“ಆರೋಗ್ಯಯುತ ಸಮಾಜ ನಿರ್ಮಾಣ ಧ್ಯೇಯವಾಗಲಿ ’
ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ
Team Udayavani, Oct 3, 2019, 3:00 AM IST
"ಸ್ವಚ್ಛ ಭಾರತ್ ಕಾರ್ಯಕ್ರಮ'ವನ್ನು ಮಂಗಳೂರು ವಿವಿಯ ಉಪಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ಅವರು ಉದ್ಘಾಟಿಸಿದರು.
ಮಂಗಳಗಂಗೋತ್ರಿ: ಸ್ವಚ್ಛತೆ ಅಭಿಯಾನದ ನಿರಂತರ ಪ್ರಕ್ರಿಯೆಯಿಂದ ಸ್ವಚ್ಛ, ಸ್ವಸ್ಥ್ಯ ಮನಸ್ಸಿನೊಂದಿಗೆ ಆರೋಗ್ಯಪೂರ್ಣ ಸಮಾಜವನ್ನು ಕಟ್ಟಲು ಸಾಧ್ಯವಿದೆ. ಇಂತಹ ಜಾಗೃತಿ ಕಾರ್ಯಕ್ರಮದಿಂದ ಸಮಾಜದಲ್ಲಿ ಬದಲಾವಣೆ ಮಾತ್ರ ಅಲ್ಲ ಪರಿವರ್ತನೆಯೂ ಸಾಧ್ಯ ಎಂದು ಮಂಗಳೂರು ವಿವಿಯ ಉಪಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ, ಮಾತಾ ಅಮೃತಾನಂದವಯಿ ಮಠ, ಎಂಆರ್ಪಿಎಲ್, ಕೊಣಾಜೆ ಗ್ರಾಮ ಪಂಚಾಯತ್, ಕೆಎಸ್ಆರ್ಪಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನದ ಪ್ರಯುಕ್ತ ಬುಧವಾರ ನಡೆದ “ಸ್ವಚ್ಛ ಭಾರತ್ ಕಾರ್ಯಕ್ರಮ’ದ ಕೊಣಾಜೆ ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಆರಂಭದ ಅನಂತರ ಜಿಲ್ಲೆಯಲ್ಲೂ ರಾಮಕೃಷ್ಣ ಮಿಷನ್ ಸಹಿತ ಅಮೃತಾನಂದಮಯಿ ಮಠ ಈ ಕಾರ್ಯವನ್ನು ಮುಂದುವರೆಸಿದ್ದು, ಮಂಗಳೂರು ವಿವಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ. ಇದು ಎಲ್ಲರ ಒಗ್ಗೂಡುವಿಕೆಯಿಂದ ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಕ್ರೀಡಾ ನೀತಿ ಅನುಷ್ಠಾನ
ವಿವಿಯಲ್ಲಿ ಈಗಾಗಲೇ ಕ್ರೀಡಾ ನೀತಿ, ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸ್ವಸ್ತಿಕ್ ಪದ್ಮರಂತಹ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಮತ್ತು ಅವರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯ ವಿವಿ ಮಾಡಲಿದೆ ಎಂದರು. ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮ್ಮಾನ
ಈ ಸಂದರ್ಭ ವಿವಿ ವತಿಯಿಂದ ಪುತ್ತೂರಿನ ಯುವ ವಿಜ್ಞಾನಿ ಸಂಶೋಧಕ ಸ್ವಸ್ತಿಕ್ಪದ್ಮ ಅವರನ್ನು ಸಮ್ಮಾನಿಸಲಾಯಿತು. ಸೇವಾ ಯೋಜನೆಯ ಸಂಯೋಜನಾಧಿಕಾರಿ ವಿನಿತಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಎಂ.ಆರ್. ಪಿ.ಎಲ್ ನ ಗ್ರೂಪ್ ಜನರಲ್ ಸೆಕ್ರಟರಿ ಬಿ.ಎಚ್.ಎಸ್. ಪ್ರಸಾದ್, ಮಂಗಳೂರು ವಿವಿ ಕುಲಸಚಿವ ಪ್ರೊ|ಎ.