ದಸರಾ ಹಂಗಾಮ: ಆಭರಣೋದ್ಯಮದಲ್ಲೂ ಮೂಡಿದೆ ನಿರೀಕ್ಷೆ

ಆಭರಣ ಖರೀದಿಗೂ ಹೆಚ್ಚುತ್ತಿರುವ ಉತ್ಸಾಹ

Team Udayavani, Sep 29, 2019, 7:58 PM IST

jewelry-design

ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ ಕಂಡುಬಂದಿರುವುದು ಈ ಬಾರಿಯ ದಸರಾ-ದೀಪಾವಳಿಯ ಸಂಭ್ರಮ ಹೆಚ್ಚಿಸಿದೆ. ಆದರಲ್ಲೂ ಕರಾವಳಿಯ ಮಾರುಕಟ್ಟೆಯಲ್ಲಿ ಮರಳು ಕೊರತೆ ಸೇರಿದಂತೆ ಕೆಲವು ಕಾರಣಗಳಿಗೆ ಕೊಂಚ ಮಂದಗತಿಯಲ್ಲಿ ಸಾಗುತ್ತಿತ್ತು. ಈಗ ದಸರಾ ಹಬ್ಬದ ಸಂಭ್ರಮ ಮಾರುಕಟ್ಟೆಗೆ ಹೊಸ ಉತ್ಸಾಹ ತುಂಬಿರುವುದು ಸ್ಪಷ್ಟ. ಆದರ ಲಕ್ಷಣ ಗೃಹೋಪಯೋಗಿ ಉತ್ಪನ್ನ ವಲಯ ಹಾಗೂ ಆಭರಣ ವಲಯದಲ್ಲಿ ಗೋಚರಿಸಿದೆ.

ಮಂಗಳೂರು/ಉಡುಪಿ: ದಸರಾ-ದೀಪಾವಳಿಗೂ ಸಂಭ್ರಮ ಆವರಿಸುತ್ತಿದ್ದಂತೆ ಆಭರಣೋದ್ಯಮದಲ್ಲೂ ಉತ್ಸಾಹ ಇಮ್ಮಡಿಸಿದೆ.

ದೇಶದಲ್ಲಿನ ಆರ್ಥಿಕ ಹಿಂಜರಿತ ವಾಹನೋದ್ಯಮ ಸಹಿತ ಇತರ ಉದ್ಯಮ ವಲಯಗಳ ಮೇಲೆ ಬೀರಿದ ಪರಿಣಾಮಕ್ಕೆ ಹೋಲಿಸಿದರೆ ಆಭರಣೋದ್ಯಮದ ಮೇಲೆ ಕೊಂಚ ಕಡಿಮೆ. ಕರಾವಳಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ಹೊಸ ಆಭರಣ ಖರೀದಿಸಿ ದೇವಿಗೆ ತೊಡಿಸಿ ಪೂಜಿಸುವ ಪದ್ಧತಿಯೂ ಇದೆ. ಇವೆಲ್ಲವೂ ಆಭರಣ ಖರೀದಿಗೆ ಮತ್ತಷ್ಟು ಚುರುಕು ನೀಡಿವೆ.

ಕರಾವಳಿಯ ಉದ್ಯಮ ವಲಯದ ಲೆಕ್ಕದಂತೆ, ಖರೀದಿ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ. ನವರಾತ್ರಿ, ದೀಪಾವಳಿ ವೇಳೆಗೆ ಚಿನ್ನ ಖರೀದಿಗೆ ಆಸಕ್ತಿ ಹೆಚ್ಚುವ ಕಾರಣ ವಿವಿಧ ಆಭರಣ ಸಂಸ್ಥೆಯವರೂ ಆಫ‌ರ್‌ಗಳನ್ನು ಪ್ರಕಟಿಸಿದ್ದಾರೆ.
ಹಬ್ಬಕ್ಕೆಂದು ಹೊಸ ಡಿಸೈನ್‌ಗಳು ಬಂದಿವೆ. ಚಿನ್ನದಲ್ಲಿ ರೋಸ್‌ ಗೋಲ್ಡ್‌, ವೈಟ್‌ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಹಳೆಯ ಕಾಲದ ಆಭರಣವಾದ ಟೆಂಪಲ್‌ ಕಲೆಕ್ಷನ್‌ನತ್ತ ಒಲವಿದೆ.ಕೋಲ್ಕತಾ, ಮುಂಬಯಿ, ಕೇರಳ, ಕೊಯಮತ್ತೂರು, ಮಂಗಳೂರು, ಸಿಂಗಾಪುರ, ಮಲೇಷ್ಯಾ, ಟಕೀಶ್‌ ಡಿಸೈನ್‌ಗಳ ಖರೀದಿ ಸಹ ಈ ಸಮಯದಲ್ಲೇ.

