ಭಾಳಾ ಒಳ್ಯೋಳ್‌ ನಂ ಆಯಿ


Team Udayavani, Oct 2, 2019, 3:04 AM IST

baala-ol;l

ಆಯಿಗೆ ವಯಸ್ಸು ಎಂಬತ್ತಾಗಿರಬಹುದು. ಆದರೂ, ಜೀವನೋತ್ಸಾಹದಲ್ಲಿ ಅವಳಿನ್ನೂ ಸಣ್ಣ ಹುಡುಗಿ. ಅವಳಿಂದ ನಾನು ಕಲಿತ ಅದೆಷ್ಟೋ ವಿಷಯಗಳನ್ನು ಯಾವ ಶಾಲೆ-ಕಾಲೇಜು, ಯುನಿವರ್ಸಿಟಿಯೂ ಹೇಳಿಕೊಟ್ಟಿಲ್ಲ. ಹಳೆಯ ಸಂಪ್ರದಾಯ, ಆಚಾರ-ವಿಚಾರ, ಪೂಜೆ- ಪುನಸ್ಕಾರ, ಅಡುಗೆ, ಭಜನೆ, ರಂಗೋಲಿ ಅಷ್ಟೇ ಅಲ್ಲ, ಬದುಕನ್ನು ಪ್ರೀತಿಸು­ವುದನ್ನು, ಬಂದದ್ದೆಲ್ಲವನ್ನು ಧೈರ್ಯದಿಂದ ಎದುರಿಸು ವುದನ್ನು ಕಲಿಸಿದ್ದೂ ಆಕೆಯೇ..

“ಭಾಗಮ್ಮಾ, ಏ ಭಾಗಮ್ಮಾ!  ಇಲ್ಲಿ ಬಾರೇ… ಏನ್‌ ಮಾಡಾಕತ್ತಿ?… ಭಾಗಮ್ಮಾ, ಏ ಭಾಗಮ್ಮಾ’ ಅಂತ ಆಯಿ (ಅಜ್ಜಿ) ಕೂಗಿದಾಗ, ಈ ಕಡೆಯಿಂದ ನಾನು-“ಏನಾ ಆಯಿ, ಯಾಕ್‌ ಅಂತಾಪರಿ ಕರೀಲತಿಯಲ್ಲಾ? ಏನ್‌ ಕಮ್ಮಿ ಬಿತ್ತು ಹೇಳ್‌’… ಎನ್ನುತ್ತಾ ಆಕೆಯೆಡೆ ಹೋದೆ. “ಏನಿಲ್ಲ ಮಗಾ, ಜರಾ ಪುಟ್ಟಗೌರಿ ಧಾರಾವಾಹಿ ಹಚ್‌ ಕೊಡು. ನಂಗ್‌ ಟಿ.ವಿ. ಹಚ್ಚಾಕ್‌ ಬರ್ತಿಲ್ಲ’ ಅಂದಳು. “ಅದಕ್‌ ಅಷ್ಟೊತ್ತಿಂದ ಒಂದೇ ಸಮಾ ಕರೀಲತಿಯೇನ್‌…’ ಅನ್ನುತ್ತಾ, ಚಾನೆಲ್‌ ಹಾಕಿ ಕೊಟ್ಟೆ.

ಧಾರಾವಾಹಿ ನೋಡುತ್ತಾ ಕುಳಿತಿದ್ದ ಆಯಿ ಇದ್ದಕ್ಕಿದ್ದಂತೆಯೇ- “ಅಯ್ಯೋ ನಿನ್ನ ಬಾಯಿಗೆ ಮಣ್‌ ಹಾಕ’ ಅಂತ ಯಾರಿಗೋ ಜೋರಾಗಿ ಬೈಯ್ಯತೊಡಗಿದಳು. ನಾನು, ಈ ಮುದುಕಿ ಮತ್ತೆ ಯಾರ ಜೊತಿ ಜಗಳಕ್ಕೆ ನಿಂತಳಪ್ಪಾ ಅಂತ ಓಡಿದರೆ, ಆಯಿ ಧಾರಾವಾಹಿಯ ವಿಲನ್‌ಗಳಿಗೆ ಹಿಡಿಶಾಪ ಹಾಕುತ್ತಿದ್ದಾಳೆ! “ಏ ಆಯಿ, ನಿನಗೇನ್‌ ಹುಚ್ಚಾ? ಆ ಥರ ಬೈತಿದ್ದೀಯಲ್ಲ! ಅದೆಲ್ಲಾ ಕಾಲ್ಪನಿಕ ಇರ್ತದ, ಸುಮ್ನಿರು’ ಅಂದರೂ ಆಕೆಯ ಸಿಟ್ಟು ಇಳಿಯಲಿಲ್ಲ.

