ಬಿಗಿ ಉಡುಪು, ಚುಂಬನ ಬೇಡ: ಪ್ರವಾಸಿಗರಿಗೆ ಎಚ್ಚರಿಕೆ
Team Udayavani, Sep 30, 2019, 5:05 AM IST
ರಿಯಾದ್: ಇದೇ ಮೊದಲ ಬಾರಿಗೆ ವಿದೇಶಿಗರಿಗೆ ಪ್ರವಾಸಿ ವೀಸಾಗಳನ್ನು ನೀಡಲಾರಂಭಿಸಿರುವ ಸೌದಿ ಅರೇಬಿಯಾ, ಅದರ ಜತೆಗೆ, ಕಟ್ಟುನಿಟ್ಟಿನ ಸೂಚನೆಗಳನ್ನೂ ನೀಡಿದೆ.
ಅದರಂತೆ, ಸೌದಿಗೆ ಕಾಲಿಡುವ ವಿದೇಶಿಗರು (ಪುರುಷರು -ಮಹಿಳೆಯರು) ಬಿಗಿ ಉಡುಪುಗಳನ್ನು ಧರಿಸು ವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವಂತಿಲ್ಲ ಹಾಗೂ ಯಾವುದೇ ರೀತಿಯ ಆತ್ಮೀಯತೆಯನ್ನು ತೋರ್ಪಡಿಸುವಂತಿಲ್ಲ. ಅಸಭ್ಯ ಬರಹ, ಚಿತ್ರಗಳಿರುವ ಟಿ-ಶರ್ಟ್, ಪ್ಯಾಂಟ್ಗಳನ್ನು ಧರಿಸುವಂತಿಲ್ಲ. ಮಹಿಳೆಯರು ತಮ್ಮ ಭುಜಗಳು, ಮೊಣ ಕಾಲು ಕಾಣದಂಥ ಬಟ್ಟೆ ತೊಡುವುದು ಕಡ್ಡಾಯ. ಇವೇ ಮುಂತಾದ ನಿಬಂಧನೆಗಳ ಪಟ್ಟಿಯನ್ನು ಅಲ್ಲಿನ ಸರಕಾರ ಪ್ರಕಟಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ವಿವಿಧ ಯೂರೋಪ್ ದೇಶಗಳ ಪ್ರಜೆಗಳಿಗೆ ಸೌದಿ ಪ್ರವಾಸಕ್ಕೆ ವೀಸಾ ನೀಡುವುದಾಗಿ, ಶುಕ್ರವಾರವಷ್ಟೇ ಅಲ್ಲಿನ ಸರಕಾರ ಘೋಷಿ ಸಿತ್ತು. ಈಗ ಅದರ ಬೆನ್ನಿಗೇ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಇತ್ತೀಚೆಗೆ, ಅಂಥ 19 ಪ್ರಕರಣಗಳು ಸರಕಾರದ ಗಮನಕ್ಕೆ ಬಂದಿವೆ. ಹಾಗಾಗಿ, ಎಚ್ಚರಿಕೆ ನೀಡಲಾಗುತ್ತಿದೆ. ಎಚ್ಚರಿಕೆ ಯನ್ನು ನಿರ್ಲಕ್ಷಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.