“ಚಿನ್ನಾಭರಣಗಳ ಖರೀದಿಯಲ್ಲಿ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಆಗಿಲ್ಲ. ಕೆಲವರು ಮಾಮೂಲಿ ಖರೀದಿ ಜತೆ ಹೆಚ್ಚುವರಿಯಾಗಿ ಖರೀದಿಸುತ್ತಿಲ್ಲ. ಆದರೆ, ಈಗ ಪರವಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಲಿದೆೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಎಸ್‌ ಎಲ್‌ ಶೇಟ್‌ ಡೈಮಂಡ್‌ ಹೌಸ್‌ನ ಸಹ ಮಾಲಕ ಶರತ್‌ ಶೇಟ್‌.

ವಜ್ರಾಭರಣಗಳಿಗೂ ಬೇಡಿಕೆ
ವಜ್ರಾಭರಣಗಳಲ್ಲೂ ಹೊಸ ವಿನ್ಯಾಸಗಳು ಬಂದಿವೆ. ಅನ್‌ಕಟ್‌ ಡೈಮಂಡ್‌, ಫ್ಯಾನ್ಸಿ ಡಿಸೈನ್‌ಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಸುಮಾರು 5 ಸಾವಿರ ರೂ.ಗಳಿಂದ ವಜ್ರಾಭರಣ ಲಭ್ಯ. ಬೆಳ್ಳಿಯ ಚಾಂದ್‌ಬಾಲಿ, ಜುಮುಕಿಗಳು, ಕ್ಲಿಪ್‌ ಮೂಗುತಿಗಳು, ಉಂಗುರಗಳಿಗೆ ಯುವಜನರಿಂದ ಬೇಡಿಕೆ ಹೆಚ್ಚುತ್ತಿದೆಯಂತೆ.

“ಈ ಹಬ್ಬದಲ್ಲಿ ಕೈಬಳೆ, ಚೈನ್‌, ಬ್ರೇಸ್‌ಲೆಟ್‌ಗಳು ಹೆಚ್ಚು ಮಾರಾಟವಾಗುವ ನಿರೀಕ್ಷೆ ನಮ್ಮದು. ಇದೇ ಕಾರಣದಿಂದ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ನಿಗದಿತ ಪ್ರಮಾಣದ ಚಿನ್ನಾಭರಣ, ಡೈಮಂಡ್‌ ಖರೀದಿಗೆ ರಿಯಾಯಿತಿ, ಹಳೇ ಆಭರಣಗಳ ವಿನಿಮಯಕ್ಕೆ ಕೊಡುಗೆ ಲಭ್ಯವಿದೆ. ದಸರಾ-ದೀಪಾವಳಿ ನಮ್ಮ ವ್ಯಾಪಾರಕ್ಕೆ ಇನ್ನಷ್ಟು ಉತ್ಸಾಹ ತುಂಬಲಿದೆ’ ಎಂಬುದು ಉಡುಪಿ ಸ್ವರ್ಣ ಜುವೆಲರ್ನ ಮಾಲಕರಾದ ಗುಜ್ಜಾಡಿ ರಾಮದಾಸ ನಾಯಕ್‌ರ ವಿಶ್ವಾಸದ ಮಾತು.

