ಹೊಸ ತಾಲೂಕಾದರೂ ತಪ್ಪದ ತಾಪತ್ರಯ

ಸಿರವಾರ ಕಟ್ಟಡದ್ದೇ ಚಿಂತೆ: ಬಾರದ ಅನುದಾನಬರೀ ಘೋಷಣೆಗೆ ಅಭಿವೃದ್ಧಿ ಸೀಮಿತಹಳೇ ತಾಲೂಕುಗಳಿಗೆ ಪೀಕಲಾಟ

Team Udayavani, Sep 28, 2019, 12:14 PM IST

28-Sepctember-7

ಮಹೇಶ ಪಾಟೀಲ
ರಾಯಚೂರು (ಸಿರವಾರ): ಕಳೆದೆರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ಹೊಸ ತಾಲೂಕುಗಳ ಸಾಲಿನಲ್ಲಿ ಜಿಲ್ಲೆಯ ಸಿರವಾರ ಕೂಡಾ ಇದೆ.

ತಾಲೂಕು ರಚನೆಯಾದಾಗ ಆ ಭಾಗದ ಜನರಲ್ಲಿ ಎಷ್ಟು ಖುಷಿಯಾಗಿತ್ತೋ ಈಗ ಅಷ್ಟೇ ಬೇಸರವೂ ಆವರಿಸಿದೆ.

ಸರ್ಕಾರ ನೂತನ ಸಿರವಾರ ತಾಲೂಕಿಗೆ ಅಗತ್ಯ ಹಣಕಾಸಿನ ನೆರವು ನೀಡಿಲ್ಲ. ನಾನಾ ಸಂಕಷ್ಟಗಳ ಮಧ್ಯೆ ಆಡಳಿತ ನಡೆಯುತ್ತಿದೆ.

2017ರ ಜುಲೈನಲ್ಲಿ ತಾಲೂಕು ಘೋಷಣೆಯಾಗಿದ್ದು, 2018ರ ಜನವರಿಯಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಯಿತು. ಆದರೆ, ತಹಶೀಲ್ದಾರ್‌ ಒಬ್ಬರನ್ನು ಬಿಟ್ಟರೆ ಮತ್ಯಾವುದೇ ಇಲಾಖೆಗಳಿಗೆ ಕಾಯಂ ಅಧಿಕಾರಿಗಳಿಲ್ಲ.

ಆಡಳಿತಾತ್ಮಕವಾಗಿ ಈ ಹಿಂದೆ ಹೇಗೆ ಜನ ದೂರದ ತಾಲೂಕಿಗೆ ಹೋಗಬೇಕಿತ್ತೋ ಈಗಲೂ ಅದೇ ಸನ್ನಿವೇಶ ಮುಂದುವರಿದಿದೆ. ಇದರಿಂದ ಹೊಸ ತಾಲೂಕು ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಜನರದ್ದು.

ಕಟ್ಟಡದ್ದೇ ಚಿಂತೆ: ಸಿರವಾರ ತಾಲೂಕು ಕೇಂದ್ರವಾಗಿ
ಮೇಲ್ದರ್ಜೆಗೇರಿದರೂ ತಹಶೀಲ್‌ ಕಚೇರಿಗೆ ಇಂದಿಗೂ
ಸ್ಥಳಾಭಾವ ನೀಗಿಲ್ಲ. ಹಿಂದಿನ ನಾಡ ಕಚೇರಿಯ ಶಿಥಿಲಾವಸ್ಥೆ ಕಟ್ಟಡದಲ್ಲೇ ಹೊಸ ತಾಲೂಕು ಕಾರ್ಯ ಕಲಾಪಗಳು ನಡೆಯುತ್ತಿವೆ. ಹೊಸ ತಾಲೂಕು ವ್ಯಾಪ್ತಿಗೆ 12 ಗ್ರಾಮ ಪಂಚಾಯಿತಿಗಳು, 2 ಜಿಪಂ ಕ್ಷೇತ್ರಗಳು ಮತ್ತು 59 ಗ್ರಾಮಗಳು ಒಳಗೊಂಡಿವೆ. ತಹಶೀಲ್ದಾರ ಹೊರತುಪಡಿಸಿ ಇನ್ಯಾವುದೇ ಇಲಾಖೆಗೆ ಕಾಯಂ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಹೀಗಾಗಿ ತಾಲೂಕು ಕೇಂದ್ರ ಘೋಷಣೆಗೂ ಮುನ್ನ ಹೇಗೆ ಕೆಲಸ ಕಾರ್ಯ ನಡೆದಿದ್ದವೋ ಇಂದಿಗೂ ಅದೇ ಮಾದರಿ ಮುಂದುವರಿದಿದೆ. ಹೊಸ ತಾಲೂಕು ಘೋಷಣೆಯ ಬಳಿಕ ಪಟ್ಟಣದಲ್ಲಿ ಸರ್ಕಾರದ ಎಲ್ಲ ಸೇವೆಗಳು ಸಿಗುತ್ತವೆ. ಪಟ್ಟಣವು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ನಿರಾಸೆ ಮೂಡಿದೆ.

