ಈಡಿಸ್‌ ಈಜಿಪ್ಟೆ ಸೊಳ್ಳೆಯಿಂದ ಹರಡುವ ವೈರಲ್‌ ಸೋಂಕು ರೋಗ ಡೆಂಗ್ಯೂ


Team Udayavani, Sep 29, 2019, 5:09 AM IST

t-14

ಡೆಂಗ್ಯೂ ಜ್ವರವು ನಾಲ್ಕು ತೆರನಾದ ವೈರಸ್‌ (Den 1, Den 2, Den 3, Den 4)ಗಳಿಂದ ಬರುವ ಸಾಂಕ್ರಾಮಿಕ ರೋಗ. ಈಡೀಸ್‌ ಈಜಿಪ್ಟೆ„ ಎಂಬ ಸೋಂಕು ತಗುಲಿದ ಹೆಣ್ಣು ಸೊಳ್ಳೆ ಈ ರೋಗವನ್ನು ಒಬ್ಬ ವ್ಯಕ್ತಿಯಿಂದ ಮತೊಬ್ಬರಿಗೆ ಆಹಾರಕ್ಕಾಗಿ ರಕ್ತ ಹೀರುವಾಗ ಹರಡುತ್ತದೆ. ಈ ಈಡೀಸ್‌ ಸೊಳ್ಳೆಗಳು ಹೆಚ್ಚಾಗಿ ಮನೆಯಲ್ಲಿರುವ, ಮನೆಯ ಸುತ್ತಮುತ್ತಲಿರುವ ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್‌ಗ‌ಳು, ಡ್ರಮ್‌ಗಳು, ಬಕೆಟ್‌ಗಳು, ಹೂವಿನ ಕುಂಡಗಳಲ್ಲಿ, ಪಿಂಗಾಣಿವಸ್ತುಗಳು, ಒಡೆದ ಬಾಟಲಿಗಳು, ಬಯಲಿನಲ್ಲಿ ಬಿಸಾಡಿದ ಟೈರುಗಳು, ಒಡೆದ ಎಳನೀರು ಚಿಪ್ಪುಗಳಲ್ಲಿ ಮತ್ತು ಇತರ ಸಣ್ಣ ಸಣ್ಣ ನಿಂತ ನೀರು ಸಂಗ್ರಹಣಾ ತಾಣಗಳಲ್ಲಿ ಉತ್ಪತ್ತಿಯಾಗುತ್ತವೆ.

ಒಂದು ಸಮುದಾಯದ ಮನೆ ಮನೆಗಳಲ್ಲಿ ಜನರಿಗೆ ಡೆಂಗ್ಯೂ ಕಾಯಿಲೆ ಹರಡುತ್ತಿದ್ದರೆ ಆ ಮನೆ, ಮನೆಗಳ ಪರಿಸರದಲ್ಲಿಯೇ ಈಡೀಸ್‌ ಈಜಿಪ್ಟೆ„ ಸೊಳ್ಳೆಗಳು ಉತ್ಪಾದನೆಗೊಂಡು ಮನೆಮಂದಿಗೆ ರೋಗ ಹರಡುತ್ತಿರುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಈಡೀಸ್‌ ಈಜಿಪ್ಟೆ„ ಸೊಳ್ಳೆಗಳು ಕೇವಲ 400ರಿಂದ 500 ಮೀಟರ್‌ ದೂರ ಮಾತ್ರ ಹಾರ ಬಲ್ಲವು. ಆದ್ದರಿಂದ ತಮ್ಮ ತಮ್ಮ ಮನೆಯ ಸುತ್ತಮುತ್ತ 500 ಮೀಟರ್‌ ಪರಿಸರ ಸ್ವತ್ಛವಾಗಿಟ್ಟುಕೊಂಡರೆ, ನೀರು ನಿಲ್ಲದಂತೆ ನೋಡಿಕೊಂಡರೆ ಆ ಪ್ರದೇಶದಲ್ಲಿ ಡೆಂಗ್ಯೂ ಹರಡುವುದನ್ನು ನಿಯಂತ್ರಣಕ್ಕೆ ತರಬಹುದು. ಮಲೇರಿಯಾಕಾರಕ ಅನಾಫಿಲಿಸ್‌ ಸೊಳ್ಳೆಗಳು ಸಾಮಾನ್ಯವಾಗಿ 3ರಿಂದ 5 ಕಿಲೋಮೀಟರ್‌ ದೂರ ಹಾರಬಲ್ಲವು.

