ಚಿಗರಿ ಓಡಾಟಕ್ಕೆ ವರ್ಷ; ಯೋಜನೆಗಿಲ್ಲ ಹರ್ಷ
ಅವೈಜ್ಞಾನಿಕ ಯೋಜನೆ ಪಟ್ಟ
Team Udayavani, Oct 2, 2019, 9:48 AM IST
ಹುಬ್ಬಳ್ಳಿ: ರಾಜ್ಯದ ಏಕೈಕ ತ್ವರಿತ ಬಸ್ ಸಾರಿಗೆ ಸೇವೆ (ಬಿಆರ್‌ಟಿಎಸ್) ಒಂದು ವರ್ಷ ಪೂರೈಸಿದ್ದು, ಕಡಿಮೆ ದರದಲ್ಲಿ ಐಶಾರಾಮಿ ಬಸ್‌ಗಳ ಸೇವೆ ಮೂಲಕ ಜನರ ಮನಸ್ಸು ಗೆದ್ದಿದೆ. ಆದರೂ ಅವೈಜ್ಞಾನಿಕ ಅನುಷ್ಠಾನ ಯೋಜನೆ ಹಣೆಪಟ್ಟಿ ಅಂಟಿಕೊಂಡಿದೆ. ಪ್ರಾಯೋಗಿಕ ಸೇವೆ ಆರಂಭವಾಗಿ ಅ.2ಕ್ಕೆ ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.
ಹತ್ತು ಹಲವು ಕಾರಣಗಳಿಂದ ಬಿಆರ್‌ಟಿಎಸ್ ಯೋಜನೆಯ ವಿಳಂಬ ಕಾಮಗಾರಿಯಿಂದ ಈ ಯೋಜನೆ ಯಾಕಪ್ಪ ನಗರಕ್ಕೆ ಬಂತು ಎಂದು ಅವಳಿ ನಗರದಲ್ಲಿ ಓಡಾಡುತ್ತಿದ್ದ ಜನ ಶಾಪ ಹಾಕುತ್ತಿದ್ದರು. ಯೋಜನೆ ತಂದ ಜನಪ್ರತಿನಿಧಿಗಳು ಕೂಡ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆಯೂ ಕುಂಟುತ್ತ-ತೆವಳುತ್ತಾ ಬಸ್ ಓಡುವಷ್ಟರ ಮಟ್ಟಿಗೆ ತಲುಪಿಸಲಾಯಿತು.
ಪ್ರಾಯೋಗಿಕವಾಗಿ ಬಸ್‌ಗಳು ರಸ್ತೆಗಳಿದರೆ ಮಾತ್ರ ವಾಸ್ತವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯ ಎನ್ನುವ ಕಾರಣಕ್ಕೆ 2018 ಅಕ್ಟೋಬರ್ 2ರಂದು ಪ್ರಾಯೋಗಿಕ ಸೇವೆಗೆ ಚಾಲನೆ ನೀಡಲಾಯಿತು. ಕಾಮಗಾರಿಗಳು ಬಾಕಿ ಉಳಿದಿದ್ದರೂ ಜನರ ಮನಸ್ಸಿನಲ್ಲಿ ಮೂಡಿದ್ದ ಯೋಜನೆ ನಕಾರಾತ್ಮಕ ಅಂಶಗಳು ದೂರ ಮಾಡುವ ನಿಟ್ಟಿನಲ್ಲಿ ಬಸ್ ಸೇವೆ ಆರಂಭಿಸಲಾಯಿತು. ಆದರೆ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು. ಬಾಕಿ ಉಳಿದಿರುವ ಕೆಲಸಗಳಿಂದ ಮಹಾನಗರದ ಜನತೆಯ ಮನಸ್ಸು ಗೆಲ್ಲುವಲ್ಲಿ ಸಫಲವಾಗಿಲ್ಲ.