ಅನುದಾನವೇ ಬಂದಿಲ್ಲ: ರಾಜ್ಯ ಸರ್ಕಾರ ಹೊಸ ತಾಲೂಕುಗಳನ್ನು ಘೋಷಿಸಿ, ಪ್ರತಿ ತಾಲೂಕಿಗೆ 2 ಕೋಟಿ ಅನುದಾನ ನೀಡುವುದಾಗಿ ತಿಳಿಸಿತ್ತು. ಆದರೆ, ಈವರೆಗೂ ಸಿರವಾರ ತಾಲೂಕಿಗೆ ಬಿಡಿಗಾಸು ಬಂದಿಲ್ಲ. ಅನುದಾನವೇ ಇಲ್ಲ ಎಂದ ಮೇಲೆ ಅಭಿವೃದ್ಧಿ ನಿರೀಕ್ಷಿಸುವುದಾದರೂ ಹೇಗೆ ಎಂಬುದು ತಾಲೂಕು ಹೋರಾಟ ಸಮಿತಿ ಪ್ರಶ್ನೆ. ಸಿರವಾರದಲ್ಲಿ ಈಗ ತಹಶೀಲ್ದಾರ್‌ ಕಚೇರಿ ಬಿಟ್ಟರೆ ಮತ್ಯಾವ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿಲ್ಲ.

ಇನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಕಟ್ಟಡಗಳನ್ನು ಮಾತ್ರ ಗುರುತಿಸಿದ್ದು, ಪ್ರಭಾರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಜನ ವಿಧಿ ಇಲ್ಲದೇ ಮುಂಚಿನಂತೆ ಪ್ರತಿಯೊಂದಕ್ಕೂ ಮಾನ್ವಿಗೆ ಓಡಾಡಬೇಕಿದೆ.

ಕಟ್ಟಡಗಳ ಕೊರತೆ: ನೂತನ ತಾಲೂಕಿನಲ್ಲಿ ಅನೇಕ
ಇಲಾಖೆಗಳು ಕಟ್ಟಡದ ಕೊರತೆಯಿಂದ ಸೇವೆ ಆರಂಭಿಸದೇ ಹಾಗೆಯೇ ಉಳಿದಿವೆ. ತಹಶೀಲ್ದಾರ್‌ ಕಚೇರಿ ಪ್ರಸ್ತುತ ಹಳೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅದರಲ್ಲಿ ತಹಶೀಲ್ದಾರ್‌ ಹಾಗೂ ಸಿಬ್ಬಂದಿಗೆ ಸ್ಥಳಾಭಾವವಿದೆ. ಈಗಾಗಲೇ ತಹಶೀಲ್‌ ಕಚೇರಿ ನಿರ್ಮಿಸಲು 8 ಎಕರೆ ಸ್ಥಳ ಗುರುತಿಸಿದ್ದು, ಅನುದಾನ
ಬಿಡುಗಡೆಗಾಗಿ ಕಾದು ಕೂರುವಂತಾಗಿದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.