“ನಮ್ಮ ಮಳಿಗೆಯು ಅ.5ರಂದು 55 ವಸಂತಗಳನ್ನು ಪೂರೈಸುತ್ತಿದೆ. ಇದೇ ಸಮಯದಲ್ಲಿ ನವರಾತ್ರಿ ಬಂದಿರುವುದರಿಂದ ವಿಶೇಷ ಆಫರ್‌ ನೀಡುತ್ತಿದ್ದೇವೆ.
ವಜ್ರಾ ಭರಣ, ಪ್ಲಾಟಿನಂ ಆಭರಣ ಖರೀದಿಗೆ ರಿಯಾ ಯಿತಿ ನೀಡು ತ್ತಿದ್ದೇವೆ’ ಎನ್ನುತ್ತಾರೆ ಮಂಗಳೂರಿನ ಜೋಸ್‌ ಅಲುಕ್ಕಾಸ್‌ ಜುವೆಲರಿಯ ಮ್ಯಾನೇಜರ್‌ ಅಗಸ್ಟಿನ್‌.
“ಇತ್ತೀಚಿನ ದಿನಗಳಲ್ಲಿ ಹಗುರದ ಆಭರಣಗಳ ಖರೀದಿಗೆ ಹೆಚ್ಚಿನ ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಇವು ನೋಡಲು ಭಾರ ಎಂದೆನಿಸಿದರೂ ಲೈಟ್‌ವೈಟ್‌ ಆಗಿರುತ್ತವೆ. ರಿಯಾಯಿತಿ ಸೌಲಭ್ಯ ನಮ್ಮಲ್ಲೂ ಇದೆ’ ಎನ್ನುತ್ತಾರೆ ಮಂಗಳೂರಿನ ಲಕ್ಷ್ಮೀದಾಸ್‌ ಜುವೆಲರಿ ಶಾಪ್‌ನ ಸಹ ಮಾಲಕ ವಿಷ್ಣು ಆಚಾರ್ಯ.

ನವರಾತ್ರಿ ವೇಳೆ ಚಿನ್ನದ ಪದಕ ಖರೀದಿಗೂ ಆಸಕ್ತಿ ಹೆಚ್ಚು. 2 ಗ್ರಾಂನಿಂದ ಹಿಡಿದು 8 ಗ್ರಾಂಗಳ ಲಕ್ಷ್ಮೀ ದೇವರ ಪದಕಗಳಿಗೆ ಬೇಡಿಕೆ. ಮಕ್ಕಳ ನಕ್ಷತ್ರಕ್ಕೆ ಹೊಂದಿಕೊಂಡ ಬಣ್ಣದ ಹರಳು, ಚಿನ್ನ, ವಜ್ರಗಳ ಟಿಕ್ಕಿಗಳ ಖರೀದಿ ಜೋರಿದೆ.

“ನಮ್ಮ ಮಳಿಗೆಯಲ್ಲೂ ಚಿನ್ನದ ಮೇಕಿಂಗ್‌ ಚಾರ್ಜ್‌ ಮೇಲೆ ರಿಯಾಯಿತಿ, ವಜ್ರ ಖರೀದಿಗೆ ಡಿಸ್ಕೌಂಟ್‌, ವೆರೈಟಿ ಡಿಸೈನ್‌ಗಳು, ಮದುಮಗಳ ಕಲೆಕ್ಷನ್‌, ಪಾರ್ಟಿವೇರ್‌ ಕಲೆಕ್ಷನ್‌ಗೆ ಬೇಡಿಕೆ ಹೆಚ್ಚಿದೆೆ’ ಎನ್ನುತ್ತಾರೆ ಮಂಗಳೂರಿನ ಸುಲ್ತಾನ್‌ ಡೈಮಂಡ್ಸ್‌ ಮತ್ತು ಗೋಲ್ಡ್‌ ಪ್ರಧಾನ ವ್ಯವಸ್ಥಾಪಕ ಉಣ್ಣಿತ್ತಾನ್‌.

