ಧಾರವಾಡ ಆಕಾಶವಾಣಿಗೆ 2 ರಾಷ್ಟ್ರೀಯ ಪ್ರಶಸ್ತಿ
Team Udayavani, Oct 1, 2019, 3:00 AM IST
ಧಾರವಾಡ: 2018ನೇ ಸಾಲಿನ ಆಕಾಶವಾಣಿಯ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಘೋಷಿಸಲಾಗಿದ್ದು. ಧಾರವಾಡ ಆಕಾಶವಾಣಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾರ್ಯಕ್ರಮ ಅಧಿಕಾರಿ ಡಾ|ಬಸು ಬೇವಿನಗಿಡದ ಅವರು ರಚಿಸಿ ನಿರ್ಮಿಸಿದ “ಗೊಂಬೆಯಾಟ’ ರೂಪಕ ಡಾಕ್ಯುಮೆಂಟರಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ. ಕೀರ್ತಿ ನಿಡಗುಂದಿ ರಚಿಸಿ ನಿರ್ಮಿಸಿದ “ಹಳಿಕತೆ’ ಕಾರ್ಯಕ್ರಮ ವಿಶೇಷ ರೂಪಕ ವಿಭಾಗದಲ್ಲಿ ಪ್ರಶಂಸಾ ಪತ್ರ ಪಡೆದಿದೆ.
ಗೊಂಬೆಯಾಟ ಕಾರ್ಯಕ್ರಮ ಅಳಿವಿನಂಚಿನಲ್ಲಿರುವ ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ, ಗೊಂಬೆಯಾಟಗಳ ಪ್ರಾಚೀನತೆ ಮತ್ತು ಮಹತ್ವ ವಿವರಿಸುತ್ತದೆ. ಅದರಲ್ಲಿ ನಾವೀನ್ಯತೆ ಸಾ ಧಿಸಿರುವ ಹಳಿ ಯಾಳದ ಸಿದ್ದಪ್ಪ ಬಿರಾದಾರ ಮತ್ತು ಬಳ್ಳಾರಿಯ ಬೆಳಗಲ್ ವೀರಣ್ಣ ಅವರ ಪುತ್ರ ಮಲ್ಲಿಕಾರ್ಜುನ ಅವರ ಸಂದರ್ಶನ ಒಳಗೊಂಡಿತ್ತು. ರೈಲ್ವೆ ಪ್ರಯಾಣದ ರೋಮಾಂಚನ, ಮಿಲನ-ಅಗಲಿಕೆ ಮತ್ತು ಅನೇಕ ಸಿಹಿ-ಕಹಿ ಘಟನೆಗಳ ಸುತ್ತ ಹಳಿಕತೆ ರೂಪಕ ಹೆಣೆಯಲಾಗಿತ್ತು.
ರೈಲ್ವೆ ಇಲಾಖೆಯ ಹಲವು ನಿವೃತ್ತ ಅ ಧಿಕಾರಿಗಳು, ಕಳೆದುಕೊಂಡ ಮಕ್ಕಳನ್ನು ಪಾಲಕರಿಗೆ ತಲುಪಿಸುವ ಸಾಥಿ ಸಂಸ್ಥೆಯವರು ಅನುಭವಗಳನ್ನು ಹಂಚಿಕೊಂಡಿದ್ದರು. ಆಕಾಶವಾಣಿಯ ಹೆಚ್ಚುವರಿ ಮಹಾನಿರ್ದೇಶಕ ಡಾ|ರಾಜಕುಮಾರ ಉಪಾಧ್ಯಾಯ, ಬೆಂಗಳೂರು ಆಕಾಶವಾಣಿ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ, ಧಾರವಾಡ ಆಕಾಶವಾಣಿಯ ನಿರ್ದೇಶಕ ಸತೀಶ ಪರ್ವತಿಕರ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷವೂ ಕೂಡ ಇವರೇ ಪುರಸ್ಕಾರ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.