ಬದುಕನ್ನೊಮ್ಮೆ ಹೀಗೆ ನೋಡಿ ಗೆಲುವು ನಿಮ್ಮದೇ!
Team Udayavani, Sep 30, 2019, 5:00 AM IST
ನಾವೆಲ್ಲರೂ ಬದುಕಿನಲ್ಲಿ ಏನಾದರು ಸಾಧಿಸಿಯೇ ಸಾಯಬೇಕೆಂಬ ಮನಸ್ಥಿತಿಯಿಂದ ಬದುಕುತ್ತಿರುವವರು. ಆದರೆ ಕೆಲವರು ಅದನ್ನು ಸಾಧಿಸಿ ತೋರಿಸಿದರೆ ಇನ್ನೂ ಕೆಲವರು ಸಾಧಿಸುವ ಕನಸಲ್ಲೇ ಬದುಕನ್ನು ಮುಗಿಸಿ ಬಿಡುತ್ತಾರೆ. ನೀವೇನಾದರು ಸಾಧಿಸಬೇಕೆಂದಿದ್ದರೆ ಮೊದಲು ನಿಮ್ಮನ್ನು ನೀವು ಅಲ್ಲಿ ಕಲ್ಪಿಸಿಕೊಳ್ಳಬೇಕು ಆಗ ನಿಮಗೆ ತಿಳಿಯದಂತೆಯೇ ನೀವು ಸಾಧನೆಯ ಹಾದಿಯಲ್ಲಿ ಸಾಗತೊಡಗುತ್ತೀರಿ.
ಯಾವುದೇ ಕಷ್ಟ ಬಂದರೂ ಅದನ್ನು ಇಷ್ಟದಿಂದ ಸ್ವೀಕರಿಸಿ ಮುಂದೆ ನಡೆಯಬೇಕು ಆಗ ಮಾತ್ರ ನೀವು ಸಾಧಿಸುತ್ತೀರಿ. ಜೀವನದಲ್ಲಿ ಯಶಸ್ಸು ಗಳಿಸಲು ಮೊದಲು ನಮ್ಮ ಯೋಚನೆ ದೊಡ್ಡದಾಗಿರಬೇಕು. ಹೀಗೆ ಯೋಚಿಸುವುದರಿಂದ ಲಾಭವಲ್ಲದೆ ನಷ್ಟವೇನೂ ಇಲ್ಲ. ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳಿಗೆ ಹೆದರುವ ಬದಲಾಗಿ ಅದರಿಂದ ಹೊರ ಬರುವ ಮಾರ್ಗ ಹುಡುಕಿಕೊಳ್ಳುವುದು ಬಹಳ ಮುಖ್ಯ. ಒಂದು ಸೋಲು ನಮ್ಮ ಜೀವಕ್ಕಿಂತ ದೊಡ್ಡದಲ್ಲ ಎಂಬುದನ್ನು ಮನಗಂಡು ಅದರಿಂದ ಹೊರಬಂದು ಫಿನಿಕ್ಸ್‌ನಂತೆ ನಿಲ್ಲಲು ಕಲಿಯಬೇಕು.
ನಮ್ಮ ಜೀವನದಲ್ಲಿ ಯಾವುದು ಕೂಡಾ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಒಂದು ಬಾರಿ ಹೋದ ಸಮಯ ಹಾಗು ಪೋಲಾದ ಹಣ ಮರಳಿಬಾರದು ಎಂಬ ಅರಿವಿರಬೇಕು. ಅಂದುಕೊಂಡದನ್ನು ಸಾಧಿಸಲು ಕಠಿನ ಪರಿಶ್ರಮ ಬೇಕು. ಯಾವುದೇ ನಿರ್ಧಾರ ಕೈಗೊಳ್ಳುವಾಗ ಹೆದರದೆ ಧೈರ್ಯವಾಗಿ ನಿಭಾಯಿಸಬೇಕು. ಇದಕ್ಕೆ ಆತ್ಮವಿಶ್ವಾಸ ಬೇಕು. ಹಾಗಿದ್ದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ.
ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ. ಅದರ ಜತೆಜತೆಗೆ ಟೀಕೆಗಳನ್ನು ಪ್ರೀತಿಸಿ, ಟೀಕೆಗಳಿಂದ ಮಾತ್ರ ನೀವು ಬೆಳೆಯಲು ಸಾಧ್ಯ. ಯಾವ ಟೀಕೆಗಳು ನಿಮ್ಮನ್ನು ದೃತಿಗೆಡಿಸದಿರಲಿ ಬದಲಾಗಿ ನಿಮ್ಮ ಸಾಧನೆಯಿಂದಲೇ ಟೀಕೆಗೆ ಉತ್ತರಿಸಲು ಪ್ರಯತ್ನಿಸಿ. ಇದೆಲ್ಲದರೊಂದಿಗೆ ಸಂಬಂಧಗಳನ್ನು ಗಟ್ಟಿಯಾಗಿ ನಿಭಾಯಿಸಿ. ಜೀವನದ ಪ್ರತೀ ಹಂತದಲ್ಲೂ ಸಂಬಂಧಗಳಿಗೆ ಬೆಲೆ ಕೊಡಿ, ಸಂಬಂಧಗಳನ್ನು ಗೌರವದಿಂದ ಉಳಿಸಿಕೊಳ್ಳಿ. ಇವಿಷ್ಟನ್ನು ಗಮನದಲ್ಲಿರಿಸಿದರೆ ಗೆಲುವು ನಿಮ್ಮದೇ!!
-ದೀಪ್ತಿ ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.