ರೈತರ ಭೂಮಿಗೆ ವೈಜ್ಞಾನಿಕ ದರ ನೀಡಿ

ಹೆದ್ಧಾರಿಗಾಗಿ ಭೂಮಿ ನೀಡಿದ ರೈತರ ಸಭೆಯಲ್ಲಿ ಜಿಪಂ ಸದಸ್ಯ ಶರತ್‌ ಕೃಷ್ಣ ಮೂರ್ತಿ ಆಗ್ರಹ

Team Udayavani, Sep 29, 2019, 5:35 PM IST

29-Sepctember-25

ಕಡೂರು: ಪಟ್ಟಣದ ಬಳಿ ಹಾದು ಹೋಗುವ 206 ಬೈಪಾಸ್‌ ರಸ್ತೆಗೆ ಭೂ ಸ್ವಾಧಿಧೀನ ಪ್ರಕ್ರಿಯೆ
ನಡೆದಿದ್ದು, ಪರಿಹಾರ ಧನ ಅವೈಜ್ಞಾನಿಕವಾಗಿದೆ. ಹಾಗಾಗಿ, ಜಿಲ್ಲಾ ಧಿಕಾರಿಗಳು ಸಮಾಲೋಚನಾ ಸಭೆ ಕರೆದು ಭೂಮಿ ಕಳೆದುಕೊಳ್ಳುವ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಯಗಟಿ ಜಿಪಂ ಸದಸ್ಯ ಶರತ್‌ ಕೃಷ್ಣಮೂರ್ತಿ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಭೂಮಿ ಕಳೆದುಕೊಂಡ ರೈತರ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡಿರುವ ಜಮೀನುಗಳು ಕಸಬಾ ಹೋಬಳಿಯ ತಂಗಲಿ, ಮಲ್ಲಪ್ಪನಹಳ್ಳಿ, ಕೆ.ತಿಮ್ಮಾಪುರ, ಮಲ್ಲೇಶ್ವರ, ತುರುವನಹಳ್ಳಿ, ಉಳ್ಳಿನಾಗರೂ ಗ್ರಾಮ ಮತ್ತು ಬೀರೂರು ಕಾವಲು ಕಂದಾಯ ಗ್ರಾಮಗಳಾಗಿವೆ. ಈ ಗ್ರಾಮಗಳು ಕಡೂರು ಪುರಸಭೆ ವ್ಯಾಪ್ತಿಯಿಂದ ಒಂದುವರೆ ಕಿ.ಮೀ. ಒಳಗೆ ಇವೆ. ಕೆ.ತಿಮ್ಮಾಪುರ ಗ್ರಾಮದಲ್ಲಿ ವಶಪಡಿಸಿಕೊಂಡಿರುವ ಆಸ್ತಿಯಲ್ಲಿ ಪ್ರತಿ ಚ.ಮೀಟರ್‌ಗೆ 485 ರೂ. ಮೂಲ ದರಕ್ಕೆ ಲೆಕ್ಕ ಹಾಕಿ ಕೆಲವು ರೈತರಿಗೆ ಪರಿಹಾರ ನಿಗ ಪಡಿಸಿ ಪಾವತಿ ಸಹ ಮಾಡಲಾಗಿದೆ. ಆದರೆ, ಕೆ.ತಿಮ್ಮಾಪುರ
ಆಸ್ತಿಯಿಂದ ಸುಮಾರು 100 ಮೀ. ಸಮೀಪ ಇರುವ ಮಲ್ಲಪ್ಪನಹಳ್ಳಿ ಗ್ರಾಮದ ಆಸ್ತಿಗಳಿಗೆ ಪ್ರಾಧಿಕಾರದವರು ಸುಮಾರು 323 ರೂ. (ಪ್ರತಿ ಚ.ಮೀ.ಗೆ)ಮತ್ತು ಮಲ್ಲೇಶ್ವರ ಗ್ರಾಮದ ಆಸ್ತಿಗಳಿಗೆ 293 ರೂ. ಮೂಲ ದರ ನಿಗದಿ ಪಡಿಸಿ ಪಾವತಿ ಮಾಡಿರುವ ಅನೇಕ ಉದಾಹರಣೆ
ಗಳಿವೆ ಎಂದು ತಿಳಿಸಿದರು.

