ಕೇರಳ ಸಂಪರ್ಕಿತ ರಸ್ತೆ ದುರಸ್ತಿಗೊಳಿಸಿದ ಹೊರರಾಜ್ಯದ ಕನ್ನಡಿಗರ ತಂಡ

ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಅಧಿಕಾರಿಗಳು

Team Udayavani, Sep 30, 2019, 5:21 AM IST

2809IRL41

ಈಶ್ವರಮಂಗಲ: ಗಡಿಭಾಗದಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಗಳು ನಾದುರಸ್ತಿಯಲ್ಲಿದ್ದು, ಜನಪ್ರತಿನಿಧಿಗಳು ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ವಾಹನ ಸಂಚಾರವೇ ದುಸ್ತರವಾಗಿತ್ತು. ಮಳೆ ಕಡಿಮೆಯಾದ ತತ್‌ಕ್ಷಣ ಹೊರ ರಾಜ್ಯದ ಕನ್ನಡಿಗರು ಒಂದುಗೂಡಿ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಿದ್ದಾರೆ.

ಈಶ್ವರಮಂಗಲ-ಸುಳ್ಯಪದವು, ಕರ್ನೂರು-ಗಾಳಿಮುಖ ಮೊದಲಾದ ರಸ್ತೆಗಳು ಗಡಿಭಾಗದಲ್ಲಿವೆ. ಈ ರಸ್ತೆಗಳು ಕೇರಳವನ್ನು ಸಂಪರ್ಕಿಸುತ್ತಿವೆ. ಈ ರಸ್ತೆಯ ಜತೆಯಲ್ಲಿ ಪಂಚೋಡಿಯಿಂದ ಮಯ್ನಾಳವನ್ನು ಸಂಪರ್ಕಿಸುವ ರಸ್ತೆ ವಿಪರೀತ ಮಳೆಯಿಂದಾಗಿ ನೀರು ಹರಿದು ತೋಡಿನಂತಾಗಿತ್ತು.

ಪಂಚೋಡಿ ಭಜನ ಮಂದಿರದ ಪ್ರಯಾಣಿಕರ ತಂಗುದಾಣದಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಕೇರಳ – ಕರ್ನಾಟಕ ಗಡಿ ಇದೆ. ಇಲ್ಲಿಂದ ದೇಲಂಪಾಡಿಗೆ ಕೇವಲ 2 ಕಿ.ಮೀ. ದೂರ. ಈ ಭಾಗದ ರಸ್ತೆ ಕೇರಳದಲ್ಲಿ ಇರುವುದರಿಂದ ರಸ್ತೆಗೆ ಡಾಮರು ಹಾಕಲಾಗಿದೆ. ಕೇವಲ ಒಂದು ಕಿ.ಮೀ. ರಸ್ತೆಯಲ್ಲೇ ಮಳೆಗಾಲದಲ್ಲಿ ನೀರು ಹರಿದುಹೋಗಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದವು. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಆಯ್ದ ಎರಡು ಕಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿದೆ. ಉಳಿದ ಭಾಗದಲ್ಲಿ ಹೊಂಡ-ಗುಂಡಿಗಳಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪಾದಚಾರಿಗಳಿಗೂ ತೊಂದರೆಯಾಗುತ್ತಿತ್ತು.

ಅನಿವಾರ್ಯ ರಸ್ತೆ
ಮಯ್ನಾಳ, ದೇಲಂಪಾಡಿ, ನೂಜಿಬೆಟ್ಟು ಮುಂತಾದ ಕಡೆಯಿಂದ ಕರ್ನಾಟಕದ ಪುತ್ತೂರು, ಈಶ್ವರಮಂಗಲಕ್ಕೆ ಬರಲು ಇದು ಅತೀ ಹತ್ತಿರದ ರಸ್ತೆ. ನೂರಾರು ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಈ ರಸ್ತೆಯನ್ನು ಅವಲಂಬಿಸಿ ದ್ದಾರೆ. ಪ್ರತಿನಿತ್ಯ ಶಾಲಾ ಮಕ್ಕಳ ಬಸ್ಸುಗಳು ಕಷ್ಟಪಟ್ಟು ಸಂಚರಿಸುತ್ತಿವೆ. ಶೈಕ್ಷಣಿಕ, ಸಾಮಾಜಿಕ, ವಾಣಿಜ್ಯ, ಧಾರ್ಮಿಕ ವಾಗಿ ಸಂಬಂಧ ಬೆಳೆಯಲು ಈ ರಸ್ತೆ ಅನಿವಾರ್ಯವಾಗಿದೆ. ಪಂಚೋಡಿ- ಮಯ್ನಾಳ ರಸ್ತೆ ಹಲವು ವರ್ಷ ಗಳಿಂದ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಯಾಗಿಲ್ಲ. ಎರಡು ರಾಜ್ಯಗಳ ನಡುವೆ ಸಂಪರ್ಕ ಬೆಸೆಯುವ ಹತ್ತಿರದ ರಸ್ತೆಯಾಗಿದೆ. ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಬೇಕಾಗಿದೆ.

