ನಗರದಲ್ಲಿ ತಲೆ ಎತ್ತಲಿದೆ ಮಿಯಾವಾಕಿ ಅರ್ಬನ್ ಫಾರೆಸ್ಟ್!
Team Udayavani, Oct 1, 2019, 5:10 AM IST
ಮಹಾನಗರ: ಎತ್ತ ನೋಡಿದರೂ ಕಾಂಕ್ರೀಟ್ ಕಟ್ಟಡ ಹಸುರು ಮರ ಗಿಡಗಳೇ ಮಾಯಾವಾಗುತ್ತಿದೆ. ಈ ನಡುವೆ ನಗರದಲ್ಲಿ ಗಿಡಗಳನ್ನು ನೆಟ್ಟು ಪುಟ್ಟ ಅರಣ್ಯ ಬೆಳೆಸುವ ಕೆಲಸಕ್ಕೆ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ.
ಹೌದು ಹಲವು ವೈವಿಧ್ಯ ಗಿಡಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಬೆಳೆಸಿ ಪುಟ್ಟ ಅರಣ್ಯವನ್ನಾಗಿಸುವ ಈ ವಿಧಾನಕ್ಕೆ ಮಿಯಾವಾಕಿ ತಂತ್ರಜ್ಞಾನ ಎನ್ನಲಾಗುತ್ತದೆ. ಜಪಾನಿನಲ್ಲಿ ಹುಟ್ಟು ಪಡೆದ ಈ ತಂತ್ರಜ್ಞಾನ ಈಗಾಗಲೇ ಬೆಂಗಳೂರು, ಕೇರಳ, ದೇಶದ ಇನ್ನಿತರ ಪ್ರದೇಶಗಳಲ್ಲಿ ಹೆಸರು ಪಡೆದಿದೆ. ಇದೇ ಮೊದಲ ಬಾರಿಗೆ ನಗರದಲ್ಲಿ ಅಳವಡಿಸಲು ರಾಮಕೃಷ್ಣ ಆಶ್ರಮದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಮಾಜಿ ಮೇಯರ್ ದಿವಾಕರ್ ಕೆ., ರೇಂಜ್ ಫಾರೆಸ್ಟ್ ಅಧಿಕಾರಿ ಪಿ. ಶ್ರೀಧರ್ ಹೆಜ್ಜೆ ಇಟ್ಟಿದ್ದಾರೆ.
ಉರ್ವಸ್ಟೋರ್‌ನ ಇನ್ಫೋಸಿಸ್ ಮತ್ತು ದ.ಕ. ಜಿ.ಪಂ. ಕಚೇರಿ ರಸ್ತೆ ನಡುವಿನ ತ್ರಿಕೋಣಾಕಾರದ ಸುಮಾರು 5-6 ಸೆಂಟ್ಸ್ ಜಾಗದಲ್ಲಿ ಆವರಣ ಗೋಡೆ ನಿರ್ಮಿಸಿ ಮಿಯಾವಾಕಿ ಅರ್ಬನ್ ಫಾರೆಸ್ಟ್ ರಚನೆಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ. ಇಲ್ಲಿ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಅಪರೂಪದ ಸುಮಾರು 200ಕ್ಕಿಂತ ಅಧಿಕ ತಳಿಯ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ರೂಪಿಸಲಾಗಿದೆ.
