ಶರನ್ನವರಾತ್ರಿ ಉತ್ಸವ ಆರಂಭ
ದಸರಾ: ದೇವಿ ಮೂರ್ತಿ ಮೆರವಣಿಗೆ-ವಿಶೇಷ ಪೂಜೆ ವಿಜೃಂಭಣೆ ಕರಗೋತ್ಸವ
Team Udayavani, Sep 30, 2019, 12:42 PM IST
ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯ ಶ್ರೀ ಏಳು ಮಕ್ಕಳ ತಾಯಮ್ಮ ದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು. ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಶರನ್ನವರಾತ್ರಿ ಉತ್ಸವವನ್ನು ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ಶ್ರೀ ದೇವಿ ಉತ್ಸವ ಭಾನುವಾರ ನಡೆದ ಕರಗೋತ್ಸವ ವಿಜೃಂಭಣೆಯಿಂದ ನಡೆಯಿತು.
ನಗರದ ಅಧಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮಾರ್ಗವಾಗಿ ಎಚ್‌ಆರ್‌ಜಿ ವೃತ್ತದ ಮೂಲಕ ಉತ್ಸವ ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ತಲುಪಿತು. ದೇವಾಲಯದ ಧರ್ಮಕರ್ತ, ಪಾಲಿಕೆ ಸದಸ್ಯ ಗೋವಿಂದರಾಜುಲು ಅವರು ಉತ್ಸವದ ನೇತೃತ್ವ ವಹಿಸಿದ್ದರು.
ನಂತರ ಅವರು ಮಾತನಾಡಿ, ಉತ್ಸವ ನಿಮಿತ್ತ ದೇವಾಲಯದಲ್ಲಿ ಭಾನುವಾರ ಪಾಡ್ಯಮಿ ಬ್ರಹ್ಮಿಣಿ ಹೋಮ ನಡೆಯಿತು. ಸೋಮವಾರ ವೈಷ್ಣವಿ ಹೋಮ, ಮಂಗಳವಾರ ಕೌಮಾರಿ ಹೋಮ, ಬುಧವಾರ ನಾರಸಿಂಹಿಣಿ ಹೋಮ, ಗುರುವಾರ ಮಹೇಂದ್ರಿ ಹೋಮ, ಶುಕ್ರವಾರ ಬಗಳಾಮುಖೀ ಹೋಮ, ಶನಿವಾರ ಕಾತ್ಯಾಯಿನಿ ಮಾತಂಗಿ ಹೋಮ, ಭಾನುವಾರ ದುರ್ಗಾಷ್ಟಮಿ ಮಹಾಕಾಳಿ ದುರ್ಗಾ ಹೋಮ, ಸೋಮವಾರ ಚಂಡಿ ಹೋಮ, ಮಂಗಳವಾರ ವಿಜಯದಶಮಿ ಕಮಲಾತ್ಮಿಕ ಹೋಮ, ಹವನಗಳು ನಡೆಯಲಿವೆ ಎಂದರು.
ಭಕ್ತರು ಪೂರ್ಣಾಹುತಿ ಮತ್ತು ಹೋಮ ಮತ್ತು ಮಹಾಹೋಮ, ಹವನಗಳಲ್ಲಿ ಭಾಗವಹಿಸಿ ದೇವಿ ಆರ್ಶಿವಾದ ಪಡೆಯಬಹುದು ಎಂದರು. ಈ ಸಂಧರ್ಭದಲ್ಲಿ ಪೆರುಮಾಳ್ ಸ್ವಾಮಿ, ಮುರುಘಾ ಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳೂ ನಡೆದವು. ಈ ಸಂದರ್ಭದಲ್ಲಿ ತಾಯಲು, ಶಂಕರ್, ನಾಗರಾಜ್, ವೆಂಕಟೇಶ್, ಶೋಭಾ, ಅರುಣ್ ಅವರು ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.