ಸಾಮಾನ್ಯವಾಗಿ ಈ ಸೊಳ್ಳೆಗಳು ನಿಂತ ತಿಳಿ ನೀರಲ್ಲಿ ಮೊಟ್ಟೆ ಇಟ್ಟ ಅನಂತರ 7 ರಿಂದ 10 ದಿನಗಳಲ್ಲಿ ಮರಿ ಸೊಳ್ಳೆಗಳು ಹೊರಬರುತ್ತವೆ. ಕೆಲವು ಪ್ರತಿಕೂಲ ವಾತಾವರಣದ ಸಂದರ್ಭಗಳಲ್ಲಿ ನೀರಿನ ಸಂಪರ್ಕ ಇಲ್ಲದಿದ್ದರೂ ವರ್ಷಕ್ಕೂ ಹೆಚ್ಚು ಕಾಲ ಈ ಮೊಟ್ಟೆಗಳು ಹಾಗೇ ಉಳಿಯಬಲ್ಲವು ಹಾಗೂ ಅನಂತರ ಮಳೆ ಬಂದಾಗ, ನೀರಿನ ಆಶ್ರಯ ಒದಗಿದಾಗ ಮೊಟ್ಟೆಗಳು ಬಲಿತ ಸೊಳ್ಳೆಗಳಾಗಿ ಹೊರಬರಬಹುದು. ಸೊಳ್ಳೆಗಳು ಡೆಂಗ್ಯೂ ಜ್ವರ ಇರುವ ರೋಗಿಗೆ ಕಚ್ಚಿದಾಗ ಅವು ಸೊಂಕಿಗೆ ಒಳಪಡುತ್ತವೆ ಹಾಗೂ ಈ ಸೊಂಕಿಗೊಳಪಟ್ಟ ಸೊಳ್ಳೆಗಳು ಅನಂತರದ 4 ರಿಂದ 10 ದಿನಗಳಲ್ಲಿ ಮತ್ತೂಬ್ಬ ಆರೋಗ್ಯವಂತ ವ್ಯಕ್ತಿಗೆ ರೋಗ ಹರಡಲು ಸಮರ್ಥವಾಗುತ್ತವೆ. ಸಾಮಾನ್ಯವಾಗಿ ಈಡೀಸ್‌ ಸೊಳ್ಳೆಗಳು ವಾತಾವರಣದ ಸನ್ನಿವೇಶ ಅವಲಂಬಿಸಿ ಸರಾಸರಿ 30 ದಿನಗಳ ಕಾಲ ಬದುಕಬಲ್ಲವು. ಹಾಗಾಗಿ ಹುಟ್ಟಿದ ಮೊದಲನೇ ದಿನಕ್ಕೆ ಅದು ಸೊಂಕಿಗೊಳಪಟ್ಟರೆ ಅದರ ಜೀವಿತ ಕಾಲದಾದ್ಯಂತ ಸುಮಾರು 20ರಿಂದ 25 ದಿನ ಸಮುದಾಯದಲ್ಲಿ ಡೆಂಗ್ಯೂ ಸೊಂಕು ಹರಡಬಲ್ಲವು. ಕೆಲವು ಸಲ ಸೊಂಕಿಗೊಳಗಾಗಿರುವ ಸೊಳ್ಳೆಗಳ ಮೊಟ್ಟೆಗಳ ಮೂಲಕ ಹುಟ್ಟುವ ಸೊಳ್ಳೆಗಳು ಸೊಂಕಿನಿಂದಲೇ ಕೂಡಿದ್ದು ಅವುಗಳು ಹುಟ್ಟಿನಿಂದಲೇ ರೋಗ ಹರಡಬಲ್ಲವು.

ಈಜಿಪ್ಟೆ„ ಸೊಳ್ಳೆಗಳು ನಿಂತ ನೀರಲ್ಲಿ ಸಂತಾನೋತ್ಪತ್ತಿ ಮಾಡುವುದರಿಂದ ಮಳೆ ಬಿರುಸಾಗಿ ಬರುತ್ತಿರುವಾಗ,

