ನಕಲಿ ಪಾರ್ಕಿಂಗ್ ಟಿಕೆಟ್: ಪ್ರಮಾಣಕ್ಕೆ ಸವಾಲು
ಸರ್ಕಾರಕ್ಕೆ ತೆರಿಗೆ ಹಣ ವಂಚನೆ ಅಪರಾಧ: ಶಾಸಕ ಹರತಾಳು ಹಾಲಪ್ಪ ಅಭಿಮತ
Team Udayavani, Sep 29, 2019, 3:25 PM IST
ಸಾಗರ: ಈಚೆಗೆ ಶರಾವತಿ ಹಿನ್ನೀರಿನ ಸಿಗಂದೂರು ಪಾರ್ಕಿಂಗ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬ ನಕಲಿ ರಶೀದಿ ಮುದ್ರಿಸಿ ಸರ್ಕಾರದ ತೆರಿಗೆ ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ತಾವು ಏನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಪವಿತ್ರ ಸ್ಥಳದಲ್ಲಿಯೇ ಕಳ್ಳತನವಾಗುತ್ತದೆ ಎಂಬುದು ದುರಂತ ಎಂದು ಶಾಸಕ ಎಚ್. ಹಾಲಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಎಡಜಿಗಳೆಮನೆ ಗ್ರಾಪಂ ಎಸ್‌ಟಿ ಕಾಲೋನಿಯಲ್ಲಿ ಶನಿವಾರ ವಿಶೇಷ ಘಟಕ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ತೆರಿಗೆ ಹಣ ವಂಚನೆಯಂತಹದ್ದು ದೊಡ್ಡ ಅಪರಾಧ. ಕೆಲವರು ಇಂತಹವರನ್ನು ರಕ್ಷಣೆ ಮಾಡಲು ಮುಂದಾಗಿರುವುದು ನಿಜಕ್ಕೂ ದುರದೃಷ್ಟಕರ. ಮಹಜರು ಮಾಡಿ ಕಳ್ಳತನವನ್ನು ಮಾಡುವುದಿಲ್ಲ. ಆರೋಪಿಗಳು ಅದೇ ಸಿಗಂದೂರಿನ ದೇವಿಯ ಮುಂದೆ ನಿಂತು ತಾವು ಅಪರಾಧ ಮಾಡಿಲ್ಲ ಎಂದು ಪ್ರಮಾಣ ಮಾಡಲಿ ನೋಡೋಣ
ಎಂದು ಸವಾಲು ಹಾಕಿದರು.
ಗುತ್ತಿಗೆದಾರರು ಟೆಂಡರ್‌ಗಿಂತ ಕಡಿಮೆ ದರಕ್ಕೆ ಕಾಮಗಾರಿ ಗುತ್ತಿಗೆ ಹಿಡಿಯುವುದರಿಂದ ಗುಣಮಟ್ಟದ ಕಾಮಗಾರಿ ನಡೆಸುವುದರಲ್ಲಿ ಅನುಮಾನಗಳಿವೆ. ಸರ್ಕಾರ ಎಸ್‌ಆರ್ ಬೆಲೆ ಕೊಡಲು ಸಿದ್ಧವಿದೆ. ಗುತ್ತಿಗೆದಾರರು ಅಭಿವೃದ್ಧಿಯಾಗುವುದನ್ನು ಹಾಗೂ ಇದೇ ಸಮಯದಲ್ಲಿ ಗುಣಮಟ್ಟದ ಕೆಲಸ ಆಗುವುದನ್ನು ನಾವು ಬಯಸುತ್ತೇವೆ. ಸರ್ಕಾರ ಹಣ ಕೊಡಲು ಸಿದ್ಧ ಇರುವಾಗ ಟೆಂಡರ್‌ನಲ್ಲಿ ಕಡಿಮೆ ಮೊತ್ತ ನಮೂದಿಸಿ ಕೆಲಸ ಹಾಳು ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದರು.
ಈ ಗುದ್ದಲಿ ಪೂಜೆ, ಉದ್ಘಾಟನೆ, ಸಮಾರಂಭಗಳು ಅಗತ್ಯವೇನಲ್ಲ. ಆದರೂ ನಾನು ಇವುಗಳಲ್ಲಿ ಪಾಲ್ಗೊಳ್ಳುವುದರಿಂದ ಜನ ಸಂಪರ್ಕ ಲಭ್ಯವಾಗುತ್ತದೆ ಹಾಗೂ ವಿವಿಧ ಸ್ಥಳೀಯ ಸಮಸ್ಯೆಗಳ ನೇರ ಅನುಭವವಾಗುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ.
ಕೆಲಸವನ್ನು ಚುರುಕುಗೊಳಿಸಲು ಕೂಡ ಇದರಿಂದ ಸಹಾಯವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಗುಣಮಟ್ಟದ ಕೆಲಸ ಆಗುವಂತೆ ನಿಗಾವಹಿಸಬೇಕು ಎಂದರು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 60 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಂಕಳಲೆಯ ಸಂಪರ್ಕ ರಸ್ತೆಯ ಉಳಿದ 300 ಮೀ. ಕಾಮಗಾರಿಯನ್ನು ನಗರಸಭೆ ಅನುದಾನದಲ್ಲಿ ಮಾಡಲಾಗುತ್ತದೆ.
ಮಂಕಳಲೆ ಹಾಗೂ ಕರ್ಕಿಕೊಪ್ಪದ ಸಂಪರ್ಕ ರಸ್ತೆಯ ಕರ್ಕಿಕೊಪ್ಪ ಭಾಗದ ಡಾಂಬರೀಕರಣಕ್ಕೆ ಅನುದಾನ ಕೊಡಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳುತ್ತದೆ. ಈ ರಸ್ತೆಗಳ ಕೆಲಸಗಳು ಮೇ ಅಥವಾ ಜೂನ್ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ ಮಾತನಾಡಿ, ವಿಪರೀತವಾಗಿ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ. ಶಾಸಕರು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸಮೀಪದ ಬಾಳೆಗೆರೆಯಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಮೂಲಿಕಾವನ ನಿರ್ಮಾಣ ಮಾಡಲಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಇದು ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ. ಎಡಜಿಗಳೇಮನೆಯಲ್ಲಿ ಯಾತ್ರಿನಿವಾಸ ಕಟ್ಟಡ ನಿರ್ಮಾಣ ಮಾಡಿದ್ದು ಈತನಕ ಲೋಕಾರ್ಪಣೆಯಾಗಿಲ್ಲ. ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಗ್ರಾಪಂ ಅಧ್ಯಕ್ಷ ಎಂ.ಡಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷೆ ಸುಭದ್ರ ಗಣಪತಿ, ಸದಸ್ಯರಾದ ಪ್ರಕಾಶ್, ಪದ್ಮಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಇನ್ನಿತರರು ಇದ್ದರು. ಮುರಳಿ ಮಂಕಳಲೆ ಸ್ವಾಗತಿಸಿದರು. ಗಿರೀಶ್ ಹಕ್ರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.