ರಸ್ತೆ ದುರಸ್ತಿ
ರಸ್ತೆಯ ದುರವಸ್ಥೆಯನ್ನು ಕಂಡು ಸದಸ್ಯರು ಸಾರ್ವಜನಿಕರ ಸಹಕಾರ ದೊಂದಿಗೆ ದುರಸ್ತಿಗೊಳಿಸಿದರು. ಸ್ಥಳೀಯರು ಹೊರರಾಜ್ಯ ಕನ್ನಡಿಗರಿಗೆ ಉಪಾಹಾರ, ಊಟದ ವ್ಯವಸ್ಥೆಯನ್ನು ಮಾಡಿದರು. ಶ್ರಮದಾನದಲ್ಲಿ ಮಯ್ನಾಳ ಭೈರವಗುಡ್ಡೆ ಶ್ರೀ ಮೂಕಾಂಬಿಕಾ ಕಲಾಸಂಗಮದ ಸದಸ್ಯರಾದ ಸದಾನಂದ ಪೂಜಾರಿ ಮಯ್ನಾಳ, ರಾಜಕುಮಾರ ಮಯ್ನಾಳ, ಅಶೋಕ ಸುವರ್ಣ ಮಯ್ನಾಳ, ಹರೀಶ್‌ ಸುವರ್ಣ, ರಮೇಶ್‌ ಸುವರ್ಣ, ಜೀವನ್‌, ಪುರುಷೋತ್ತಮ ಬೊಲ್ಪರ್‌, ರವಿ, ರಮೇಶ್‌ ಗೊಳಿತಡ್ಕ, ವಿನಯ ಎಂಕನಮೂಲೆ, ಗಿರೀಶ್‌ ಮಯ್ನಾಳ, ದಿನೇಶ್‌ ಮಯ್ನಾಳ, ಪ್ರಶಾಂತ್‌ ಮಯ್ನಾಳ, ಯೋಗೀಶ್‌ ಅರಂಬೂರು, ರಮೇಶ್‌ ಮಯ್ನಾಳ, ಆನಂದ ಬೋಲ್ಪರ್‌, ಚೇತನ ಶಾಂತಿಮಲೆ ಭಾಗವಹಿಸಿ ರಸ್ತೆ ದುರಸ್ತಿ ಮತ್ತು ಪಂಚೋಡಿ ಪ್ರಯಾಣಿಕರ ತಂಗುದಾಣವನ್ನು ಸ್ವತ್ಛಗೊಳಿಸಿದರು.

ಇಚ್ಚಾಶಕ್ತಿಯ ಕೊರತೆ?
ಗಡಿಭಾಗದ ರಸ್ತೆಗಳು ಅಭಿವೃದ್ಧಿಗೆ ಹಲವು ಯೋಜನೆಗಳು ಇದ್ದರೂ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಇಚ್ಛಾ ಶಕ್ತಿಯ ಕೊರತೆ ಕಾರಣವಾಗಿದೆ. ದೊಡ್ಡ ಮೊತ್ತದ ಅನುದಾನದಿಂದ ರಸ್ತೆ ಅಭಿವೃದ್ಧಿ ಗೊಳಿಸಿ ಎರಡು ರಾಜ್ಯಗಳ ನಡುವೆ ಸಂಬಂಧ ವೃದ್ಧಿಯಾಗಬೇಕಾಗಿದೆ.

ಶಾಸಕರಿಗೆ ಮನವಿ
ಗ್ರಾ.ಪಂ.ನಿಂದ ಉದ್ಯೋಗ ಖಾತರಿಯಲ್ಲಿ ಎರಡು ಕಡೆ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಯಾಗಬೇಕಾದರೆ ದೊಡ್ಡ ಮೊತ್ತದ ಅನುದಾನದ ಅಗತ್ಯವಿದೆ. ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಗಿದೆ. ಭರವಸೆ ನೀಡಿದ್ದಾರೆ.
– ಶ್ರೀರಾಮ್‌ ಪಕ್ಕಳ,
ಉಪಾಧ್ಯಕ್ಷರು, ನೆಟ್ಟಣಿಗೆಮುಟ್ನೂರು ಗ್ರಾ.ಪಂ.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

1

Bantwal: ಶಂಭೂರಿನ ಎಂಆರ್‌ಎಫ್‌ ತಿಂಗಳಲ್ಲಿ ಸಿದ್ಧ

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

3-sulya

Aranthodu: ನೇಣು ಬಿಗಿದು ಯವಕ ಆತ್ಮಹತ್ಯೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.