ಪರಿಸರದಲ್ಲಿ ಮಳೆ ನೀರು ರಭಸವಾಗಿ ಹರಿಯುತ್ತಿರುವಾಗ ಸೊಳ್ಳೆಗಳ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಳೆ ನಿಂತ ಮೇಲೆ ಪರಿಸರದಲ್ಲಿ ಮಳೆ ನೀರು ಹರಿವು ನಿಂತ 15- 20 ದಿನಗಳಲ್ಲಿ (ಮೇ- ಜೂನ್‌ ಹಾಗೂ ಸಪ್ಟೆಂಬರ್‌- ಅಕ್ಟೋಬರ್‌) ಆ ಸಮುದಾಯದಲ್ಲಿ ಈ ತೆರನಾದ ಸೊಳ್ಳೆಗಳಿದ್ದರೆ ಹಾಗೂ ಡೆಂಗ್ಯೂ ಖಾಯಿಲೆ ಇರುವ ರೋಗಿಗಳಿದ್ದರೆ, ರೋಗ ಬೇಗನೆ ಹರಡುವುದು. ಆದರೆ ಮಳೆ ಬರುತ್ತಿರುವಾಗಲೂ ಪರಿಸರದಲ್ಲಿ ಎಲ್ಲಿಯಾದರೂ ಮಳೆ ನೀರಿನ ಹರಿವಿನ ಸಂಪರ್ಕವಿಲ್ಲದ, ನಿಂತ ನೀರಿದ್ದರೆ (ಮನೆಯೊಳಗಿನ ಹೂವಿನ ಕುಂಡ, ಏರ್‌ ಕೂಲರ್‌, ಮನಿ ಪ್ಲಾಂಟ್‌ ಚಟ್ಟಿಗಳು) ಅಲ್ಲಿ ವರ್ಷವಿಡೀ ಸೊಳ್ಳೆಗಳ ಉತ್ಪಾದನೆಯಾಗುತ್ತಾ ವರ್ಷವಿಡೀ ಸಮುದಾಯದಲ್ಲಿ ರೋಗ ಹರಡುತ್ತಿರಬಹುದು. ಪ್ರಯೋಗಕ್ಕಾಗಿ ಡೆಂಗ್ಯೂ ಸೊಳ್ಳೆ ಇರುವ ಪ್ರದೇಶದ ಒಂದು ಮನೆಯೊಳಗೆ ಒಂದು ಲೋಟದಲ್ಲಿ ನೀರು ತುಂಬಿಟ್ಟು ಒಂದು ವಾರದ ವರೆಗೆ ಹಾಗೆಯೇ ಲೋಟವನ್ನು ಅಲುಗಾಡಿಸದೇ ಇಟ್ಟರೆ ಅದರಲ್ಲಿ ಸೊಳ್ಳೆ ಮರಿಗಳು (ಲಾರ್ವಾ) ಬೆಳೆಯುವುದನ್ನು ಬರಿಗಣ್ಣಲ್ಲಿ ನೋಡಬಹುದು. ಈ ಸೊಳ್ಳೆಗಳು 20ರಿಂದ 30 ಡಿಗ್ರಿ ವಾತಾವರಣದ ಉಷ್ಣತೆಯಲ್ಲಿ ಹಾಗೂ 60ರಿಂದ ಶೇ.80 ಹವೆಯ ಆದ್ರìತೆಯಲ್ಲಿ ಚೆನ್ನಾಗಿ ಉತ್ಪತ್ತಿಗೊಳ್ಳುತ್ತವೆ.

ಡೆಂಗ್ಯೂ ಲಕ್ಷಣಗಳು
ಡೆಂಗ್ಯೂ ಹರಡುವ ಈಡೀಸ್‌ ಈಜಿಪ್ಟೆ„ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿಗೆ ಕಚ್ಚುವಂತಹವು. ಸೊಂಕಿರುವ ಸೊಳ್ಳೆ ಕಚ್ಚಿದ 5ರಿಂದ 7 ದಿನಗಳ ಅನಂತರ ರೋಗದ ಪ್ರಾಥಮಿಕ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಈ ರೋಗವನ್ನು ಕೆಳಕಂಡ ಕೆಲವು ಲಕ್ಷಣಗಳಿಂದ ಗುರುತಿಸಬಹುದು.

1. ಇದ್ದಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು.
2. ತೀವ್ರ ತರನಾದ ತಲೆನೋವು -ಹೆಚ್ಚಾಗಿ ಹಣೆಯ ಮುಂಭಾಗದಲ್ಲಿ ಕಾಣಿಸುವುದು
3. ಕಣ್ಣಿನ ಹಿಂಭಾಗದ ನೋವು -ಕಣ್ಣಿನ ಚಲನೆಯಿಂದ ನೋವು ಹೆಚ್ಚಾಗುತ್ತದೆ,
4. ಮೈಕೈ ನೋವು ಮತ್ತು ಕೀಲು ನೋವು, ವಾಕರಿಕೆ ಮತ್ತು ವಾಂತಿ.
5. ಮೈ ಮೇಲೆ ನವಿರಾದ ಕೆಂಪು ಬಣ್ಣದ ತಡಿಕೆ ಕಾಣಿಸಿಕೊಳ್ಳುವುದು.