ಎಂ. ಖಾನ್ ಅಮಲಾ ಭಾರತ ಕಾರ್ಯಕ್ರಮದ ಅಧ್ಯಕ್ಷ ಡಾ| ಜೀವರಾಜ್ ಸೊರಕೆ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ, ಎನ್ನೆ ಸ್ಸೆಸ್ ಸಂಯೋಜಕ ಗೋವಿಂದ ರಾಜ್, ಎಂಆರ್ಪಿಎಲ್ ವ್ಯವಸ್ಥಾಪಕಿ ವೀಣಾ ಶೆಟ್ಟಿ, ಸ್ವತ್ಛತಾ ಆಂದೋಲನದ ಕಾರ್ಯದರ್ಶಿ ಸುರೇಶ್ ಅಮೀನ್, ಕೆಎಸ್ಆರ್ಪಿ ಕಮಾಂಡೆಂಟ್ ಜನಾರ್ದನ ಆರ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕೊಣಾಜೆ ಠಾಣಾ ಇನ್ಸ್ಪೆಕ್ಟರ್ ರವಿನಾಯಕ್, ಸುಬ್ರಾಯ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಂಗವಾಗಿ ಮಂಗಳೂರು ವಿವಿ ವಿದ್ಯಾರ್ಥಿಗಳು, ಕೆಎಸ್ಆರ್ಪಿ ಪೊಲೀಸರು, ಕೊಣಾಜೆ ಗ್ರಾಮದ ನಾಗರಿಕರು, ಮಂಗಳೂರು ವಿವಿ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳು ಮಾತಾ ಅಮೃತಾನಂದ ಮಯಿ ಮಠದ ಕಾರ್ಯಕರ್ತರು ಸಹಿತ ಸುಮಾರು 3,000 ಕ್ಕೂ ಹೆಚ್ಚು ಕಾರ್ಯಕರ್ತರು ಮಂಗಳೂರು ವಿವಿ ಪರಿಸರ ಸಹಿತ ಕೊಣಾಜೆ, ಪಜೀರು, ಬೆಳ್ಮ ಗ್ರಾಮ ವ್ಯಾಪ್ತಿಯಲ್ಲಿ 10 ತಂಡಗಳಾಗಿ ರಚಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಮುಖ್ಯಸ್ಥ ಡಾ| ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ನಿರ್ವಹಿಸಿದರು. ಡಾ| ಗೋವಿಂದರಾಜು ವಂದಿಸಿದರು.
ಸ್ವಚ್ಛತಾ ಅಭಿಯಾನ ಪ್ರೇರಣೆ
ಶಾಸಕ ಯು.ಟಿ. ಖಾದರ್ ಮಾತನಾಡಿ, ಸ್ವಚ್ಛತಾ ಅಭಿಯಾನದಂತಹ ಕಾರ್ಯಕ್ರಮಗಳು ಊರಿನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಯಾವುದೇ ದೇಶ ಅಭಿವೃದ್ಧಿ ಯಾಗಬೇಕಾದರೆ ಸ್ವಚ್ಛತೆಯ ವಿಷಯದಲ್ಲಿ ನಾವು ಪ್ರಥಮವಾಗಿ ಜಾಗೃತರಾಗಬೇಕಿದೆ. ಕಾನೂನಿನ ಮೂಲಕ ಸ್ವಚ್ಛತೆಯನ್ನು ನಡೆಸಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯವರ ಕನಸಿನಂತೆ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದರೊಂದಿಗೆ ಸಮಾಜದ ಸ್ವಚ್ಛತೆಗೆ ಪಣ ತೊಡಬೇಕು ಎಂದರು.
ಪರಿಸರ ಉಳಿವಿಗೆ ರಕ್ಷಕರಾಗಬೇಕಿದೆ
ಪುತ್ತೂರಿನ ಯುವ ವಿಜ್ಞಾನಿ ಸಂಶೋಧಕ ಸ್ವಸ್ತಿಕ್ಪದ್ಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ನಾವು ಪರಿಸರ ಸ್ವಚ್ಛತೆಗಾಗಿ ಪರಿಸರ ಪೊಲೀಸ್ ಆಗಿ ಪ್ರತೀ ದಿನ ಕಾರ್ಯ ನಿರ್ವಹಿಸಬೇಕಿದೆ. ಪ್ಲಾಸ್ಟಿಕ್ ನಮಗೆ ಮಾರಕ ಎನ್ನುವುದು ಜನರಲ್ಲಿ ನಂಬಿಕೆ ಆದರೆ ಸಮಸ್ಯೆ ಪ್ಲಾಸ್ಟಿಕ್ನದ್ದಲ್ಲ ಅದನ್ನು ಬಳಸುವ ಮನುಷ್ಯರದ್ದು. ನಾವು ಒಂದು ಬಾರಿ ಬಳಸಿ ಅದನ್ನು ಎಲ್ಲೆಂದರಲ್ಲಿ ಎಸೆಯುತ್ತೇವೆ. ಮುಖ್ಯವಾಗಿ ಪ್ಲಾಸ್ಟಿಕ್ ಸರಿಯಾಗಿ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಪ್ಲಾಸ್ಟಿಕ್ನೊಂದಿಗೆ ಜೈವಿಕ ತ್ಯಾಜ್ಯವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.