ಹಸಿ-ಒಣ ಕಸ ವಿಂಗಡಣೆಗೆ ಒತ್ತು
Team Udayavani, Oct 1, 2019, 2:07 PM IST
ಗದಗ: “ಸ್ವಚ್ಛತಾ ಸೇವಾ’ ಅಭಿಯಾನ ಭಾಗವಾಗಿ ಅ. 2ರ ಒಳಗಾಗಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಗದಗ-ಬೆಟಗೇರಿ ನಗರಸಭೆ ಆಡಳಿತ ಮನೆಯಿಂದಲೇ ಹಸಿ ಒಣ ಕಸ ವಿಂಗಡಿಸಲು ಮನೆಗೆರಡು ಕಸದು ಡಬ್ಬಿಗಳನ್ನು ವಿತರಿಸಲು ಮುಂದಾಗಿದೆ. ಅದಕ್ಕಾಗಿ ಸುಮಾರು 1.31 ಕೋಟಿ ರೂ. ವೆಚ್ಚದಲ್ಲಿ ಕಸದ ಡಬ್ಬಿಗಳ ಖರೀದಿಗೆ ಮುಂದಾಗಿದೆ.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್ಗ ಳಲ್ಲಿ ಸುಮಾರು 42 ಸಾವಿರ ಕುಟುಂಬಗಳಿದ್ದು, ಪ್ರತಿದಿನ 50 ರಿಂದ 60 ಟನ್ ಕಸ ಸಂಗ್ರಹವಾಗುತ್ತದೆ. ಈ ಪೈಕಿ ಶೇ. 50ರಷ್ಟು ಹಸಿಕಸ, ಶೇ. 30ರಷ್ಟು ಒಣ ಕಸ ಹಾಗೂ ಶೇ. 20ರಷ್ಟು ಕಟ್ಟಡಗಳ ಅವಶೇಷಗಳನ್ನು ಒಳಗೊಂಡಿರುತ್ತವೆ. ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಿಸುವುದು ನಗರಸಭೆಗೆ ಪ್ರತಿನಿತ್ಯ ಸವಾಲಿನ ಕೆಲಸ.
ಹಳೆ ಪದ್ಧತಿಗೆ ಗುಡ್ ಬೈ: ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಅಲ್ಲಲ್ಲಿ ಕಂಟೇನರ್‌ಗಳನ್ನು ಇಟ್ಟು ಕಸ ಸಂಗ್ರಹಿಸುವ ಹಳೇ ಪದ್ಧತಿಯನ್ನು ಕೈಬಿಟ್ಟು, ನಗರಸಭೆ ವಾಹನಗಳ ಮೂಲಕ ಮನೆಯಿಂದಲೇ ಕಸ ಸಂಗ್ರಹ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ ಅವಳಿ ನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪ್ಲಾಸ್ಟಿಕ್ ಬಳಕೆ ಮಾಡಬೇಡಿ, ಎಲ್ಲೆಂದರಲ್ಲಿ ಕಸ ಚೆಲ್ಲಬೇಡಿ, ನಗರಸಭೆ ಕಸದ ವಾಹನಗಳಿಗೆ ಕಸ ನೀಡಿ, ಸ್ವತ್ಛತೆ ಕಾಪಾಡಿ ಎಂದು ಸ್ಥಳೀಯ ಆಡಳಿತ ಧ್ವನಿವರ್ದಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಜೊತೆಗೆ ಕಸದ ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸಲು ಅವಳಿ ನಗರದಲ್ಲಿರುವ ಎಲ್ಲ ಮನೆಗಳಿಗೆ ತಲಾ ಎರಡು ಪ್ಲಾಸ್ಟಿಕ್ ಕಸದ ಡಬ್ಬಿಗಳನ್ನು ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಗದಗ-ಬೆಟಗೇರಿ ನಗರಸಭೆಯಿಂದ 1.31 ಕೋಟಿ ರೂ. ಮೊತ್ತದಲ್ಲಿ 10 ಲೀಟರ್ ಸಾವರ್ಥ್ಯದ 82,486 ಪ್ಲಾಸ್ಟಿಕ್ ಕಸದ ಡಬ್ಬಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಡಬ್ಬಿಗಳನ್ನು ಪಡೆಯುವ ಸಾರ್ವಜನಿಕರು, ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕ ಡಬ್ಬಿಗಳಲ್ಲಿ ಸಂಗ್ರಹಿಸಬೇಕು. ಮರುದಿನ ಬೆಳಗ್ಗೆ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಅದನ್ನು ನೀಡಬೇಕು. ಇದರಿಂದ ವೇಸ್ಟ್ ಮ್ಯಾನೇಜ್‌ಮೆಂಟ್ ಸುಲಭವಾಗಲಿದೆ ಎನ್ನುತ್ತಾರೆ ನಗರಸಭೆ ಪರಿಸರ ವಿಭಾಗದ ಅಧಿಕಾರಿಗಳು.
ಮನೆಯಿಂದಲೇ ಕಸ ವಿಭಜನೆಯಾಗುವುದರಿಂದ ಅಳಿದುಳಿದ ಆಹಾರ ಪದಾರ್ಥ, ತರಕಾರಿ ಮತ್ತಿತರೆ ಹಸಿ ಕಸ(ಕೊಳೆಯಬಹುದಾದ)ವನ್ನು ನೇರವಾಗಿ ನಗರಸಭೆಯ ಕಾಂಪೋಸ್ಟ್ ಗೊಬ್ಬರ ಯಾರ್ಡ್‌ಗೆ ಸಾಗಿಸಬಹುದು. ಇನ್ನುಳಿದಂತೆ ಒಣ ಕಸದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿ ಕ್ ಬಾಟಲ್ ಹಾಗೂ ರಬ್ಬರ್ ಚಪ್ಪಲ್, ಟೈ ಮತ್ತು ಟ್ಯೂಬ್, ಬಟ್ಟೆಯನ್ನು ಪ್ರತ್ಯೇಕವಾಗಿ ಸಾಗಾಣಿಕೆ ಮತ್ತು ವೈಜ್ಞಾನಿಕ ರೀತಿಯ ಸಂಸ್ಕರಣೆಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಪ್ರತಿ ಮನೆಗೆ ಎರಡು ಕಸದ ಡಬ್ಬಿಗಳನ್ನು ನೀಡಲು ಉದ್ದೇಶಿಸಿದ್ದು, ಇನ್ನೂ 15- 20 ದಿನಗಳಲ್ಲಿ ಡಬ್ಬಿಗಳನ್ನು ಮನೆ ಮನೆಗೆ ಉಚಿತವಾಗಿ ತಲುಪಿಸಲಿದೆ ಎನ್ನಲಾಗಿದೆ.
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.