ಪ್ಲೇಟ್‌ಲೆಟ್‌ ಕುಸಿತ
ಈ ರೋಗ ಉಂಟಾದಾಗ ಕೆಲವರಲ್ಲಿ ರಕ್ತ ಕಣಗಳು ಮುಖ್ಯವಾಗಿ ಪ್ಲೇಟ್‌ಲೆಟ್‌ಗಳು ಏಕಾಏಕಿ ಕಡಿಮೆಯಾಗಿ ದೇಹದ ವಿವಿಧ ಭಾಗಗಳಿಂದ (ಬಾಯಿ, ವಸಡು, ಮೂಗು, ಕರುಳು, ಚರ್ಮ) ರಕ್ತಸ್ರಾವ ಉಂಟಾಗಬಹುದು (DHF) ಮತ್ತು ಕೆಲವರಲ್ಲಿ ಹೆಚ್ಚು ಹೆಚ್ಚಾಗಿ ರಕ್ತನಾಳಗಳಿಂದ ಪ್ಲಾಸ್ಮಾ ದ್ರವ ಸೋರಿಕೆ ಉಂಟಾಗಿ ರೋಗಿಗೆ ನಿರ್ಜಲೀಕರಣ (De- Hydration) ಉಂಟಾಗಬಹುದು. ಆಗ ರೋಗಿಗೆ ರಕ್ತದ ಒತ್ತಡ ಕಡಿಮೆಯಾಗಿ ಶಾಕ್‌ನಂತಹ ಲಕ್ಷಣಗಳು, ಸ್ಥಿತಿ ಉಂಟಾಗಬಹುದು (DSS).

ಮಕ್ಕಳು, ಗರ್ಭಿಣಿಯರು, ವೃದ್ಧರು ಹೃದಯರೋಗ ಇರುವವರಿಗೆ, ಸ್ಟಿರಾಯ್ಡ ಹಾಗೂ NSAI ಚಿಕಿತ್ಸೆಯಲ್ಲಿರುವವರಿಗೆ ಕರುಳಿನಲ್ಲಿ ಹುಣ್ಣಿನಿಂದ ಬಳಲುತ್ತಿರುವವರಿಗೆ, ಇತರ ಯಾವುದೇ ರಕ್ತಸ್ರಾವ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಡೆಂಗ್ಯೂ ಗಂಭೀರವಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಂಥವರು ಹೆಚ್ಚು ಜಾಗ್ರತೆ ವಹಿಸುವುದು ಅಗತ್ಯ.

ಸಾಮಾನ್ಯವಾಗಿ ಡೆಂಗ್ಯೂ ಬಾಧಿತರಲ್ಲಿ ಶೇ.10ಕ್ಕಿಂತ
ಕಡಿಮೆ ಜನರಿಗೆ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಬಹುದು ಹಾಗೂ ಶೇ.1ಕ್ಕಿಂತ ಕಡಿಮೆ ರೋಗಿಗಳಿಗೆ ಅದು ಮಾರಣಾಂತಿಕವಾಗಬಹುದು.

ಈ ಮೇಲ್ಕಂಡ ಸಾಮಾನ್ಯ ಡೆಂಗ್ಯೂ ಜ್ವರದ ಲಕ್ಷಣಗಳ ಜತೆಗೆ ಕೆಲವೊಮ್ಮೆ, ಕೆಲವರಿಗೆ ಕೆಳಗಿನ ಯಾವುದಾದರೂ ತೀವ್ರವಾದ ಲಕ್ಷಣಗಳು ಕಂಡುಬರಬಹುದು.
1. ತೀವ್ರ ತೆರನಾದ ಮತ್ತು ಒಂದೇ ಸಮನೆ ಹೊಟ್ಟೆ ನೋವು.
2. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು.
3. ರಕ್ತ ಸಹಿತ ಅಥವಾ ರಕ್ತರಹಿತವಾದ ವಾಂತಿಯು ಪದೇ ಪದೇ ಆಗುವುದು.
4. ಡಾಂಬರಿನಂತಹ ಕಪ್ಪು ಮಲ ವಿಸರ್ಜನೆ.
5. ವಿಪರೀತ ಬಾಯಾರಿಕೆ (ಬಾಯಿ ಒಣಗುವುದು)
6. ತಣ್ಣನೆಯ ಬಿಳುಚಿಕೊಂಡ ಚರ್ಮ.
7. ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು.

