ಸಾಗರದಲ್ಲಿ ಹೆಚ್ಚಾದ ಜ್ವರ: ಆಸ್ಪತ್ರೆಯಲ್ಲಿ ಕ್ಯೂ!
Team Udayavani, Sep 28, 2019, 12:50 PM IST
ಸಾಗರ: ಕಳೆದ 15-20 ದಿನಗಳಿಂದ ತಾಲೂಕಿನಾದ್ಯಂತ ವಿವಿಧ ರೀತಿಯ ಜ್ವರಗಳು ದಾಳಿ ನಡೆಸಿದ್ದು, ಅಕ್ಷರಶಃ ಕೆಲವು ಮನೆಗಳಲ್ಲಿನ ಸ್ಥಿತಿ ಆಸ್ಪತ್ರೆ ವಾರ್ಡ್ ನಂತಾಗಿದೆ. ಈ ಬಾರಿ ಜ್ವರ ಬಂದ ವ್ಯಕ್ತಿ ಜ್ವರದ ನಂತರ ಮೈ ಕೈ ನೋವು, ಸುಸ್ತು ಸೇರಿದಂತೆ ವಾರಗಟ್ಟಲೆ ಹಾಸಿಗೆ ಹಿಡಿಯುತ್ತಿದ್ದಾರೆ.
ನಗರದ ಕ್ಲಿನಿಕ್, ಆಸ್ಪತ್ರೆ ಹಾಗೂ ಲ್ಯಾಬ್ ಗಳ ಎದುರು ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ಈ ಜ್ವರದ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಜ್ವರದ ಪ್ರಕರಣಗಳು ಮಳೆ ನಿಂತು ಏಕಾಏಕಿ ಬೇಸಿಗೆ ಸೆಖೆ ನಿರ್ಮಾಣವಾಗಿರುವುದು, ವಿವಿಧೆಡೆ ನೀರು ನಿಂತ ಪರಿಣಾಮ ಸೊಳ್ಳೆ, ವೈರಸ್ ಗಳ ಸೃಷ್ಟಿಯಾಗಿರುವುದು ಕಾರಣ ಎಂದು ಅಂದಾಜಿಸಿದೆ.
ನಗರದಲ್ಲಿ ಫ್ಲೂ ಜ್ವರ, ಡೆಂಘೀ ಹಾಗೂ ಎಚ್1ಎನ್1ಗಳೂ ಇವೆ ಎಂದು ತಿಳಿಸಿದೆ. ಈ ವರ್ಷ ಈವರೆಗೆ 92 ಡೆಂಘೀ ಪ್ರಕರಣಗಳು ದಾಖಲಾಗಿವೆ. ಕೆಲವು ತಿಂಗಳ ಹಿಂದೆ ಓರ್ವ ವ್ಯಕ್ತಿಯ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಯಾವುದೇ ಸಾವು- ನೋವಿನ ಘಟನೆ ಜ್ವರ ಕಾರಣದಿಂದ ಸಂಭವಿಸಿಲ್ಲ ಎಂದು ತಿಳಿಸಿದೆ.
ಪ್ರಸ್ತುತ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿಯೇ ಕೆಲಸ ಮಾಡುತ್ತಿದೆ. ಸದ್ಯ ಎಚ್1ಎನ್1 ಪ್ರಕರಣಗಳ ಸಂಖ್ಯೆ ಕುಸಿದಿದೆ. ಆದರೆ ಡೆಂಘೀ ವರದಿಯಾಗುತ್ತಲೇ ಇವೆ. ಪೇಟೆಯ ಎಸ್‌ಎನ್ ನಗರ ಹಾಗೂ ಅಶೋಕ್ ನಗರಗಳನ್ನು ಸೂಕ್ಷ್ಮ ಎಂದು ಇಲಾಖೆ ಪರಿಗಣಿಸಿದ್ದು, ಈಗಾಗಲೇ ಈ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ತಾಲೂಕು ವೈದ್ಯಾಧಿ ಕಾರಿ ಡಾ| ಮುನಿ ವೆಂಕಟರಾಜು ತಿಳಿಸಿದ್ದಾರೆ.
ಡೆಂಘೀ ಸಾಧ್ಯತೆಗಳನ್ನು ಪರಿಗಣಿಸಿ ಈ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ನೀರು ನಿಂತು ಸೊಳ್ಳೆಗಳು ಸೃಷ್ಟಿಯಾಗುವುದನ್ನು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಜ್ವರದ ಪ್ರಕರಣ
ಕಂಡುಬಂದರೆ ತಕ್ಷಣ ಕೂಲಂಕಶ ತನಿಖೆ ನಡೆಸಲಾಗುತ್ತಿದೆ. ಜ್ವರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜನರಿಗೆ ನಿರಂತರವಾಗಿ ತಿಳುವಳಿಕೆ ನೀಡುವ ಕೆಲಸವೂ ನಡೆಯುತ್ತಿದೆ ಎಂದರು.
ತಾಪಂನಲ್ಲೇ ನಿಲ್ಲುವ ನೀರು!: ಮಾರಣಾಂತಿಕ ಡೆಂಘೀ, ಎಚ್1ಎನ್1 ಅಪಾಯ ಎದುರಾಗುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡುತ್ತದೆಯಾದರೂ ತಾಲೂಕು ಆಡಳಿತವನ್ನು ನೋಡಿಕೊಳ್ಳುವ ತಾಪಂ ಸಾಮರ್ಥ್ಯ ಸೌಧದ ಸಭಾಂಗಣದ ಛಾವಣಿಯ ಮೇಲೆ ಸದಾ ನೀರು ನಿಲ್ಲುತ್ತದೆ.
ತಾಪಂ ಆವರಣದಲ್ಲಿರುವ ಇನ್ನೊಂದು ಕಟ್ಟಡದ ಮೇಲೆ ಕೂಡ ನೀರು ನಿಲ್ಲುವ ದೃಶ್ಯವನ್ನು ಕಾಣಬಹುದು. ಜನರಿಗೆ ಜಾಗೃತಿ ಮೂಡಿಸುವ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಕಟ್ಟಡಗಳನ್ನು ಕೂಡ ಸೊಳ್ಳೆಗಳಾಗದಂತೆ ನೋಡಿಕೊಳ್ಳಬೇಕಲ್ಲವೇ
ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.