ಇನ್ನು ದಿಲ್ಲಿ-ವೈಷ್ಣೋದೇವಿ ಪ್ರಯಾಣಕ್ಕೆ ಕೇವಲ 8 ಗಂಟೆ ಸಾಕು!
Team Udayavani, Sep 29, 2019, 5:22 PM IST
ಹೊಸದಿಲ್ಲಿ: ವೈಷ್ಣೋದೇವಿ-ದಿಲ್ಲಿ ಮಧ್ಯೆ ದೇಶದಲ್ಲೇ ಅತಿ ವೇಗದ ರೈಲು ಟ್ರೈನ್ 18 ‘ವಂದೇ ಭಾರತ್ ಎಕ್ಸ್ಪ್ರೆಸ್’ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಅ.5ರಿಂದ ರೈಲು ಯಾನ ಶುರುವಾಗಲಿದೆ.
ಇದಕ್ಕೆ ಪೂರಕವಾಗಿ ಐ.ಆರ್.ಸಿ.ಟಿ.ಸಿ. ವೆಬ್ಸೈಟ್ನಲ್ಲಿ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದೆ. ಅ.3ರಿಂದ ಟ್ರೈನ್ 18ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹಸಿರು ನಿಶಾನೆ ತೋರಲಿದ್ದಾರೆ. ದಿಲ್ಲಿ-ಕಟ್ರಾ ಮಧ್ಯೆ ರೈಲು ಸಂಚರಿಸಲಿದೆ. ವೈಷ್ಣೋದೇವಿಗೆ ಅತಿ ಹತ್ತಿರದ ರೈಲು ನಿಲ್ದಾಣ ಇದಾಗಿದೆ.
ಎಂಜಿನ್ ರಹಿತ, ಸೆಮಿ ಹೈ ಸ್ಪೀಡ್ ರೈಲು ಇದಾಗಿದ್ದು, ಇನ್ನು ಪ್ರಯಾಣಕ್ಕೆ ಕೇವಲ 8 ಗಂಟೆ ತೆಗೆದುಕೊಳ್ಳಲಿದೆ. ಸದ್ಯ ಈ ದೂರವನ್ನು ಕ್ರಮಿಸಲು ರೈಲು 12 ಗಂಟೆ ಅಥವಾ ಅದಕ್ಕೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ.
ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡಲು ಅನುಮತಿ ಇದ್ದರೂ, ಕಟ್ರಾ-ದಿಲ್ಲಿ ಮಧ್ಯೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಒಟ್ಟು 16 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ಎರಡು ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು 12 ಚೇರ್ ಕಾರ್ ಬೋಗಿಗಳನ್ನು ಹೊಂದಿರಲಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಈ ರೈಲು ಈಗಾಗಲೇ ಜನಮೆಚ್ಚುಗೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್ ಹತ್ಯೆ; ಇಬ್ಬರು ಪೊಲೀಸರ ಬಂಧನ
Modi ಸರಕಾರ 2 ವರ್ಷ ಇರುವುದೇ ಅನುಮಾನ: ಸಂಜಯ್ ರಾವತ್
ಪತಿ-ಪತ್ನಿ ಜಗಳದಲ್ಲಿ ಬಾವಿಗೆ ಹಾರಿದ ಪತಿ… ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ದುರ್ಮರಣ
Dense Fog… ರಸ್ತೆ ಕಾಣದೆ ಟ್ರಕ್ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ
ವಿಶ್ವದಾದ್ಯಂತ ಜೆನ್ ಬೀಟಾಪೀಳಿಗೆ ಯುಗಾರಾಂಭ! ಹೊಸ ವರ್ಷದ ಮೊದಲ ದಿನ 3 ಲಕ್ಷ ಮಕ್ಕಳ ಜನನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಯಾಂಡಲ್ವುಡ್ಗೆ ಪ್ರಿಯಾಂಕಾ ಸೋದರ ಎಂಟ್ರಿ
ಜ.26-30: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.