ಡೆಂಗ್ಯೂ ವಿಧಗಳು
ಡೆಂಗ್ಯೂ ಖಾಯಿಲೆಯಲ್ಲಿ ಸಾಮಾನ್ಯವಾಗಿ ಮೂರು ಹಂತ-ವಿಧಗಳಿವೆ.

1. ಸಾಮಾನ್ಯ ಡೆಂಗ್ಯೂ ಜ್ವರ
2. ಡೆಂಗ್ಯೂ ಹಿಮರೆಜಿಕ್‌ ಫೀವರ್‌ (ಈಏಊ)- ದೇಹದಲ್ಲಿ ಅಲ್ಲಲ್ಲಿ ರಕ್ತಸ್ರಾವ ಆಗುವುದು.
3. ಡೆಂಗ್ಯೂ ಶಾಕ್‌ ಸಿಂಡ್ರೋಮ್‌ (ಈಖಖ)- ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು.

ಡೆಂಗ್ಯೂ ಸೊಂಕು ತಗಲಿದವರಿಗೆ ಸಾಮಾನ್ಯವಾಗಿ ಕಂಡುಬರುವುದು ಸಾಮಾನ್ಯ ಡೆಂಗ್ಯೂ ಜ್ವರ. ಡೆಂಗ್ಯೂ ಜ್ವರ DEN1 ವೈರಾಣುವಿನಿಂದ ಬಂದಿದ್ದರೆ ಬೇಗ ಗುಣವಾಗಬಹುದು. ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೂಮ್ಮೆ Den2 ವೈರಾಣು ಮತ್ತು Den3  ವೈರಾಣು ಅಥವಾ Den 4 ವೈರಾಣುವಿನಿಂದ ಸೋಂಕು ಬಂದರೆ ರೋಗದ ಲಕ್ಷಣಗಳು ತೀವ್ರವಾಗಬಹುದು. ಹೆಚ್ಚಿನ ಸಾಮಾನ್ಯ ಡೆಂಗ್ಯೂ ಪೀಡಿತರಿಗೆ ಡೆಂಗ್ಯೂ ಸೋಂಕು ತಗುಲಿರುವ ಅರಿವಿಲ್ಲದೇ ತನ್ನಿಂದ ತಾನೇ ಕೇವಲ ಜ್ವರದ ಮಾತ್ರೆ, ವಿಶ್ರಾಂತಿ ಸಾಕಷ್ಟು ಪ್ರಮಾಣದ ದ್ರವರೂಪದ ಆಹಾರ ಸೇವನೆಯಿಂದ ಕಡಿಮೆಯಾಗಬಹುದು.

ರೋಗ ಚಿಕಿತ್ಸೆ
ಡೆಂಗ್ಯೂ, ಮಲೇರಿಯಾ, ಇಲಿಜ್ವರ, ಮೆದುಳು ಜ್ವರ, ಎಚ್‌1ಎನ್‌1, ಮಂಗನ ಕಾಯಿಲೆ ಅಂತಹ ಖಾಯಿಲೆಗಳಿರುವ ಪ್ರದೇಶದಲ್ಲಿ ಜ್ವರ ಬಂದಲ್ಲಿ ನಿರ್ಲಕ್ಷ್ಯ ಮಾಡಬಾರದು. ಡೆಂಗ್ಯೂ ರೋಗದ ಚಿಕಿತ್ಸೆಗೆ ನಿರ್ದಿಷ್ಟವಾದ ಔಷಧ ಇರುವುದಿಲ್ಲ. ಜ್ವರಕ್ಕೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್‌ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು. ಡೆಂಗ್ಯೂ ಜ್ವರ ಶಂಕಿತರಿಗೆ ಆಸ್ಪಿರಿನ್‌ ಮತ್ತು ಬ್ರೂಫಿನ್‌, ಡಿಕ್ಲೊಫೆನಾಕ್‌, ಮಾತ್ರೆ- ಮದ್ದು ನೀಡಬಾರದು. ಈ ಔಷಧಗಳು ಡೆಂಗ್ಯೂ ಇರಬಹುದಾದ ರೋಗಿಗಳಲ್ಲಿ ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸಬಹುದು.

