಧ 51-31 ಅಂತರದ ಭರ್ಜರಿ ಜಯ ಸಾಧಿಸಿತು.
4ನೇ ಸ್ಥಾನದಲ್ಲಿ ಬುಲ್ಸ್
ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 19 ಪಂದ್ಯ ವಾಡಿರುವ ಬೆಂಗಳೂರು, 10 ಜಯ, 8 ಸೋಲು, 1 ಟೈನೊಂದಿಗೆ 58 ಅಂಕ ಗಳಿಸಿದೆ. ಬೆಂಗಳೂರಿಗೆ ಇನ್ನು 3 ಪಂದ್ಯ ಬಾಕಿ ಇದ್ದು, ಕನಿಷ್ಠ ಎರಡರಲ್ಲಿ ಗೆದ್ದರೆ ಪ್ಲೇ-ಆಫ್ ಖಾತ್ರಿಯಾಗಲಿದೆ.
ರೋಚಕ ಹಣಾಹಣಿ
ಎರಡೂ ತಂಡಗಳು ಆರಂಭದಿಂ ದಲೇ ಜಿದ್ದಾಜಿದ್ದಿ ಹೋರಾಟ ನಡೆಸಿ ದವು. ಕಡೆಯ 5 ನಿಮಿಷದಲ್ಲಿ ಬುಲ್ಸ್ ಮೇಲುಗೈ ಸಾಧಿಸಿ ಜಯ ಒಲಿಸಿಕೊಂಡಿತು. ಬುಲ್ಸ್ ಪರ ಪವನ್ ಸೆಹ್ರಾವತ್ ಮತ್ತೆ ಮಿಂಚಿದರು. 17 ಬಾರಿ ದಾಳಿ ನಡೆಸಿದ ಅವರು 10 ಅಂಕ ಗಳಿಸಿದರು. ತಂಡದ ರಕ್ಷಣಾ ವಿಭಾಗದಲ್ಲಿ ಮೆರೆದಿದ್ದು ಸೌರಭ್ ನಂದಲ್. ಅವರು 9 ಯತ್ನದಲ್ಲಿ 5 ಅಂಕ ಸಂಪಾದಿಸಿದರು. ಮುಂಬಾ ಪರ ಅಭಿಷೇಕ್ ಸಿಂಗ್ ದಾಳಿ ಉತ್ತಮ ಮಟ್ಟದಲ್ಲಿತ್ತು (10 ಅಂಕ). ಇದರೊಂದಿಗೆ ಜೈಪುರ ಚರಣ ಕೊನೆಗೊಂಡಿತು. ಶನಿವಾರದಿಂದ ಪಂಚಕುಲ ಆವೃತ್ತಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.