ಕಣ್ಣಿನ ಒತ್ತಡ ನಿವಾರಣೆ
Team Udayavani, Oct 1, 2019, 5:00 AM IST
ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಾವು ದಿನದ ಹೆಚ್ಚು ಸಮಯ ಮೊಬೈಲ್, ಟಿವಿ, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮುಂದೆ ಇರುವ ಕಾರಣ ಈ ದೃಷ್ಟಿಯಲ್ಲಿ ಕಣ್ಣಿನ ರಕ್ಷಣೆ ಮಾಡಬೇಕಾಗುತ್ತದೆ. ಈ ಕುರಿತು ವೈದ್ಯರು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.
ಕಣ್ಣಿಗೆ ವಿಶ್ರಾಂತಿಯಿರಲಿ
ನಾವು ಹೊರಗಡೆಯಿಂದ ಬಂದಾಗ ನಮ್ಮ ಕಣ್ಣಿಗೆ ಒಂದಿಷ್ಟು ಸಮಯ ವಿಶ್ರಾಂತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸುಮಾರು 2-3 ನಿಮಿಷ ಕಣ್ಮುಚ್ಚಿ ಕಣ್ಣಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಸರಿಯಾಗಿ ನಿದ್ದೆಯನ್ನು ಕೂಡ ಮಾಡಬೇಕಾಗುತ್ತದೆ. ಇದರಿಂದ ದೇಹಕ್ಕೂ ಹಾಗೂ ಕಣ್ಣಿಗೂ ವಿಶ್ರಾಂತಿ ನೀಡಿದಂತಾಗುತ್ತದೆ. ಇನ್ನು ದಿನದಲ್ಲಿ ತಾಸುಗಟ್ಟಲೇ ಮೊಬೈಲ್, ಕಂಪ್ಯೂಟರ್. ಲ್ಯಾಪ್‌ಟಾಪ್ ಬಳಸಿದ ಅನಂತರ ನಾವು 5-10 ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಕಣ್ಣನ್ನು ಅಲುಗಾಡಿಸಿ
ಸೂಕ್ಷ್ಮ ಅಂಗವಾದ ಕಣ್ಣನ್ನು ದಿನದಲ್ಲಿ 7-10 ಬಾರಿಯಾದರೂ ಗಡಿಯಾರ ಸುತ್ತುವಿನಂತೆ ತಿರುಗಾಡಿಸಬೇಕಾಗುತ್ತದೆ. ಇದರಿಂದ ಕಣ್ಣಿನ ರಕ್ಷಣೆ ಮಾಡಬಹುದು.
ಐ ಡ್ರಾಪ್ ಹಾಕಿ
ದಿನದಲ್ಲಿ ಹೆಚ್ಚು ಸಮಯ ಹೊರಗಡೆ ತಿರುಗಾಡಬೇಕಾದ ಕಾರಣ ಕಣ್ಣಿಗೆ ಧೂಳು ಬಿದ್ದಿರುತ್ತದೆ. ಧೂಳು ಬಿದ್ದಾಗಲೇ ಶುದ್ಧ ನೀರಿನಿಂದ ಅದನ್ನು ತೆಗೆಯಬೇಕು. ಹಾಗೇ ದಿನಾ ಮಲಗುವಾಗ ಐ -ಡ್ರಾಪ್ ಲಿಕ್ವಿಡ್‌ಗಳನ್ನು ಹಾಕಿ ಮಲಗಬೇಕು. ಇದರಿಂದ ಕಣ್ಣಿನ ರಕ್ಷಣೆ ಸಾಧ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ನಿರಂತರ ವಿಶ್ರಾಂತಿ
ಹವಾನಿಯಂತ್ರಿತ ಕೋಣೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುವವರಿಗೆ ಹೆಚ್ಚು ಕಣ್ಣಿನ ಸಮಸ್ಯೆಗಳು ಕಾಣಬಹುದು. ಆ ಪರಿಸರದಿಂದ ಅವರ ಕಣ್ಣು ಒಣಗಿರುತ್ತವೆ. ದಿನದ ಒಂದು ಬಾರಿಯಾದರೂ ಶುದ್ಧ ನೀರಿನಲ್ಲಿ ಕಣ್ಣನ್ನು ಅದ್ದಿ ತೆಗೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.