ಸಾಲು ಸಾಲು ಸಿನ್ಮಾಗಳಲ್ಲಿ ಅದಿತಿ
ದಾವಣಗೆರೆ ಹುಡುಗಿಯ ನ್ಯೂ ಲುಕ್
Team Udayavani, Sep 30, 2019, 4:04 AM IST
ನಟಿ ಅದಿತಿ ಪ್ರಭುದೇವ ಸದ್ಯದ ಮಟ್ಟಿಗೆ ಗಾಂಧಿನಗರಿಗರ ಹಾಟ್ ಫೇವರೇಟ್. ಹೌದು, ಬೆರಳೆಣಿಕೆ ವರ್ಷದಲ್ಲೇ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿ ನಟಿ ಎನಿಸಿಕೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಅಂದರೆ, ಕೇವಲ ಎರಡೇ ವರ್ಷದಲ್ಲಿ 12 ಚಿತ್ರಗಳಲ್ಲಿ ಅವಕಾಶ ಪಡೆದಿರುವುದು. ಸಾಮಾನ್ಯವಾಗಿ ನಟಿಯರು ವರ್ಷಕ್ಕೆ ಒಂದು ಅಥವಾ ಎರಡು ಹೆಚ್ಚೆಂದರೆ, ಮೂರು ಚಿತ್ರಗಳಲ್ಲಿ ನಟಿಸಬಹುದು.
ಆದರೆ, ಅದಿತಿ ಮಾತ್ರ ವರ್ಷಕ್ಕೆ ನಾಲ್ಕು, ಐದು ಚಿತ್ರಗಳಲ್ಲಿ ನಟಿಸುವ ಮೂಲಕ ಮೆಲ್ಲನೆ ಗಾಂಧಿನಗರದಲ್ಲಿ ಗಟ್ಟಿನೆಲೆ ಕಾಣುವ ಮುನ್ಸೂಚನೆ ನೀಡಿದ್ದಾರೆ. ಹಾಗೆ ನೋಡಿದರೆ, ಅದಿತಿ ಅದೃಷ್ಟದ ನಟಿ ಎಂದೇ ಹೇಳಬಹುದು. ತನ್ನ ಮೊದಲ ಚಿತ್ರದಲ್ಲೇ ಅಜೇಯ್‌ರಾವ್ ಜೊತೆಗೆ ತೆರೆ ಹಂಚಿಕೊಂಡರು. “ಧೈರ್ಯಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅದಿತಿ, ಅಲ್ಲಿಂದ ಹಿಂದಿರುಗಿ ನೋಡದೆ, ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾದರು.
ಹೊಸಬರ ಜೊತೆ “ಬಜಾರ್’, “ಆಪರೇಷನ್ ನಕ್ಷತ್ರ’ ಚಿತ್ರ ಮಾಡಿದರು. ಆ ಬಳಿಕ ಚಿರಂಜೀವಿ ಸರ್ಜಾ ಜೊತೆಗೆ “ಸಿಂಗ’, ಜಗ್ಗೇಶ್ ಜೊತೆಯಲ್ಲಿ “ತೋತಾಪುರಿ’ ಮತ್ತು “ತೋತಾಪುರಿ-2′ ಚಿತ್ರದಲ್ಲಿ ಕಾಣಿಸಿಕೊಂಡರು. ದಯಾಳ್ ಪದ್ಮನಾಭ್ ನಿರ್ದೇಶನದ “ರಂಗನಾಯಕಿ’, “ಬ್ರಹ್ಮಚಾರಿ’,”ದಿಲ್‌ಮಾರ್’, “ಒಂಬತ್ತನೇ ದಿಕ್ಕು’,”ಗಾಳಿಪಟ -2′ ಹಾಗು “ಕುಸ್ತಿ’ ಚಿತ್ರಗಳಲ್ಲಿ ಅದಿತಿ ನಾಯಕಿ. ಈ ಪೈಕಿ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಸದ್ಯಕ್ಕೆ ಬಿಡುಗಡೆಗೆ ಉಳಿದ ಚಿತ್ರಗಳು ಸಿದ್ಧತೆಯಲ್ಲಿವೆ. ಉಳಿದ ಒಂದಷ್ಟು ಚಿತ್ರಗಳು ಚಿತ್ರೀಕರಣದಲ್ಲಿವೆ.
ಇದಕ್ಕೂ ಮೊದಲು ಕಿರುತೆರೆಯಲ್ಲಿದ್ದ ಅದಿತಿ ಪ್ರಭುದೇವ, “ಗುಂಡ್ಯಾನ ಹೆಂಡ್ತಿ’ ಹಾಗೂ “ನಾಗ ಕನ್ನಿಕೆ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಯಾವಾಗ ಬೆಳ್ಳಿತೆರೆ ಪ್ರವೇಶಿಸಿದರೋ, ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅದಿತಿ ಒಂದಷ್ಟು ಫೋಟೋಶೂಟ್ ಮಾಡಿಸಿದ್ದು, ಆ ಹೊಸ ಲುಕ್‌ನಲ್ಲಿ ಅದಿತಿ ಹೀಗೆ ಕಾಣಿಸಿಕೊಂಡಿದ್ದಾರೆ. ಆ ಹೊಸ ಫೋಟೋಶೂಟ್‌ನ ನ್ಯೂ ಲುಕ್ ಇಲ್ಲಿದೆ.
— Aditi Prabhudeva (@aditiprabhudeva) September 23, 2019
— Aditi Prabhudeva (@aditiprabhudeva) September 29, 2019
— Aditi Prabhudeva (@aditiprabhudeva) September 27, 2019
— Aditi Prabhudeva (@aditiprabhudeva) September 25, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.