ಹಬ್ಬದ ವೇಳೆ 26,640 ಕೋಟಿ ಮೊತ್ತದ ಉತ್ಪನ್ನಗಳ ವ್ಯಾಪಾರ ನಿರೀಕ್ಷೆ
ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿ ಆನ್ಲೈನ್ ಶಾಪಿಂಗ್ ತಾಣಗಳು
Team Udayavani, Sep 30, 2019, 7:49 PM IST
ಹೊಸದಿಲ್ಲಿ: ದೇಶದಲ್ಲಿ ಆರ್ಥಿಕ ಹಿಂಜರಿತದ ಕೂಗು ಕೇಳಿಬರುತ್ತಿರುವಂತೆಯೇ, ಈ ಬಾರಿ ಹಬ್ಬದ ಅವಧಿಯಲ್ಲಿ ಬರೋಬ್ಬರಿ 265,640 ಕೋಟಿ ರೂ. ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಆನ್ಲೈನ್ ಶಾಪಿಂಗ್ ತಾಣಗಳು ಹೊಂದಿವೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಈಗಾಗಲೇ ಆನ್ಲೈನ್ ಮಾರಾಟ ಹಬ್ಬಗಳನ್ನು ಶುರುಮಾಡಿದ್ದು, ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿವೆ. ಈ ಬಗ್ಗೆ ಸಮೀಕ್ಷೆ ನಡೆಸಿದ ರೆಡ್ಸೀರ್ ಕನ್ಸಲ್ಟಿಂಗ್ ಸಂಸ್ಥೆಯೊಂದರ ಅಭಿಪ್ರಾಯದ ಪ್ರಕಾರ ಕಳೆದ ವರ್ಷಕ್ಕಿಂತ ಶೇ.65 ಪಟ್ಟು ಹೆಚ್ಚು ಮಾರಾಟ ನಿರೀಕ್ಷಿಸಲಾಗಿದೆ. ಅಲ್ಲದೇ ಒಟ್ಟು ಮಾರಾಟ ಮೌಲ್ಯ 7 ಪಟ್ಟು ವೃದ್ಧಿ ನಿರೀಕ್ಷೆ ಹೊಂದಲಾಗಿದೆ.
6 ದಿನಗಳ ಮಾರಾಟ ಅವಧಿಯಲ್ಲಿ 7.5 ಕೋಟಿ ರೂ. ಮೊತ್ತದ ವ್ಯವಹಾರ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಕಳೆದ ವರ್ಷ ಇದು 4.5 ಕೋಟಿ ರೂ. ಆಗಿತ್ತು. ಅಲ್ಲದೇ ಸದ್ಯದ ಮಾರಾಟ ಮೂಲಕ ಉದ್ಯಮ ರಂಗದಲ್ಲಿ ಶೇ.32ರಷ್ಟು ಬೆಳವಣಿಗೆ ದಾಖಲಾಗಲಿದ್ದು ವರ್ಷದ ಒಟ್ಟು ವಹಿವಾಟು 2.30 ಲಕ್ಷ ಕೋಟಿ ರೂ. ಆಗಲಿದೆ ಎಂದು ಅಂದಾಜಿಸಿದೆ.
ಈ ಬಾರಿ ಮೊಬೈಲ್ ಫೋನ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಅಲ್ಲದೇ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಫ್ಯಾಶನ್ ಉತ್ಪನ್ನಗಳಿಗೆ ಈ ವರ್ಷ ಗ್ರಾಹಕ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಲಾಗಿದೆ. ಪೀಠೊಪಕರಣಗಳ ಖರೀದಿಗೂ ಆದ್ಯತೆ ನೀಡಲಿರುವುದಾಗಿ ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.