ಬಳ್ಳಾರಿಯಿಂದ ಪ್ರತ್ಯೇಕವಾಗಲಿರೋ ವಿಜಯನಗರ ನೂತನ ಜಿಲ್ಲೆ ಭೌಗೋಳಿಕವಾಗಿ ಹೇಗಿರಲಿದೆ?
Team Udayavani, Sep 28, 2019, 4:30 PM IST
ಗಡಿನಾಡು ಬಳ್ಳಾರಿ ವಿಭಜಿಸಿ ವಿಜಯನಗರ ಹೊಸ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಸಿದ್ಧತೆ ನಡೆಸುತ್ತಿದೆ. ಹೊಸಪೇಟೆಯನ್ನು ಕೇಂದ್ರೀಕರಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಕಳೆದ ಒಂದು ದಶಕದಿಂದ ಕೇಳಿಬರುತ್ತಿತ್ತು.
ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಹಂಪಿ ಹಾಗೂ ಹೊಸಪೇಟೆ ಪ್ರಮುಖ ಕೇಂದ್ರಗಳಾಗಿವೆ. ಚಾರಿತ್ರಿಕವಾಗಿ ಬಳ್ಳಾರಿಗೆ ಪ್ರಾಮುಖ್ಯತೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು, ಹೊಯ್ಸಳರ ನಿಯಂತ್ರಣದಲ್ಲಿ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಂಡಿತ್ತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಶಿರಗುಪ್ಪ, ಹೊಸಪೇಟೆ, ಸಂಡೂರು, ಕೊಟ್ಟೂರು, ಕಂಪ್ಲಿ, ಕುರಗೋಡು ಹಾಗೂ ಹರಪನಳ್ಳಿ ತಾಲೂಕು ಕೇಂದ್ರಗಳಾಗಿವೆ. ಬಳ್ಳಾರಿ ನಗರದ ಜನಸಂಖ್ಯೆ 2011ರ ಅಂಕಿಅಂಶದ ಪ್ರಕಾರ 4,10,445 ಆಗಿದೆ. ಬಳ್ಳಾರಿ ಗ್ರಾಮಾಂತರ 3,60,484 ಹಾಗೂ ಬಳ್ಳಾರಿ ಮೆಟ್ರೋ 7,70,929 ಜನಸಂಖ್ಯೆ ಹೊಂದಿದೆ. ಕರ್ನಾಟಕದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರು ಜಿಲ್ಲೆ ಇದಾಗಿದೆ.
ಹೊಸಪೇಟೆಯಲ್ಲಿ ಮೆದು ಕಬ್ಬಿಣ ತಯಾರಿಕೆ ಕಾರ್ಖಾನೆ, ಗಣಿಗಾರಿಕೆ, ಕಬ್ಬಿನ ಕಾರ್ಖಾನೆ, ರೈಲ್ವೆ ಜಂಕ್ಷನ್ ಹೊಂದಿದೆ. ಹೈದರಾಬಾದ್ ಕರ್ನಾಟಕದ ವಾಣಿಜ್ಯ ಕೇಂದ್ರಗಳಲ್ಲಿ ಹೊಸಪೇಟೆ ಮುಂಚೂಣಿಯಲ್ಲಿದೆ. ಸರಕಾರಿ ಜಾಗ, ಬಂಗಲೆಗಳು ಕೂಡಾ ನಗರದಲ್ಲಿದೆ. ವಿಶ್ವಪ್ರಸಿದ್ಧ ಹಂಪಿ, ಹಂಪಿ ಕನ್ನಡ ವಿವಿ ಕೂಡಾ ತಾಲೂಕು ವ್ಯಾಪ್ತಿಯಲ್ಲಿಯೇ ಬರುತ್ತದೆ.
ಹೊಸ ಜಿಲ್ಲೆ ಬೇಡಿಕೆ ಯಾಕಾಗಿ?
ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಹೂವಿನ ಹಡಗಲಿ ಸೇರಿದಂತೆ ಇತರ ತಾಲೂಕುಗಳ ಗ್ರಾಮಗಳು ಜಿಲ್ಲಾ ಕೇಂದ್ರದಿಂದ 153 ಕಿಲೋ ಮೀಟರ್ ಗಿಂತ ಹೆಚ್ಚು ದೂರದಲ್ಲಿದೆ. ಇದರಿಂದಾಗಿ ಆಡಳಿತಾತ್ಮಕ ಕೆಲಸ, ಕಾರ್ಯಗಳಿಗೆ ಓಡಾಡಲು ಜನರಿಗೆ ತುಂಬಾ ತೊಂದರೆಯಾಗುತ್ತಿತ್ತು ಎಂಬುದು ಪ್ರತ್ಯೇಕ ಜಿಲ್ಲಾ ರಚನೆಗಾಗಿ ಹೋರಾಡುತ್ತಿದ್ದ ಮಠಾಧೀಶರು, ರಾಜಕೀಯ ನಾಯಕರು ಅಭಿಪ್ರಾಯವ್ಯಕ್ತಪಡಿಸಿದ್ದರು.
ಹರಪನಹಳ್ಳಿ ಕೂಡಾ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರಿಂದ ಈ ತಾಲೂಕಿನ ಜನರಿಗೆ ಬಳ್ಳಾರಿ ಜಿಲ್ಲಾ ಕೇಂದ್ರ 192 ಕಿಲೋ ಮೀಟರ್ ದೂರವಾಗಲಿದೆ ಎಂಬುದು ಜನರ ಅಳಲಾಗಿತ್ತು.
ವಿಜಯನಗರ ಸಾಮ್ರಾಜ್ಯದ ನೆನಪಿಗಾಗಿ ವಿಜಯನಗರ ಎಂಬ ಹೆಸರನ್ನೇ ಇಡಬೇಕು ಎಂದು ಮನವರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಹರಪನಹಳ್ಳಿ, ಕೊಟ್ಟೂರು ಸೇರಿ ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಬೇಡಿಕೆ ಇಡಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಕುರುಗೋಡು, ಬಳ್ಳಾರಿ, ಸಂಡೂರು, ಸಿರಗುಪ್ಪ ತಾಲೂಕುಗಳು ಉಳಿಯಲಿದೆ. ಹೀಗಾಗಿ ಭೌಗೋಳಿಕ ಹಾಗೂ ಆಡಳಿತದ ದೃಷ್ಟಿಯಲ್ಲಿ ವಿಜಯನಗರ ಪ್ರತ್ಯೇಕ ಜಿಲ್ಲೆಯಾಗುವುದು ಸೂಕ್ತ ಎಂಬುದು ಹೋರಾಟಗಾರರ ಆಗ್ರಹವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.