ಜಲಶಕ್ತಿ ಅಭಿಯಾನ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಲಿ
Team Udayavani, Sep 29, 2019, 11:54 AM IST
ಬ್ಯಾಡಗಿ: ಜಾಗತೀಕರಣದ ಬೆನ್ನತ್ತಿರುವ ಮಾನವ ಪರಿಸರ ಹಾಳು ಮಾಡಿ ಯಥೇಚ್ಚವಾಗಿ ನೀರು ಪೋಲು ಮಾಡುತ್ತಿದ್ದಾನೆ. ನೀರು ಇದ್ದರೆ ಮಾತ್ರ ಭೂಮಿಯ ಮೇಲೆ ಬದುಕು ಎಂಬುದನ್ನ ಮರೆತಿರುವಂತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಲಶಕ್ತಿ ಅಭಿಯಾನದ ಐಇಸಿ ಚಟುವಟಿಕೆಯಡಿ ಜಲಮೂಲ ರಕ್ಷಣೆಗೆ ಜಾಗೃತಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನದಂಥ ಯೋಜನೆಗಳು ಯಶಸ್ವಿಗೊಳ್ಳಲು ಸಾರ್ವಜನಿಕರ ಪಾತ್ರ ಅತ್ಯವಶ್ಯವಾಗಿದೆ. ನೀರಿನ ಸಂರಕ್ಷಣೆ ಕೇವಲ ಪುರಸಭೆ ಕೆಲಸ ಎಂದು ಕೈಕಟ್ಟಿಕೂರದೆ ಯೋಜನೆ ಹಿಂದಿನ ಮಹತ್ವ ಅರಿತು ನೀರು ಉಳಿಸಲು ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು.
ಸೈಕಲ್ ಜಾಥಾ: ಜಲಶಕ್ತಿ ಅಭಿಯಾನದ ಕುರಿತಂತೆ ನಡೆದ ಸೈಕಲ್ ಜಾಥಾ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಲಮೂ ರಕ್ಷಣೆ ಹಾಗೂ ಮಳೆ ಕೊಯ್ಲಿನ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಪುರಸಭೆ ವ್ಯವಸ್ಥಾಪಕ ಎನ್.ಟಿ ಹೊಸಮನಿ, ಹರೀಶಕುಮಾರ ಕೆ., ಎಂ.ಟಿ. ಯಲ್ಲಣ್ಣನವರ, ತಬಸುಮಬಾನು, ಮಾಲತೇಶ ಹಳ್ಳಿ, ರಾಜು ಮಡಿವಾಳರ, ಎಂ.ಎಚ್.ಭೋವಿ, ಜಿ.ಎಸ್. ವರದ, ಕೆ.ವೀರಾಚಾರಿ, ಸೌಭಾಗ್ಯ ಬಳಿಗಾರ, ಕವಿತಾ ಸಂಕಣ್ಣನವರ, ರೋಹಿಣಿ ಗೊಲ್ಲರ ಪ್ರತಾತ ಗಂಗಮ್ಮನವರ, ಪರಶುರಾಮ ಹರಿಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.