ಆಯುಷ್ಮಾನ್ ಭಾರತ: 111 ಆಸ್ಪತ್ರೆಗಳ ಮಾನ ಹರಾಜು
Team Udayavani, Oct 1, 2019, 8:00 PM IST
ಹೊಸದಿಲ್ಲಿ: “ಪ್ರಧಾನ ಮಂತ್ರಿಯವರ ಜನ ಆರೋಗ್ಯ ಯೋಜನೆ’ ಅಥವಾ “ಆಯುಷ್ಮಾನ್ ಭಾರತ್’ (ಎಬಿ-ಪಿಎಂಜೆಎವೈ) ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆಸ್ಪತ್ರೆಗಳ ಬಗ್ಗೆ ಬಹಿರಂಗವಾಗಿ ವಾಗ್ಧಂಡನೆ ವಿಧಿಸುವ ಕಾರ್ಯಕ್ಕೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 111 ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ಹೆಸರುಗಳನ್ನು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
“ಎಬಿ-ಪಿಎಂಜೆಎವೈ’ ಜಾರಿಗೆ ಬಂದು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಎ) ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ಡಾ. ಹರ್ಷವರ್ಧನ್ ಅವರು, ಎಬಿ-ಪಿಎಂಜೆಎವೈ ಯೋಜನೆಯನ್ನು ದುರುಪಯೋಗ ಮಾಡುವ ಅಥವಾ ಆ ಯೋಜನೆಯ ವಿಚಾರವಾಗಿ ಸಾರ್ವಜನಿಕರಿಗೆ, ಸರಕಾರಕ್ಕೆ ವಂಚನೆ ಮಾಡುವ ಆಸ್ಪತ್ರೆಗಳನ್ನು ಕ್ಷಮಿಸುವ ಮಾತೇ ಇಲ್ಲ ಎಂದು ಎಚ್ಚರಿಸಿದರು.
“ಎಬಿ-ಪಿಎಂಜೆಎವೈ ಯೋಜನೆಯನ್ನು ಹೊಸ ಆವೃತ್ತಿಯ ಸಾಫ್ಟ್ವೇರ್ ವ್ಯಾಪ್ತಿಯಲ್ಲಿ ತರಲಾಗುತ್ತಿದ್ದು, ಅದು ಸಾರ್ವಜನಿಕರಿಗೆ ಮತ್ತಷ್ಟು ಉಪಯೋಗಗಳನ್ನು ಕಲ್ಪಿಸಲಿದೆ”ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.