ಧಾರಾವಾಹಿಯ ಸೀನ್‌ ಕೇಳಿ, ನನ್ನಜ್ಜಿ ಬಾಳ ಮುಗ್ಧೆ ಅಂದುಕೋಬೇಡಿ. ಎಲ್ಲರ ಅಜ್ಜಿಯಂತಲ್ಲ ನನ್ನ ಆಯಿ. ಅವಳು ತುಂಬಾನೇ ಡಿಫ‌ರೆಂಟ್‌. ಆಯಿಯ ಹಾವ -ಭಾವ, ಅಭಿರುಚಿ, ಆಲೋಚನೆಯಲ್ಲಾ ಮಾಡರ್ನ್. ಆಯಿಯ ಇಂಗ್ಲಿಷ್‌ ಕೇಳಿಬಿಟ್ಟರೆ, ಬ್ರಿಟಿಷರೇ ಓಡಿಹೋಗಬೇಕು. ಕಂಪ್ಯೂಟರ್‌ಗೆ ಕಂಪೊಡರ್‌, ಜನರಲ್‌ನಾಲೆಡ್ಜ್ಗೆ ಜನರೇಟರ್‌ ನಾಲೆಡ್ಜ್, ಕ್ಯಾನ್ಸರ್‌ಗೆ ಕ್ಯಾನಸಲ್‌ (ಒಮ್ಮೆ ಗೆಳತೀರು ಮನೆಗೆ ಬಂದಾಗ ಆಯಿ ನನ್ನ ಬಗ್ಗೆ ದೂರು ಹೇಳುತ್ತಿದ್ದಳು.

ಆಗ ನಾನು, “ಯಾಕ್‌ ಆಯಿ ಸುಳ್‌ಸುಳ್‌ ಹೇಳ್ತಿ?’ ಅಂದಾಗ ಆಕೆ “ನಾ ಸುಳ್‌ ಹೇಳಿದ್ರೆ, ನನ್‌ ಬಾಯಿಗೆ ಕ್ಯಾನಸಲ್‌ ಬರ‌್ಲವ್ವಾ’ ಅಂತ ಹೇಳಿ ಎಲ್ಲರನ್ನೂ ನಗಿಸಿದ್ದಳು) ಲೋ ಬಿಪಿಗೆ ಲವ್‌ ಬಿಪಿ…ಹೀಗೆ ಆಯಿಯ ಡಿಕ್ಷನರಿಯಲ್ಲಿರೋ ಪದಗಳೇ ಬೇರೆ. ಪಾನಿಪುರಿ ಅಂತ ಹೇಳ್ಳೋಕೆ ಬರದಿದ್ರೂ, ಪಾನ್‌ಪುರಿ ಅಂತ ಹೇಳ್ತಾನೇ ಚಪ್ಪರಿಸಿಕೊಂಡು ತಿಂತಾಳೆ ಆಕೆ.  ಆಯಿಗೆ ತನ್ನೆಲ್ಲಾ ಮೊಮ್ಮಕ್ಕಳಿಗಿಂತ ನಾನಂದ್ರೆ ಹೆಚ್ಚು ಪ್ರೀತಿ.

ಯಾಕಂದ್ರೆ, ಮನೆಯಲ್ಲಿ ಹೆಣ್ಣುಮಕ್ಕಳಿಲ್ಲದೇ ಇದ್ದಾಗ, ಆಯಿ ಹರಕೆ ಹೊತ್ತ ನಂತರ ಹುಟ್ಟಿದವಳು ನಾನು. ಅದಕ್ಕೆ ಆಯಿ ನನಗೆ “ಭಾಗಮ್ಮಾ’ ಅಂತ ದೇವರ ಹೆಸರನ್ನಿಟ್ಟಿದ್ದು. ಸಾಮಾನ್ಯವಾಗಿ ಅಜ್ಜಿಯಂದಿರಿಗೆ ಮೊಮ್ಮಕ್ಕಳ ಹುಟ್ಟಿದ ದಿನ ನೆನಪಿರೋದಿಲ್ಲ. ಇನ್ನು ಬರ್ಥ್ ಡೇ ಸೆಲೆಬ್ರೇಷನ್‌ ಅಂತೆಲ್ಲಾ ಗೊತ್ತಿರಲಿಕ್ಕಿಲ್ಲ. ಆದರೆ, ಆಯಿಗೆ ನನ್ನ ಬರ್ಥ್ಡೇ ಯಾವಾಗ ಅಂತ ಕೇಳಿದ್ರೆ, ಥಟ್‌ ಅಂತ ಹೇಳಿಬಿಡ್ತಾಳೆ. ಹುಟ್ಟಿದಹಬ್ಬಕ್ಕೆ ಹೊಸ ಬಟ್ಟೆ ತಗೋ ಅಂತ ದುಡ್ಡನ್ನೂ ಕೊಡುತ್ತಾಳೆ.

