ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ
Team Udayavani, Oct 1, 2019, 3:00 AM IST
ಕೆ.ಆರ್.ನಗರ: ಗಳಿಗೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ 5.64 ಲಕ್ಷ ನಿವ್ವಳ ಲಾಭ ಗಳಿಸಿದ್ದು. ಸದಸ್ಯರಿಗೆ 3.15 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಅಧ್ಯಕ್ಷ ಅಮಿತ್.ವಿ.ದೇವರಹಟ್ಟಿ ಹೇಳಿದರು.
ತಾಲೂಕಿನ ದೊಡ್ಡಕೊಪ್ಪಲು ಸಂಘದ ಗೋದಾಮು ಮಳಿಗೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದ 100ನೇ ವರ್ಷದ ನೆನಪಿಗಾಗಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು.
ಸಾಲಮನ್ನಾದಿಂದ 705 ಸದಸ್ಯರಿಗೆ ಅನುಕೂಲವಾಗಿದ್ದು, 4.20 ಕೋಟಿ ರೂ. ಸಾಲಮನ್ನಾ ಆಗಿದೆ ಎಂದರು. ತಾಪಂ ಮಾಜಿ ಸದಸ್ಯ ನಾಗಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜಿ.ಕೆ.ತೋಟಪ್ಪನಾಯಕ, ಡಿ.ಕೆ.ರಾಜೇಗೌಡ ಮತ್ತಿತರರು ಮಾತನಾಡಿ, ಸಂಘದ ವತಿಯಿಂದ ಪಡಿತರ ವಿತರಿಸುತ್ತಿದ್ದು, ಗ್ರಾಹಕರು ಪಡಿತರ ಪಡೆಯಲು ಬೆರಳಚ್ಚು ನೀಡಬೇಕಾಗಿದ್ದು, ಸರ್ವರ್ ಸಮಸ್ಯೆಯಿಂದ ಜನರು ಅಲೆಯುವಂತಾಗಿದೆ. ಕೂಡಲೇ ಸಂಘದ ಆಡಳಿತ ಮಂಡಳಿ ಇದನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ಜಾಣೇಗೌಡ, ಜಯರಾಮು, ಚಂದ್ರಶೇಖರ್, ಡಿ.ಎಂ.ಬೀರೇಶ್, ಪ್ರತಿಮಾ, ಚಂದ್ರಮ್ಮ, ಎಂ.ಎಸ್.ಮಹದೇವ, ಯಜಮಾನ, ಶೇಖರೇಗೌಡ, ರಮೇಶ್‌ರಾಜು, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಚ್.ಆರ್.ಸುಧೀರ್, ಗೌರವ ಸಲಹೆಗಾರ ಸತ್ತಿಗೌಡ, ಕಾರ್ಯದರ್ಶಿ ಪುಟ್ಟೇಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.