ನಾಡ ಹಬ್ಬ ದಸರೆಗೆ ನಾಂದಿ ಹಾಡಿದ್ದು ಕುಮ್ಮಟ ದುರ್ಗ


Team Udayavani, Sep 29, 2019, 12:24 PM IST

kopala-tdy-2

ಗಂಗಾವತಿ: ನಾಡಹಬ್ಬ ಮಹಾನವಮಿಯನ್ನು ನಾಡಿನಾದ್ಯಂತ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಹಾನವಮಿಯನ್ನು ನಾಡಹಬ್ಬವಾಗಿ ಆಚರಿಸಲು ನಾಂದಿ ಹಾಡಿದ್ದೇ ಕಂಪಿಲರಾಯನ ಕುಮ್ಮಟದುರ್ಗ ಗಂಡುಗಲಿ ಕುಮಾರ ರಾಮನ ರಾಜ್ಯದಲ್ಲಿ ಎಂದು ಇತಿಹಾಸಕಾರರ ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿ.ಶ. 13ನೇ ಶತಮಾನದಲ್ಲಿ ಕಂಪಿಲರಾಯನ ಕುಮ್ಮಟದುರ್ಗದಲ್ಲಿ ಮಹಾನವಮಿ ಹಬ್ಬವನ್ನು ವೈಭವಯುತವಾಗಿ ಆಚರಿಸಲಾಗುತ್ತಿತ್ತು. ಪ್ರತಿ ಯುದ್ಧ ಸಂದರ್ಭದಲ್ಲೂ ಗ್ರಾಮದೇವತೆಯನ್ನು ಆರಾಧಿಸುವ ಮೂಲಕ ಸಮರಕ್ಕೆ ದೇವತೆ ಕೃಪೆ ಬೇಡುತ್ತಿದ್ದರು. ಕುಮ್ಮಟದುರ್ಗ ಆರಾಧ್ಯ ದೈವ ಹೇಮಗುಡ್ಡದ ದುರ್ಗಾ ಪರಮೇಶ್ವರಿಯನ್ನು ಪೂಜಿಸಲಾಗುತ್ತಿತ್ತು. ಕುಮ್ಮಟದುರ್ಗದ ಅರಸರ ನಂತರ ವಿಜಯನಗರದ ಸಾಮಂತರಾದ ಕನಕಗಿರಿ ಪಾಳೆಗಾರರು ಹೇಮಗುಡ್ಡದಲ್ಲಿರುವ ದುರ್ಗಾ ಪರಮೇಶ್ವರಿ, ಲಕ್ಷೀ ನರಸಿಂಹ ಮತ್ತು ಈಶ್ವರ ದೇಗುಲಗಳನ್ನು ಜೀರ್ಣೋದ್ಧಾರ ಮಾಡಿ ಪ್ರತಿ ವರ್ಷ ಶರನ್ನವರಾತ್ರಿಯ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿ ಆರಾಧನೆ ಮಾಡಿ ಕೊನೆ ದಿನ ನಾಡಿನ ಸಾಂಸ್ಕೃತಿಕ ಕಲೆಯ ಮೆರವಣಿಗೆಯೊಂದಿಗೆ ಆನೆ ಮೇಲೆ ಅಂಬಾರಿಯಲ್ಲಿ ದೇವಿಯ ಮೂರ್ತಿ ಮೆರವಣಿಗೆ ಮಾಡುತ್ತಿದ್ದರು.

ಕುಮ್ಮಟ ದುರ್ಗವನ್ನು ದೆಹಲಿ ಸುಲ್ತಾನರು ನಾಶ ಮಾಡಿದ ನಂತರ 1336ರಲ್ಲಿ ಆನೆಗೊಂದಿಯಲ್ಲಿ ವಿಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಮಹಾನವಮಿ ಹಬ್ಬ ಆಚರಣೆ ಸ್ಥಗಿತವಾಗಿತ್ತು. ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ನಂತರ ಸಂಗಮ ವಂಶದ ದೊರೆಗಳ ಕಾಲದಲ್ಲಿ ಮಹಾನವಮಿಯನ್ನು ಪುನಃ ವಿಜೃಂಭಣೆಯಿಂದ ಆಚರಿಸಲಾಯಿತು. 9 ದಿನಗಳ ಕಾಲ ಈಗಿನ ಹಾಳು ಹಂಪಿಯಲ್ಲಿರುವ ಮಹಾನವಮಿ ದಿಬ್ಬದ ಹತ್ತಿರ ಶರನ್ನವರಾತ್ರಿ ಕಾರ್ಯಕ್ರಮಗಳು ಜರುಗುತ್ತಿದ್ದವು.