ಚಿಗರಿ ಸಾರಿಗೆ ಸೇವೆ ಸೂಪರ್ : ಚಿಗರಿ ಸವಾರಿಯನ್ನು ಜನರು ಅಪ್ಪಿಕೊಳ್ಳಲಿ ಎನ್ನುವ ಕಾರಣಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಬಸ್ ದರ ನಿಗದಿ ಮಾಡಿದ್ದರಿಂದ ಅತೀ ಕಡಿಮೆ ಅವಧಿಯಲ್ಲೇ ಪ್ರಯಾಣಿಕ ಮನಸ್ಸು ಗೆದ್ದಿತು. ಕಡಿಮೆ ಬಸ್ ದರದಲ್ಲಿ ಕಡಿಮೆ ಅವಧಿಯಲ್ಲಿ ಐಶಾರಾಮಿ ಸಾರಿಗೆ ಜನರನ್ನು ಆಕರ್ಷಿಸಿತು. ಸ್ವಂತ ವಾಹನ ಬಳಸುತ್ತಿದ್ದವರೂ ಚಿಗರಿ ಪ್ರಯಾಣಕ್ಕೆ ಮನ ಸೋತರು. ಪರಿಣಾಮ ನಿತ್ಯ ಚಿಗರಿ ಬಸ್‌ಗಳಲ್ಲಿ 40-45 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಎಲ್ಲಾ ರಿಯಾಯಿತಿ ಪಾಸ್‌ಗಳಿಗೆ ಅವಕಾಶ ನೀಡಿರುವುದು ಸಾರಿಗೆ ಸೇವೆ ಜನರಿಗೆ ಮತ್ತಷ್ಟು ಹತ್ತಿರವಾಗಲು ಕಾರಣವಾಯಿತು. ಪ್ರಯಾಣಿಕರಿಗೆ ನೀಡಿದ ಭರವಸೆಯನ್ನು ಬಿಆರ್‌ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಹುಪಾಲು ಈಡೇರಿಸಿವೆ. ಮಾದರಿ ಯೋಜನೆಯನ್ನಾಗಿ ಕಾಪಾಡುವ ನಿಟ್ಟಿನಲ್ಲಿ ಹತ್ತು ಹಲವು ಪ್ರಯೋಗಗಳು ನಡೆಯುತ್ತಿವೆ.
ಎರಡನೇ ಹಂತದ ಕಾಮಗಾರಿ : ಮೊದಲನೇ ಹಂತದ ಬಿಆರ್‌ಟಿಎಸ್ ಯೋಜನೆಯಲ್ಲಿ ಹಲವು ಕೆಲಸಗಳು ಬಾಕಿ ಉಳಿದಿದೆ. ಇದರ ಮಧ್ಯೆ ಎರಡನೇ ಹಂತಹ ಯೋಜನೆಗೆ ತಯಾರಿ ನಡೆಯುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆ ಅನುದಾನದಲ್ಲಿ ಯೋಜನೆ ಆರಂಭಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಆಗಬೇಕಾದ ಪ್ರಮುಖ ಕೆಲಸಗಳನ್ನು ಬಾಕಿ ಉಳಿದಿವೆ. ಈ ಎಲ್ಲಾ ಕಾರ್ಯಗಳು ಮುಗಿಯದ ಹೊರತು ಉದ್ಘಾಟನೆ ಬೇಡ ಎನ್ನುವ ಅಭಿಪ್ರಾಯ ಜನಪ್ರತಿನಿಧಿಗಳದ್ದಾಗಿದ್ದು, ಹೀಗಿರುವಾಗ ಎರಡನೇ ಹಂತದ ಕಾಮಗಾರಿಗೆ ಮುಂದಾಗಿರುವುದಾದರೂ ಯಾವ ಕಾರಣಕ್ಕೆ ಎಂಬುದು ಜನರ ಪ್ರಶ್ನೆಯಾಗಿದೆ.
ಹೆಚ್ಚುತ್ತಿದೆ ನಷ್ಟದ ಪ್ರಮಾಣ: ಬಿಆರ್‌ಟಿಎಸ್ ವಾಯವ್ಯ ಸಾರಿಗೆ ಸಂಸ್ಥೆ ಪಾಲಿಗೆ ಬಿಳಿಯಾನೆಯಾಗಿದೆ. ಪ್ರತಿ ತಿಂಗಳು ಸುಮಾರು 1.5 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 20 ಕೋಟಿ ರೂ. ನಷ್ಟವಾಗಿದೆ. ಕಡಿಮೆ ಬಸ್ ದರ ಇರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕೇವಲ 100 ಬಸ್‌ಗಳಿಂದ ಇಷ್ಟೊಂದು ಪ್ರಮಾಣದ ನಷ್ಟ ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ವರ್ಷ ಕಳದಂತೆಲ್ಲ ನಷ್ಟದ ಪ್ರಮಾಣ ಹೆಚ್ಚಾಗಲಿದ್ದು, ಮುಂದೆ ಹೇಗೆ ಎನ್ನುವ ಪ್ರಶ್ನೆ ಅಧಿಕಾರಿಗಳಲ್ಲಿ ಕಾಡುತ್ತಿದೆ. ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಇನ್ನೂ ಸಂಸ್ಥೆಗೆ ಬಂದಿಲ್ಲ. ಮೊದಲ ಹಂತದಲ್ಲಿ 20 ಕೋಟಿ ರೂ. ಮಂಜೂರಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸಂಸ್ಥೆಗೆ ವರ್ಗಾಯಿಸಲು ವಿಳಂಬವಾಗುತ್ತಿದೆ.