ಇಲ್ಲಿ ಕೇವಲ 100 ಮೀ. ಅಂತರಕ್ಕೆ ದರ ನಿಗದಿಯಲ್ಲಿ ವ್ಯತ್ಯಾಸವಾಗಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ಅವೈಜ್ಞಾನಿಕ ದರಗಳಿಂದ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಈ ಬಗ್ಗೆ ವಿಶೇಷ ಭೂ ಸ್ವಾ ಧೀನಾಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈ ರೀತಿಯ ತೊಂದರೆಗಳು ತಂಗಲಿ, ಮಲ್ಲಪ್ಪನಹಳ್ಳಿ, ಮಲ್ಲೇಶ್ವರ, ತುರುವನಹಳ್ಳಿ, ಬೀರೂರು ಕಾವಲು ಗ್ರಾಮಗಳಲ್ಲಿ ಕಂಡು ಬಂದಿವೆ. ಇದಕ್ಕೆ ಪರಿಹಾರ ಅಥವಾ ಸಮಂಜಸವಾದ ಉತ್ತರವನ್ನು ಯಾರ ನೀಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಿದ್ದು, ರೈತರಿಗೆ ಸಮಗ್ರ ಮಾಹಿತಿ ನೀಡುವ ಮತ್ತು ಸಾರ್ವಜನಿಕ ಸಭೆಗಳು ಸಹ ನಡೆದಿಲ್ಲ. ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು, ಸಂಸದರ ಸಭೆ ಕರೆದು ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ರೈತ ಹಿರಿಯಣ್ಣ ಮಾತನಾಡಿ, ಭೂ ಸ್ವಾಧೀ ನಕ್ಕೆ ಒಳಪಡುವ ತೆಂಗು, ಅಡಕೆಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ. ದರ ನಿಗ ದಿಪಡಿಸುವಲ್ಲಿ ವ್ಯತ್ಯಾಸ ಹಾಗೂ ಅನ್ಯಾಯವಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ರೈತರು ಸಿದ್ಧರಿದ್ದು, ಕೂಡಲೇ ಕಡೂರು ಪಟ್ಟಣದಲ್ಲಿ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದರು. ಅಲ್ಲದೆ, ಸರಕಾರ ಅಡಕೆ ಮರ ಒಂದಕ್ಕೆ 10,400 ರೂ. ನಿಗದಿ  ಮಾಡಿದೆ. ತೆಂಗಿನ ಮರ ಒಂದಕ್ಕೆ 25 ಸಾವಿರ ರೂ. ನಿಗದಿ  ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಪ್ರತಿ ಅಡಕೆ ಮರದ ಆಯಸ್ಸು
ಕನಿಷ್ಟ 80 ವರ್ಷಗಳೆಂದು ಅಂದಾಜಿಸಬಹುದಾಗಿದೆ.

ಇದರಂತೆ ಒಂದು ಅಡಕೆ ಮರಕ್ಕೆ 75 ಸಾವಿರ ದಿಂದ 1.5 ಲಕ್ಷ ರೂ. ನಿಗದಿಪಡಿಸಬೇಕು. ಪ್ರತಿ
ತೆಂಗಿನ ಮರಕ್ಕೆ 3 ಲಕ್ಷ ರೂ. ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಎಪಿಎಂಸಿ ನಿರ್ದೇಶಕ ಲಕ್ಕಣ್ಣ ಮಾತನಾಡಿ, 2016(ಕಂದಾಯ)ರಲ್ಲಿ ಜಮೀನಿಗೆ ಇದ್ದ ದರವನ್ನೇ ಈಗಲೂ ನಿಗದಿಪಡಿಸಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಇವೆಲ್ಲ ಪಿತಾರ್ಜಿತ ಆಸ್ತಿಗಳಾಗಿದ್ದು, ವ್ಯವಹಾರ ಹೆಚ್ಚಿಗೆ ನಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿಲ್ಲ ಎಂದರು.

ಮಲ್ಲೇಶ್ವರ ಗ್ರಾಮದ ಒಂದು ಎಕರೆ ಭೂಮಿಗೆ 13 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಪುರಸಭೆ ವ್ಯಾಪ್ತಿಗೆ ಸೇರುವುದರಿಂದ ಈ ಜಮೀನನ್ನೇ ನಿವೇಶನಗಳಾಗಿ ಮಾರ್ಪಡಿಸಿದರೆ ಲಕ್ಷಾಂತರ ರೂ. ರೈತರಿಗೆ ದೊರೆಯಲಿದೆ. ಇಂತಹ ಪ್ರಕರಣಗಳಿದ್ದರೆ ಡಿಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಬೇಕೆಂದು ರೈತರಿಗೆ ಕರೆ ನೀಡಿದರು. ಕಡೂರು
ಪುರಸಭೆ ಸದಸ್ಯ ಈರಳ್ಳಿ ರಮೇಶ್‌, ತೋಟದ ಮನೆ ಮೋಹನ್‌, ದಂಡವತಿ ಬಾಬಣ್ಣ, ಪೇಟೆಯ ತಮ್ಮಯಣ್ಣ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.