ತಾಯಿ-ಮಕ್ಕಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಸಚಿವ ಶ್ರೀರಾಮುಲು
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ವಿಭಾಗ ಉದ್ಘಾಟನೆ
Team Udayavani, Sep 29, 2019, 6:45 PM IST
ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯನ್ನು ತಾಯಿ-ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಜತೆಗೆ ಅವಶ್ಯ ವೈದ್ಯರು, ಸಿಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿ ರಾಜ್ಯದ ಮಾದರಿ ಸರಕಾರಿ ಆಸ್ಪತ್ರೆಯನ್ನಾಗಿಸ
ಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಅವರು ಶನಿವಾರ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ವತಿಯಿಂದ 6 ಕೋ.ರೂ. ವೆಚ್ಚದಲ್ಲಿ ಕುಂದಾಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬಳಿ ನಿರ್ಮಾಣಗೊಂಡ 150 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ದಿ| ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ, 3 ದಿನದ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಯೊಳಗೆ ಕಾಲಿಟ್ಟ ಬಳಿಕ ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ ಇರುವ ವೈದ್ಯರ ಕೊರತೆ ನೀಗಿಸಲು, ಈ ಹಿಂದೆ ಇದ್ದ ಕೆಪಿಎಸ್‌ಸಿ ನೇಮಕಾತಿ ಪದ್ಧತಿ ರದ್ದು ಮಾಡಿ, ಆರೋಗ್ಯ ಇಲಾಖೆಯ ಮೂಲಕವೇ ನೇಮಕ ಮಾಡಿಕೊಳ್ಳಲಾಗುವುದು. ಎನ್‌ಆರ್‌ಎಚ್‌ಎಂ ಯೋಜನೆಯಡಿ ಕಾರ್ಯನಿರ್ವಹಿಸುವ ಶುಶ್ರೂಷಕಿ ಯರನ್ನು ಹೊರತುಪಡಿಸಿ ಕನಿಷ್ಠ ವೇತನ ಪಡೆದುಕೊಳ್ಳುವ ಶುಶ್ರೂಷಕಿಯರ ವೇತನವನ್ನು 17,500 ರೂ.ಗೆ ಹೆಚ್ಚಿಸಲಾಗುವುದು. ಆಯಾಗಳ ಸೇವೆ ಖಾಯಂ ಮಾಡಬೇಕು ಎನ್ನುವ ಬೇಡಿಕೆಯಿದ್ದು, ಈ ಕುರಿತು ಸಿಎಂ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನ್ಯಾಯ ಕೊಡಿಸಲಾಗುವುದು ಎಂದರು.
ಮಾದರಿ ವ್ಯಕ್ವಿತ್ವ
ಇಲ್ಲಿನ ಜನರ ಅನುಕೂಲಕ್ಕಾಗಿ, ಗರ್ಭಿಣಿಯರ ಪ್ರಯೋಜನಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಸಲವತ್ತುಗಳನ್ನೊಳಗೊಂಡ ಕಟ್ಟಡ ನಿರ್ಮಿಸಿಕೊಟ್ಟ ಜಿ. ಶಂಕರ್ ಅವರದು ಮಾದರಿ ಹಾಗೂ ಅನುಕರಣೀಯ ವ್ಯಕ್ತಿತ್ವ ಎಂದು ಶ್ಲಾ ಸಿದರು.
ನಿಯಮ ಸರಳಗೊಳಿಸಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಬಡವರ ಅನುಕೂಲಕ್ಕಾಗಿ ಅನುಷ್ಠಾನಕ್ಕೆ ತಂದಆಯುಷ್ಮಾನ್ ಯೋಜನೆ ಕೆಲವು ನಿಯಮಾವಳಿಗಳಿಂದಾಗಿ ಶೇ. 50ರಷ್ಟುಪ್ರಯೋಜನವಾಗಿಲ್ಲ. ಅದನ್ನು ಇನ್ನಷ್ಟು ಸರಳಗೊಳಿಸಬೇಕು ಎಂದು ಆಗ್ರಹಿಸಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಪ್ರಸ್ತಾವನೆಗೈದರು. ಶಾಸಕರಾದ ರಘುಪತಿ ಭಟ್, ಬಿ.ಎಂ. ಸುಕುಮಾರ ಶೆಟ್ಟಿ, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಕುಂದಾಪುರ ತಾಲೂಕು ಪಂಚಾ ಯ ತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಎಸಿ ಕೆ. ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆಸ್ಪತ್ರೆ ಆರೋಗ್ಯಾಧಿ ಕಾರಿ ಡಾ| ರಾಬರ್ಟ್ ಉಪಸ್ಥಿತರಿದ್ದರು.ಸತೀಶ್ ಎಂ. ನಾಯಕ್ ಸ್ವಾಗತಿಸಿ, ಸದಾನಂದ ಬಳ್ಕೂರು ವಂದಿಸಿದರು. ಅಶೋಕ ತೆಕ್ಕಟ್ಟೆ ನಿರೂಪಿಸಿದರು.
ನಗುವಿನಿಂದ ಸ್ವಾಗತಿಸಿ…
ರೋಗಿಗಳು ಬಂದಾಗ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬಂದಿಯಂತೆ ಸರಕಾರಿ ಆಸ್ಪತ್ರೆಗೂ ರೋಗಿಗಳು ಬಂದಾಗ ನಗುಮುಖದಿಂದ ಸ್ವಾಗತಿಸಿ. ಆಗ ಅವರ ಅನಾರೋಗ್ಯ ಅರ್ಧ ವಾಸಿಯಾಗುತ್ತದೆ. ರೋಗಿಗಳಿಗೆ ಸ್ಪಂದಿಸದ ಬಗ್ಗೆ ದೂರು ಬಂದರೆ ಸುಮ್ಮನಿರಲಾರೆ. ಸರಕಾರಿ ಹಾಗೂ ಖಾಸಗಿ ಎರಡು ಕಡೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಬಗ್ಗೆ ಗಮನಕ್ಕೆ ಬಂದಲ್ಲಿ ಅಲ್ಲಿಯೇ ಅಮಾನತು ಮಾಡಲಾಗುವುದು ಎಂದು ಶ್ರೀರಾಮುಲು ಎಚ್ಚರಿಸಿದರು.
ಹಾಲಾಡಿ ಸಚಿವರಾಗ್ತಾರೆ
ಹಾಲಾಡಿ ಶ್ರೀನಿವಾಸ ಶೆಟ್ಟರು ಸಚಿವರಾಗುವುದರಲ್ಲಿ ಅನುಮಾನ ಬೇಡ ಎಂದ ಶ್ರೀರಾಮುಲು, ಜನರ ಮಧ್ಯೆಯೇ ಇರುವ ನೀವು ಸಾರ್ವಜನಿಕ ಸಮಾರಂಭ ಗಳಲ್ಲೂ ಪಾಲ್ಗೊಳ್ಳಿ; ಮಂತ್ರಿ ಯಾದರೆ ನೀವೇ ಉದ್ಘಾಟನೆ ಮಾಡಬೇಕಾಗುತ್ತದೆ. ಆದರೆ ನೀವು ಹಿಂದೆಯೇ ಉಳಿಯುತ್ತಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.