ಕುಂದಾಪುರದಲ್ಲಿ ಸ್ವರ್ಣ ಜುವೆಲರ್ ಉದ್ಘಾಟನೆ
Team Udayavani, Oct 1, 2019, 3:04 AM IST
ಕುಂದಾಪುರ: “ಸ್ವರ್ಣ ಆಭರಣ ಮಳಿಗೆಯಲ್ಲಿ ಸ್ವರ್ಣಾಭರಣ ಖರೀದಿಸಿದವರಿಗೂ ಒಳಿತಾಗಲಿ. ಗ್ರಾಹಕರಿಗೆ ಒಳಿತಾದರೆ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ. ಅವರು ಮತ್ತೂಮ್ಮೆ ಖರೀದಿಗೆ ಬರುವಂತೆ ಅವರಲ್ಲಿ ಸಂಪತ್ತು ವೃದ್ಧಿಯಾಗಲಿ’ ಎಂದು ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು. ಸೋಮವಾರ ನಗರದ ಶ್ರೀ ವೆಂಕಟರಮಣ ದೇವಸ್ಥಾನ ಬಳಿಯ ಅನಂತ ಪದ್ಮನಾಭ ಚೇಂಬರ್ನ ಮೊದಲ ಮಹಡಿಯಲ್ಲಿ ಸ್ವರ್ಣ ಜುವೆಲರ್ ಶಾಖೆ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಸಂಸ್ಥೆಯ ನಿರ್ವಾಹಕ ನಿರ್ದೇಶಕ ಬಿ. ರಾಮದಾಸ ನಾಯಕ್, ಸ್ವರ್ಣ ಜುವೆಲರ್ ಪ್ರಸ್ತುತ ಇರುವ ಪರಂಪರೆ ಹಾಗೂ ಗುಣಮಟ್ಟವನ್ನು ಮುಂದಿನ ದಿನ ಗಳಲ್ಲಿ ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿ ಸಿದ್ದು ಇಂದಿನ ಆಭರಣ ಪ್ರಿಯರ ಅಭಿ ರುಚಿಗೆ ತಕ್ಕಂತೆ ವಿಶೇಷ ಡಿಸೈನ್‌ಗಳ ಉತ್ಪಾದನೆಯ ಕಡೆಗೆ ಗಮನ ನೀಡುತ್ತಿದೆ. ಈ ಮೂಲಕ ಸಂಸ್ಥೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಉಡುಪಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಶಿರಸಿ, ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದ ಸ್ವರ್ಣ ದೇವಾಲಯಗಳ ನಾಡಾದ ಉಡುಪಿಯಲ್ಲಿ 1964ರಲ್ಲಿ ಗುಜ್ಜಾಡಿ ಮನೆತನದ ಹಿರಿಯರಾದ ಗುಜ್ಜಾಡಿ ನರಸಿಂಹ ನಾಯಕ್ ಅವರಿಂದ ಸ್ಥಾಪನೆಯಾಯಿತು. ಕಳೆದ 5 ದಶಕಗಳಿಂದ ನುರಿತ ಕುಶಲಕರ್ಮಿಗಳ ಮೂಲಕ ಗ್ರಾಹಕರಿಗೆ ಪರಿಪೂರ್ಣ ಆಭರಣಗಳ ಡಿಸೈನ್‌ನ್ನು ಒದಗಿಸುತ್ತಿದೆ.
ಉತ್ತಮ ಗುಣಮಟ್ಟದ ಆಭರಣಗಳನ್ನು ತಯಾರಿಸಿ ಒದಗಿಸುವುದರ ಮೂಲಕ ಸ್ವರ್ಣವನ್ನು ನಂಬಿ ವ್ಯವಹರಿಸುತ್ತಿರುವ ಗ್ರಾಹಕರ ಹಣಕ್ಕೆ ಸಮನಾದ ಮೌಲ್ಯವನ್ನು ನೀಡುತ್ತಿದೆ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಿ ಆಭರಣಗಳು, ಬಿಐಎಸ್ ಹಾಲ್‌ಮಾರ್ಕ್‌ನಿಂದ ದೃಢೀಕೃತಗೊಂಡಿವೆ. ಸ್ವಂತ ಆಭರಣ ತಯಾರಿಕಾ ಘಟಕದಲ್ಲಿ ಮಾಡಲ್ಪಟ್ಟಿರುವುದರಿಂದ ಸ್ಪರ್ಧಾತ್ಮಕ ತಯಾರಿಕಾ ವೆಚ್ಚದಲ್ಲಿ ನೀಡಲಾಗುತ್ತದೆ.
ಅಮೂಲ್ಯ ಆಭರಣಗಳ ರಿಪೇರಿ ಹಾಗೂ ಪಾಲಿ ಶಿಂಗ್ ಮಾಡಲಾಗುವುದು, ರತ್ನದ ಆಭರಣಗಳಿಗೆ ಮರು ಖರೀದಿ ಖಾತರಿಯಿದೆ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ಪ್ರಭಾಕರ ನಾಯಕ್, ಗುಜ್ಜಾಡಿ ಮಾಧವ ನಾಯಕ್, ಗುಜ್ಜಾಡಿ ರಘುವೀರ ನಾಯಕ್, ಗುಜ್ಜಾಡಿ ಗೋಪಾಲಕೃಷ್ಣ ನಾಯಕ್, ಗುಜ್ಜಾಡಿ ರಾಜೇಶ್ ನಾಯಕ್ ಉಪಸ್ಥಿತರಿದ್ದರು. ಇದೇ ವೇಳೆ ಸ್ವಾಮೀಜಿಯವರ ಪಾದಪೂಜೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.