ದಸರಾ ಹಬ್ಬಕ್ಕೆಂದು ಕಲ್ಯಾಣ್‌ ಜುವೆಲರಿಯಲ್ಲೂ ವಿಶೇಷ ಆಫರ್‌ಗಳಿವೆ. ವಜ್ರಾಭರಣ, ನ್ಯಾಚುರಲ್‌ ಸ್ಟೋನ್‌ಗಳಿಗೆ ಆಫ‌ರ್‌ ಮತ್ತು ಚಿನ್ನಾಭರಣ ಖರೀದಿಗೆ ಮೇಕಿಂಗ್‌ ಚಾರ್ಜ್‌ ಮೇಲೆ ರಿಯಾಯಿತಿ ಇದೆ.

ದಸರಾ ಸಂಭ್ರಮದಲ್ಲೇ ಮುಳಿಯ ಚಿನ್ನೋತ್ಸವ ಆರಂಭ. ಈ ವೇಳೆ ಲಕ್ಕಿ ಡ್ರಾ, ವಿಜೇತರಿಗೆ ಒಂದು ಚಿನ್ನದ ನಾಣ್ಯ, ಗಂಟೆಗೊಂದು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶವೂ ಇದೆ. ಡ್ಯಾನ್ಸಿಂಗ್‌ ಸ್ಟೋನ್‌, ರೋಸ್‌ಗೊàಲ್ಡ್‌, ಡೆಲಿಕೇಟ್‌ ಸ್ಪ್ರಿಂಗ್‌ ಕಲೆಕ್ಷನ್‌ ಆಭರಣಗಳು ವಿಶೇಷ ಎನ್ನುತ್ತಾರೆ ಪುತ್ತೂರಿನ ಮುಳಿಯ ಜುವೆಲರಿ ಶಾಪ್‌ನ ಮಾಲಕ ಕೇಶವ ಪ್ರಸಾದ್‌.

ಮದುವೆ ಖರೀದಿಯ ಆಫರ್‌ ಆರಂಭವಾಗಿದೆ ನಮ್ಮಲ್ಲಿ. 5 ಪವನ್‌ಗೂ ಮಿಕ್ಕಿ ಚಿನ್ನ ಖರೀದಿಗೆ ರಿಯಾಯಿತಿ ಇದೆ. ಸಾಂಪ್ರದಾಯಿಕ ಆಭರಣಗಳಿಗೆ ದರ ಹೆಚ್ಚಾದ ಕಾರಣ ಅನೇಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಗುರದಿಂದ ಕೂಡಿದ ಸಾಂಪ್ರದಾಯಿಕ ಆಭರಣಗಳನ್ನೂ ಒದಗಿಸಲಾಗುತ್ತಿದೆ ಎನ್ನುತ್ತಾರೆ ಪುತ್ತೂರಿನ ಜಿ.ಎಲ್‌. ಆಚಾರ್ಯ ಜುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ.

ಮದುವೆ ಸೀಸನ್‌ ಆರಂಭ
ಇನ್ನೇನು ಕೆಲವು ದಿನಗಳಲ್ಲಿ ಮದುವೆ ಸೀಸನ್‌ ಆರಂಭಗೊಳ್ಳಲಿದ್ದು, ಚಿನ್ನಾಭರಣ ಮಳಿಗೆಯಲ್ಲಿ ಆಭರಣಗಳ ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಯುವತಿಯರು ಫ್ಯಾನ್ಸಿ ಆಭರ‌ಣ ಕೊಂಡುಕೊಳ್ಳಲು ಇಷ್ಟಪಡುತ್ತಿದ್ದಾರೆ. ಅದಕ್ಕೆಂದು ಆಭರಣ ಪೆಂಡೆಂಟ್‌ಗಳು ಮಾರುಕಟ್ಟೆಗೆ ಬಂದಿವೆ.

ಟಾಪ್ ನ್ಯೂಸ್

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

1-magu

Manipal; ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ : ಈಶ್ವರ ಮಲ್ಪೆ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.