600 ಗಿಡ ನಾಟಿ
ಮಿಯಾವಾಕಿ ಅರ್ಬನ್ ಫಾರೆಸ್ಟ್ ನಲ್ಲಿ ಒಂದು ಚದರ ಮೀ.ಗೆ ನಾಲ್ಕು ಗಿಡಗಳಂತೆ ಸುಮಾರು 600 ಗಿಡಗಳನ್ನು ನೆಡಲಾಗುತ್ತದೆ. ಇಲ್ಲಿಯ ಸಾಧಕ ಬಾಧಕಗಳನ್ನು ಗಮನಿಸಿ ಮುಂದಕ್ಕೆ ನಗರದ ಇತರ ಕಡೆಗಳಲ್ಲಿ ಅರ್ಬನ್ ಫಾರೆಸ್ಟ್ ನಡೆಸಲು ಚಿಂತನೆ ನಡೆಸಲಾಗಿದೆ. ರಸ್ತೆ ಬದಿ ನೆಡುವ ಗಿಡಗಳನ್ನು ರಸ್ತೆ ಅಗಲ, ವಿದ್ಯುತ್ ತಂತಿ, ಪೈಪ್‌ಲೈನ್, ಜಾಹೀರಾತು ಫಲಕ ಮತ್ತಿತರ ಕಾರಣಕ್ಕೆ ಕಡಿದು ಹಾಕಲಾಗುತ್ತಿದೆ. ಎತ್ತರಕ್ಕೆ ಬೆಳೆಯಲು ಬಿಡುತ್ತಿಲ್ಲ. ಒಂದು ವೇಳೆ ಗಿಡ ಬೆಳೆದರೂ ಜನ, ವಾಹನ ಸಂಚಾರದಿಂದ ಅಲ್ಲಿ ಹಕ್ಕಿಗಳು ಬಂದು ನೆಲೆಸೂವುದೂ ಇಲ್ಲ, ಗೂಡು ಕಟ್ಟುವುದೂ ಇಲ. ಕೆಲವು ಗಿಡಗಳು ಮಾತ್ರ ಬೆಳೆಯುತ್ತವೆ. ಆಗಾಗ ಗೆಲ್ಲುಗಳನ್ನು ಕಡಿಯುವುದರಿಂದ ಹಣ್ಣು, ಹೂವು ಕೂಡ ಬಿಡುವುದಿಲ್ಲ.ಅದಕ್ಕಾಗಿ ರಸ್ತೆಯಿಂದ ಸ್ವಲ್ಪ ದೂರ ಇಂತಹ ಪುಟ್ಟ ಅರಣ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಅ. 2ರಂದು ಉದ್ಘಾಟನೆ
ಮೀಯಾವಾಕಿ – ಅರ್ಬನ್ ಫಾರೆಸ್ಟ್ ನ ಕಾಮಗಾರಿ ಮುಗಿದಿದ್ದು, ಗಿಡಗಳನ್ನು ತಂದು ನೆಡುವ ಕೆಲಸವಾಗಿದೆ. ಅ. 2ರಂದು ಬೆಳಗ್ಗೆ 9.30ಕ್ಕೆ ಇದರ ಉದ್ಘಾಟನೆ ಕೆಲಸವಾಗಲಿದೆ.
ಮಿಯಾವಾಕಿ ಎಂದರೇನು?
ಜಪಾನಿನ ಜೈವಿಕ ತಜ್ಞ ಡಾ| ಅಕಿರಾ ಮಿಯಾವಾಕಿ ಅವರು ಕಡಿಮೆ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸುವ ವಿಶಿಷ್ಟ ಮಿಯಾವಾಕಿ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಸಾಮಾನ್ಯ ಅರಣ್ಯ ಬೆಳೆಸುವುದಕ್ಕಿಂತ 10 ಪಟ್ಟು ಹೆಚ್ಚು ಬೆಳೆಯುವ ಈ ತಂತ್ರಜ್ಞಾನವು ಸಾಮಾನ್ಯಕ್ಕಿಂತ 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯುತ್ತದೆ. ಒಂದೇ ಸ್ಥಳದಲ್ಲಿ ಡಜನುಗಟ್ಟಲೆ ತಳಿಯ ಗಿಡಗಳನ್ನು ಬೆಳೆಸಬಹುದು ಮತ್ತು ಮೂರು ವರ್ಷದ ಬಳಿಕ ಯಾವುದೇ ನಿರ್ವಹಣೆ ಇಲ್ಲದೆ ಗಿಡಗಳು ಬೆಳೆಯುತ್ತಾ ಹೋಗುತ್ತವೆ.
ಸಿದ್ಧತೆ
ಮಾಜಿ ಮೇಯರ್ ಕೆ. ದಿವಾಕರ್ ಮೂರು ಸೆಂಟ್ಸ್ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸಿದ್ದಾರೆ. ಗಿಡಗಳು ಮೂರು ವರ್ಷಗಳಲ್ಲಿ 25 ಅಡಿ ಬೆಳೆದಿವೆ. ಅವರ ಪ್ರೇರಣೆಯಂತೆ ಮಂಗಳೂರಿನಲ್ಲಿ ಅರ್ಬನ್ ಫಾರೆಸ್ಟ್ ನಿರ್ಮಿಸಲು ಸಿದ್ಧತೆ ಮಾಡಿದ್ದೇವೆ.
-ಸ್ವಾಮಿ ಏಕಗಮ್ಯಾನಂದಜಿ, ರಾಮಕೃಷ್ಣ ಆಶ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.