ಯುದ್ಧಕಲೆ ಪ್ರದರ್ಶನ, ಶಸ್ತ್ರಾಸ್ತ್ರಗಳ ಪೂಜೆ ನಿರಂತರ ನಡೆದು ಕೊನೆಯ ದಿನ ಸೀಮೋಲ್ಲಂಘನ ಮಾಡಿ ಬನ್ನಿ ವೃಕ್ಷದ ಎಲೆಗಳನ್ನು ಪರಸ್ಪರರು ವಿನಿಯಮಯ ಮಾಡಿಕೊಳ್ಳುವ ಪದ್ಧತಿ ಇಂದಿಗೂ ಇದೆ. ವಿಜಯನಗರ ಸಾಮ್ರಾಜ್ಯ ಪತನ ನಂತರ ಮೈಸೂರಿನಲ್ಲಿ ನಿರಂತರ ಮಹಾನವಮಿ ದಸರಾ ಎಂದು ಆಚರಿಸಲಾಗುತ್ತಿದೆ.

ಕುಮ್ಮಟದುರ್ಗದಲ್ಲಿ ಆರಂಭವಾದ ಮಹಾನವಮಿ ದಸರಾ ಹಬ್ಬ ಇಂದಿಗೂ ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಕುಮ್ಮಟದುರ್ಗ ಆರಾಧ್ಯ ದೇವತೆ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಾಲಯವನ್ನು ನಾಲ್ಕು ದಶಕಗಳ ಹಿಂದೆ ಮಾಜಿ ಸಂಸದ ಎಚ್‌.ಜಿ. ರಾಮುಲು ಕುಟುಂಬದವರು ಜೀರ್ಣೋದ್ಧಾರ ಮಾಡಿ ಅಂದಿನಿಂದ ಪ್ರತಿವರ್ಷ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 9 ದಿನಗಳ ಕಾಲ ದೇವಿ ಪುರಾಣ, ರಥೋತ್ಸವ, ಹೋಮ ಹವನ ನಡೆಸಲಾಗುತ್ತದೆ. ಕೊನೆಯ ದಿನ ಬೆಳಗ್ಗೆ ಉಚಿತ ಸಾಮೂಹಿಕ ವಿವಾಹ, ಸಂಜೆ ನಾಡಿನ ವಿವಿಧ ಕಲಾ ತಂಡಗಳ ಮಧ್ಯೆ ಆನೆಯ ಮೇಲೆ ಅಂಬಾರಿಯಲ್ಲಿ ದೇವಿಯ ಮೂರ್ತಿಯನ್ನಿರಿಸಿ ಕಲಾ ಮೆರವಣಿಗೆ ನಡೆಯುತ್ತದೆ. ಆನೆಗೊಂದಿಯ ವಾಲೀಕಿಲ್ಲಾದಲ್ಲಿರುವ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರಿಯನ್ನು ಆಚರಿಸಲಾಗುತ್ತಿದೆ. ಇಲ್ಲಿಯೂ ಕೊನೆಯ ದಿನ ಆನೆ ಅಂಬಾರಿ ಮೆರವಣಿಗೆ ಜರುಗುತ್ತದೆ.

700 ವರ್ಷಗಳ ಹಿಂದೆ ಆರಂಭವಾದ ಮಹಾನವಮಿ ದಸರಾ ಹಬ್ಬ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವುದು ಅಗತ್ಯ. ಸರಕಾರ ಮೈಸೂರು ದಸರಾ ಹಬ್ಬಕ್ಕೆ ಕೊಡುವ ಮಹತ್ವ ಹೇಮಗುಡ್ಡ ಮತ್ತು ಆನೆಗೊಂದಿ ವಾಲೀಕಿಲ್ಲಾ ಶರನ್ನವರಾತ್ರಿ ಹಬ್ಬಕ್ಕೂ ನೀಡಬೇಕು.

 

-ಕೆ.ನಿಂಗಜ್ಜ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.