ಜ್ವರ ಬಂದ ಎರಡು ದಿನಗಳಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಜ್ವರದ ಮಾತ್ರೆಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ರಕ್ತ ತಪಾಸಣೆ ಮಾಡಿಸಬೇಕು. ಕಂಪ್ಲೀಟ್‌ ಬ್ಲಿಡ್‌ ಕೌಂಟ್‌, ಪ್ಲೇಟ್‌ಲೆಟ್‌ ಕೌಂಟ್‌ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ವೈದ್ಯರಿಗೆ ರೋಗಿಗೆ ಬಂದಿರುವ ರೋಗದ ಸ್ವರೂಪದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಮಲೇರಿಯಾ ಬಾಧಿತ ಪ್ರದೇಶಗಳಲ್ಲಿ ಮಲೇರಿಯಾ ಪರೀಕ್ಷೆ, ಇಲಿ ಜ್ವರ ಇರುವ ಪ್ರದೇಶಗಳಲ್ಲಿ ಅದಕ್ಕೆ ಪ್ರತ್ಯೇಕ ರಕ್ತ ಪರೀಕ್ಷೆ ಮಾಡುವುದು ಕೂಡ ಅಗತ್ಯ. ಈ ಪರೀಕ್ಷೆಗಳಲ್ಲಿ ಯಾವುದೇ ಕಾಯಿಲೆ ಪತ್ತೆಯಾಗದಿದ್ದಲ್ಲಿ ಹಾಗೂ ಜ್ವರ ಕಡಿಮೆಯಾಗದಿದ್ದರೆ ಎರಡು- ಮೂರು ದಿನ ಬಿಟ್ಟು ಪುನಃ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ರಕ್ತಸ್ರಾವ ಅಥವಾ ಇತರ ಯಾವುದೇ ತೀವ್ರವಾದ ಲಕ್ಷಣಗಳು ಯಾವುದೇ ಸಮಯದಲ್ಲಿ ಕಂಡು ಬಂದಲ್ಲಿ ರೋಗಿಯನ್ನು ಅತೀ ತುರ್ತಾಗಿ ವಿಶೇಷ ಸೌಲಭ್ಯಗಳಿರುವ ಆಸ್ಪತ್ರೆಗೆ ದಾಖಲಿಸಿ ಡೆಂಗ್ಯೂ ರಕ್ತ ಪರೀಕ್ಷೆ ಮಾಡಿ ಸರಿಯಾದ ಚಿಕಿತ್ಸೆ (ಮುಖ್ಯವಾಗಿ ನಿರ್ಜಲೀಕರಣ ತಡೆಯುವುದು, ರಕ್ತಸ್ರಾವ ತಡೆಯುವುದು, ರಕ್ತದ ಒತ್ತಡವನ್ನು ಅಗತ್ಯ ಪರಿಧಿಯಲ್ಲಿಡುವುದು) ಒದಗಿಸಬೇಕು. ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದ್ರವರೂಪದ ಆಹಾರವನ್ನು ಹೆಚ್ಚು ಹೆಚ್ಚು ಕುಡಿಯಲು ಕೊಡಬೇಕು.

ಡೆಂಗ್ಯೂ ರೋಗದ ನಿಖರ ಪತ್ತೆಗೆ ಜ್ವರ ಬಂದ 5 ದಿನದ ಒಳಗಾದರೆ ಎನ್‌ಎಸ್‌ಐ ಪರೀಕ್ಷೆ, 5 ದಿನದ ಅನಂತರವಾದರೆ IgM, IgG, ELISA, RT- PC ಪರೀಕ್ಷೆಗಳು ಸಹಾಯಕವಾಗಿವೆ. ಈ ಪರೀಕ್ಷೆಗಳನ್ನು ಎಲ್ಲ ಜ್ವರ ಪೀಡಿತರಿಗೆ ನೇರವಾಗಿ ಮಾಡಿಸುವ ಅಗತ್ಯವಿಲ್ಲ. ಏಕೆಂದರೆ ಈ ಪರೀಕ್ಷೆಗಳು ದುಬಾರಿ ಹಾಗೂ ಎಲ್ಲ ಕಡೆಗಳಲ್ಲಿ ಲಭ್ಯವಿಲ್ಲ.

ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ,
ಅಡಿಶನಲ್‌ ಪ್ರೊಫೆಸರ್‌, ಕಮ್ಯೂನಿಟಿ ಮೆಡಿಸಿನ್‌ ವಿಭಾಗ,
ಕೆಎಂಸಿ ಮಣಿಪಾಲ.

ಟಾಪ್ ನ್ಯೂಸ್

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.