ಆಯಿಗೆ ವಯಸ್ಸು ಎಂಬತ್ತಾಗಿರಬಹುದು. ಆದರೂ, ಜೀವನೋತ್ಸಾಹದಲ್ಲಿ ಅವಳಿನ್ನೂ ಸಣ್ಣ ಹುಡುಗಿ. ಅವಳಿಂದ ನಾನು ಕಲಿತ ಅದೆಷ್ಟೋ ವಿಷಯಗಳನ್ನು ಯಾವ ಶಾಲೆ-ಕಾಲೇಜು, ಯುನಿವರ್ಸಿಟಿಯೂ ಹೇಳಿಕೊಟ್ಟಿಲ್ಲ. ಹಳೆಯ ಸಂಪ್ರದಾಯ, ಆಚಾರ-ವಿಚಾರ, ಪೂಜೆ-ಪುನಸ್ಕಾರ, ಅಡುಗೆ, ಭಜನೆ, ರಂಗೋಲಿ ಅಷ್ಟೇ ಅಲ್ಲ, ಬದುಕನ್ನು ಪ್ರೀತಿಸುವುದನ್ನು, ಬಂದದ್ದೆಲ್ಲವನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸಿದ್ದೂ ಆಕೆಯೇ.

ಒಮ್ಮೊಮ್ಮೆ ಅಜ್ಜಿ-ಮೊಮ್ಮಗಳ ಹಾಗೆ, ಮತ್ತೂಮ್ಮೆ ಫ್ರೆಂಡ್ಸ್‌ ಹಾಗೆ ಇರುವ ನಾವು ಜಗಳ ಮಾಡಿದ್ದುಂಟು, ವಾರಗಟ್ಟಲೆ ಮಾತು ಬಿಟ್ಟಿದ್ದೂ ಉಂಟು. ಈಗ ಆಯಿಯಿಂದ ದೂರವಿರುವ ನಾನು, ಅವನ್ನೆಲ್ಲ ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. “ಭಾಗಮ್ಮಾ, ಭಾಗಮ್ಮಾ, ಬಾರವ್ವಾ ಇಲ್ಲಿ’ ಅನ್ನೋ ಆ ದನಿ ನೆನಪಾದಾಗೆಲ್ಲಾ ಮೊಬೈಲ್‌ ಕೈಗೆತ್ತಿಕೊಂಡು “ಮೈ ಕ್ಯಾಶಿಯರ್‌’ ಅನ್ನೋ ನಂಬರ್‌ಗೆ ಡಯಲ್‌ ಮಾಡುತ್ತೇನೆ.

ಹಾಂ, ನನ್ನ ಕ್ಯಾಶಿಯರ್‌ ಕೂಡಾ ಆಯಿಯೇ! ಬರುವ ಪೆನ್ಷನ್‌ ಹಣದಿಂದ ನನ್ನೆಲ್ಲಾ ಬೇಕು-ಬೇಡಗಳನ್ನು, ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಾಳೆ. “ಎಲ್ಲರ ಕೈಯಾಗ ದೊಡ್‌ ದೊಡ್‌ ಮೊಬೈಲ್‌ ಅದ, ನೀ ಒಂದ್‌ ತಗೋ ಅಲ’ ಅಂತ ಹಣ ಕೊಟ್ಟು, ಹೊಸ ಮೊಬೈಲ್‌ನಲ್ಲಿ ಸೆಲ್ಫಿಗೆ ಪೋಸ್‌ ನೀಡಿ, ಡಬ್‌ಸ್ಮ್ಯಾಶ್‌ ವಿಡಿಯೋಗೆ ಪಾರ್ಟ್‌ನರ್‌ ಆಗಿ, ಟಸ್ಸುಪುಸ್ಸು ಇಂಗ್ಲಿಷ್‌ ಮಾತಾಡುವ ಆಯಿಯನ್ನು ನೋಡೇ ಹೇಳಿದ್ದು ಅನಿಸುತ್ತೆ, ವಯಸ್ಸು ಎನ್ನುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಅಂತ! ಈ ಮಾರ್ಡನ್‌ ಅಜ್ಜಿ, ನೂರ್ಕಾಲ ಚೆನ್ನಾಗಿರಲಿ ಅಂತ ದೇವರಲ್ಲಿ ಬೇಡಿಕೊಳ್ತೀನಿ…

* ಭಾಗ್ಯ ಎಸ್‌ ಬುಳ್ಳಾ

ಟಾಪ್ ನ್ಯೂಸ್

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.