ಚಂದ್ರಯಾನ-2 ಯಶಸ್ಸಿನ ದಿಕ್ಸೂಚಿ, ವೈಫಲ್ಯವಲ್ಲ: ಡಾ| ಕಸ್ತೂರಿರಂಗನ್
Team Udayavani, Sep 29, 2019, 5:47 AM IST
ಮಂಗಳೂರು: ಇತ್ತೀಚೆಗೆ ಇಸ್ರೊ ನಡೆಸಿದ ಚಂದ್ರಯಾನ-2 ವಿಫಲ ಎಂದು ಭಾವಿಸಬಾರದು. ಇದು ನಮ್ಮ ಮುಂದಿನ ಯೋಜನೆಗಳಿಗೆ ಹಲವಾರು ಅನುಭವಗಳನ್ನು, ಹೊಸ ದಿಕ್ಸೂಚಿಗಳನ್ನು ನೀಡಿದ್ದು ಭವಿಷ್ಯದಲ್ಲಿ ಯಶಸ್ಸಿಗೆ ಮೆಟ್ಟಿಲಾಗಲಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ| ಕೆ. ಕಸ್ತೂರಿರಂಗನ್ ಅಭಿಪ್ರಾಯಪಟ್ಟರು.
ನಗರದ ಕಾರ್ಯಕ್ರಮವೊಂದರಲ್ಲಿ ಶನಿವಾರ “ಸ್ಪೇಸ್-ಆ್ಯನ್ ಇನೋಟಿವ್ ಫಾರ್ ಸರ್ವಿಂಗ್ ಮ್ಯಾನ್‌ಕೈಂಡ್’ ವಿಚಾರದಲ್ಲಿ ಅವರು ಉಪನ್ಯಾಸ ನೀಡಿದರು. ಚಂದ್ರಯಾನ-2 ಒಂದು ಕ್ಲಿಷ್ಟಕರ ಯೋಜನೆಯಾಗಿತ್ತು. ಇದರ ಹಿಂದೆ ವಿಜ್ಞಾನಿಗಳ ಬಹಳಷ್ಟು ಶ್ರಮವಿತ್ತು. ಚಂದ್ರನನ್ನು ತಲುಪಲು ಇನ್ನೇನು ಎರಡು ಕಿ.ಮಿ. ದೂರದಲ್ಲಿ ಯಶಸ್ಸಿನ ಸನಿಹದಲ್ಲಿರುವಾಗ ಹಿನ್ನಡೆ ಅನುಭವಿಸಬೇಕಾಯಿತು. ಇದು ನಿಶ್ಚಿತವಾಗಿಯೂ ಸೋಲು ಅಲ್ಲ ಎಂದರು.
ಆರ್ಯಭಟದಿಂದ ಹಿಡಿದು ಇತ್ತೀಚೆಗಿನ ಚಂದ್ರಯಾನ-2ರ ವರೆಗೆ ಬಾಹ್ಯಾಕಾಶ ಯೋಜನೆಗಳಿಗೆ ದೇಶದ ರಾಜಕೀಯ ವ್ಯವಸ್ಥೆ ಬೆಂಬಲವನ್ನು ನೀಡುತ್ತ ಬಂದಿದೆ. ಇದರ ಫಲವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಯಶಸ್ಸು ಕಾಣಲು ಸಾಧ್ಯವಾಯಿತು. ಚಂದ್ರಯಾನ-2ರ ನಿರ್ಣಾಯಕ ಕ್ಷಣಗಳಲ್ಲಿ ಮತ್ತು ಅದರ ಫಲಿತಾಂಶದ ಸಂದರ್ಭದಲ್ಲಿ ಪ್ರಧಾನಿ ಮೋದಿ ತನ್ನ ಬೆಂಬಲ ಮತ್ತು ಪ್ರೇರಣದಾಯಕ ಮಾತುಗಳಿಂದ ವಿಜ್ಞಾನಿ ಸಮುದಾಯವನ್ನು ಪ್ರೋತ್ರಾಹಿಸಿದರು ಎಂದು ಕಸ್ತೂರಿ ರಂಗನ್ ಹೇಳಿದರು.
ಹಲವಾರು ಸವಾಲುಗಳ ಮಧ್ಯೆಯೂ ಭಾರತದ ಬಾಹ್ಯಾಕಾಶ ಅದ್ಭುತ ಯಶಸ್ಸು ಸಾಧಿಸಿದೆ. ಈ ನಿಟ್ಟಿನಲ್ಲಿ ವಿಕ್ರಂ ಸಾರಾಭಾç, ಪ್ರೊ| ಸತೀಶ್ ಧವನ್, ಪ್ರೊ| ಯು.ಆರ್. ರಾವ್ ಅವರಂತ ಶ್ರೇಷ್ಠ ವಿಜ್ಞಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಭವಿಷ್ಯದಲ್ಲಿ ಆನೇಕ ಮಹತ್ವದ ಯೋಜನೆಗಳನ್ನು ಇಸ್ರೊ ರೂಪಿಸಿದೆ. 2020ರಲ್ಲಿ ಸೂರ್ಯ ಗ್ರಹದ ಅಧ್ಯಯನಕ್ಕೆ ಆದಿತ್ಯ ಉಪಗ್ರಹ, ಜಿಎಸ್‌ಎಲ್‌ವಿ ಎಂಕೆ-3 2022 ರಲ್ಲಿ ಮಾನವಸಹಿತ ಗಗನಯಾನ ಮುಂತಾದ ಮಹತ್ತರ ಯೋಜನೆಗಳು ಪ್ರಗತಿಯಲ್ಲಿವೆ ಎಂದವರು ವಿವರಿಸಿದರು.
ಬಾಹ್ಯಾಕಾಶ ಎಂಬುದು ನಿಗೂಢವಾದುದು. ಅದೊಂದು ಅಚ್ಚರಿ. ಈವರೆಗೆ ಆಗಿರುವ ಸಂಶೋಧನೆ ಶೇ.4ರಷ್ಟು ಮಾತ್ರ. ಶೇ.96ರಷ್ಟು ಇನ್ನೂ ಬಾಕಿ ಇದೆ ಎಂದರು.
ಸೋಮಯಾನ ಯೋಜನೆ ಚಂದ್ರಯಾನ-1 ಆಯಿತು
ಚಂದ್ರಗ್ರಹ ಯೋಜನೆಯ ಪ್ರಸ್ತಾವನೆ ರೂಪಿಸಿ ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಗೆ ನೀಡಲಾಯಿತು. ಇದನ್ನು ಪರಿಶೀಲಿಸಿ, ಇದಕ್ಕೆ ಸೋಮಯಾನದ ಬದಲು ಚಂದ್ರಯಾನ ಎಂದು ಹೆಸರಿಟ್ಟರೆ ಚೆಂದ ಎಂದು ಸಲಹೆ ಮಾಡಿದರು ಎಂದು ಡಾ| ಕಸ್ತೂರಿರಂಗನ್ ಚಂದ್ರಯಾನ ಹೆಸರಿನ ರಹಸ್ಯವನ್ನು ಬಿಚಿrಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.