ಈಡೇರದ ಭರವಸೆಗಳು : ಬಿಆರ್‌ಟಿಎಸ್‌ನಿಂದ ಅವಳಿ ನಗರದ ನಡುವೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎನ್ನುವ ಯೋಜನೆ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಹುಬ್ಬಳ್ಳಿಯ ಸಿಬಿಟಿಯಿಂದ ಬೈರಿದೇವರಕೊಪ್ಪ ಹಾಗೂ ಧಾರವಾಡದ ಮಿತ್ರ ಸಮಾಜದಿಂದ ವಿದ್ಯಾಗಿರಿವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಟ್ರಾಕ್ ಸಿಗ್ನಲ್‌ಗಳು ಕೂಡ ಕಾರಣವಾಗಿವೆ ಎನ್ನುವ ಆರೋಪಗಳಿವೆ. ಟ್ರಾಕ್ ಸಿಗ್ನಲ್‌ಗಳಿಗೆ ಮೊದಲ ಬಾರಿಗೆ ಕ್ಯೂಟಿ ತಂತ್ರಜ್ಞಾನ ಅಳವಡಿಸಿದರೂ ಪರಿಣಾಮಕಾರಿ ಸಂಚಾರ ವ್ಯವಸ್ಥೆ ಜನರಿಗೆ ದೊರೆಯುತ್ತಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಈ ಪ್ರಮುಖ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ಉಂಟಾಗಿರುವ ಸರತಿ ಸಾಲಿಗೆ ಇತಿಶ್ರೀ ಹಾಡಲು ಸಾಧ್ಯವಾಗಿಲ್ಲ. ಇನ್ನೂ ಕೆಲವೆಡೆ ಬಿಆರ್‌ಟಿಎಸ್ ಬಸ್ ನಿಲ್ದಾಣಕ್ಕೆ ಬರಲು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬರುವಂತಾಗಿದೆ. ಪಾದಚಾರಿ ಮೇಲ್ಸೇತುವೆಗಳಿಗೆ ಅಳವಡಿಸಿರುವ ಲಿಫ್ಟ್‌ಗಳ ಮುಖವನ್ನು ಜನರು ನೋಡಿಲ್ಲ. ಬಿಆರ್‌ಟಿಎಸ್ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಕಾರ್ಡ್ ವಿತರಣೆಗೆ ಭಾಗ್ಯ ಕೂಡಿ ಬಂದಿಲ್ಲ.
ಅಲ್ಲಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸುವ ಕೆಲಸ ನಡೆಯಿತೇ ವಿನಃ ಕಾರ್ಯರೂಪಕ್ಕೆ ಬರಲಿಲ್ಲ. ಬಿಆರ್‌ಟಿಎಸ್ ಕಾರಿಡಾರ್ ಗೆ ನೀಡಿದ ಪ್ರಾಶಸ್ತ ಮಿಶ್ರ ಪಥಕ್ಕೆ ನೀಡದ ಪರಿಣಾಮ ರಸ್ತೆ ಎಂಬುದು ಪಾರ್ಕಿಂಗ್ ಸ್ಥಳವಾಗುತ್ತಿದೆ. ಬೇಂದ್ರೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರದಿಂದ ಮಿಶ್ರಪಥದ ಸಂಚಾರ ಹೇಳ ತೀರದು. ಮಳೆಗಾಲದಲ್ಲಿ ಕೆರೆಯಂತಾಗುವ ಬಸ್ ನಿಲ್ದಾಣಗಳು, ಒಳ ಚರಂಡಿ ವ್ಯವಸ್ಥೆಯೇ ದುರ್ನಾತಕ್ಕೆ ಪರಿಹಾರ ಕಲ್ಪಿಸಿಲ್ಲ. ಬಿಆರ್‌ಟಿಎಸ್ ಸಾರಿಗೆಗೆ ಸಂಪರ್ಕ ಕಲ್ಪಿಸುವ ಹೊಸೂರು ಟರ್ಮಿನಲ್ ಬಳಕೆಯಾಗದೆ ಗಿಡ ಗಂಟಿ ಬೆಳೆದು ಪಾಳು ಬಿದ್ದಂತೆ ಕಾಣುತ್ತಿದೆ. ಸುಮಾರು 120 ಕೋಟಿ ರೂ. ವೆಚ್ಚದ ಐಟಿಎಸ್ ಕೇಂದ್ರ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಿಒಎಸ್ ಸಿಬ್ಬಂದಿಗೆ ಕಲ್ಪಿಸಬೇಕಾಗಿದ್ದ ಶೌಚಾಲಯ ಭರವಸೆ ಈಡೇರಿಲ್ಲ.
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.