ಪ್ಲಾಸ್ಟಿಕ್‌ ನಿರ್ಮೂಲನ ಅಭಿಯಾನವೂ ಯಶಸ್ವಿಯಾಗಲಿ


Team Udayavani, Oct 3, 2019, 4:59 AM IST

x-23

ಜನರ ಸಹಭಾಗಿತ್ವವಿದ್ದರೆ ಹೇಗೆ ಒಂದು ಯೋಜನೆ ಅಭೂತಪೂರ್ವವಾಗಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಸ್ವಚ್ಛ ಭಾರತ ಅಭಿಯಾನವೇ ಉತ್ತಮ ಉದಾಹರಣೆ.

ಸರಿಯಾಗಿ ಐದು ವರ್ಷದ ಹಿಂದೆ ಪ್ರಾರಂಭಿಸಿದ ಸ್ವತ್ಛ ಭಾರತ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಜಾಗತಿಕ ಮಟ್ಟದಲ್ಲಿ ಈ ಅಭಿಯಾನಕ್ಕೆ ಸಿಕ್ಕಿರುವ ಮನ್ನಣೆಯೇ ಸಾಕ್ಷಿ. ಅಭಿಯಾನದಿಂದಾಗಿ ನಮ್ಮ ಪರಿಸರ ಸ್ವತ್ಛವಾಗಿದೆ ಎನ್ನುವುದಕ್ಕಿಂತಲೂ ಜನರ ಚಿಂತನಾಕ್ರಮದಲ್ಲಿ ಈ ಅಭಿಯಾನ ಉಂಟು ಮಾಡಿರುವ ಬದಲಾವಣೆ ಹೆಚ್ಚು ಮಹತ್ವದ್ದು. ಐದು ವರ್ಷದ ಹಿಂದೆ ಯಾರಾದರೂ ದೇಶವನ್ನು ಬಹಿರ್ದೆಸೆ ಮುಕ್ತಗೊಳಿಸುವುದು ಅಥವಾ ನಮ್ಮ ರಸ್ತೆ ಬೀದಿಗಳನ್ನು ಕಸ ಕಡ್ಡಿ ಇತ್ಯಾದಿ ಮಲಿನಗಳಿಂದ ಸಂಪೂರ್ಣ ಮುಕ್ತಗೊಳಿಸಬೇಕೆಂದು ಹೇಳಿದ್ದರೆ ಇದು ಸಾಧ್ಯವಾಗುವ ವಿಚಾರವಲ್ಲ ಎಂಬ ಉತ್ತರ ಸಿಗುತ್ತಿತ್ತು. ಆದರೆ ಐದು ವರ್ಷದಲ್ಲಿ ದೇಶ ಸಂಪೂರ್ಣವಾಗಿ ಬಹಿರ್ದೆಸೆ ಮುಕ್ತವಾಗಿದೆ. ಸುತ್ತಮುತ್ತಲಿನ ವಠಾರ, ಬೀದಿಗಳು, ರಸ್ತೆಗಳು ತಕ್ಕಮಟ್ಟಿಗಾದರೂ ಸ್ವತ್ಛವಾಗಿರುವಂತೆ ಕಂಡು ಬರುತ್ತಿವೆ ಎಂದಾದರೆ ಅದಕ್ಕೆ ಕಾರಣ ಜನರು
ಈ ಅಭಿಯಾನವನ್ನು ಸ್ವೀಕರಿಸಿದ ರೀತಿ. ಸ್ವಚ್ಛತೆ ನಮ್ಮ ಬದುಕಿಗೆ ಅನಿವಾರ್ಯ ಎಂಬ ಭಾವನೆಯನ್ನು ಜನರ ಮನಸಿನಲ್ಲಿ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಫೂರ್ತಿದಾಯಕ ನಾಯಕತ್ವದಿಂದಾಗಿ ಸಿನೆಮಾ, ಕ್ರೀಡೆ, ಕಾರ್ಪೊರೆಟ್‌ ವಲಯ ಸೇರಿದಂತೆ ವಿವಿಧ ರಂಗಗಳಿಗೆ ಸೇರಿದ ಸೆಲೆಬ್ರಿಟಿಗಳಿಂದ ತೊಡಗಿ ಗ್ರಾಮೀಣ ಭಾಗದ ತಳಮಟ್ಟದ ಕಾರ್ಯಕರ್ತರ ತನಕ ಎಲ್ಲರನ್ನೂ ಈ ಅಭಿಯಾನದಲ್ಲಿ ಒಳಗೊಳ್ಳುವಂತೆ ಮಾಡಿದರು. ಈ ನೆಲೆಯಲ್ಲಿ ಅಭಿ ಯಾನ ವನ್ನು ನೈರ್ಮಲ್ಯದ ಕ್ರಾಂತಿ ಎಂದೂ ಹೇಳಬಹುದು.

2014ಕ್ಕಿಂತ ಮೊದಲು ದೇಶದಲ್ಲಿ ಸುಮಾರು 60 ಕೋಟಿ ಜನರು ಬಹಿರ್ದೆಸೆಗೆ ಬಯಲನ್ನು ಆಶ್ರಯಿಸಿ ದ್ದರು. ಈ ಪೈಕಿ 55 ಕೋಟಿ ಜನ ಗ್ರಾಮೀಣ ಭಾಗಗಳಲ್ಲಿಯೇ ಇದ್ದರು. ಆದರೆ ಐದೇ ವರ್ಷದಲ್ಲಿ ದೇಶ ಸಂಪೂರ್ಣವಾಗಿ ಬಯಲು ಬಹಿ ರ್ದೆಸೆ ಮುಕ್ತವಾಯಿತು. 530 ಜಿಲ್ಲೆಗಳ 5,20,000ಕ್ಕೂ ಅಧಿಕ ಹಳ್ಳಿಗಳನ್ನು ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಲಾ ಯಿತು. ಜನರ ಸಹಭಾಗಿತ್ವವಿದ್ದರೆ ಹೇಗೆ ಒಂದು ಯೋಜನೆ ಅಭೂತಪೂರ್ವವಾಗಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಸ್ವತ್ಛ ಭಾರತ ಅಭಿಯಾನವೇ ಉತ್ತಮ ಉದಾಹರಣೆ. ಪ್ರಧಾನಮಂತ್ರಿಯಿಂದ ಹಿಡಿದು ಗ್ರಾಮ ಪಂಚಾಯತ್‌ ಸದಸ್ಯನ ತನಕ ಪ್ರತಿಯೊಬ್ಬರು ಸ್ವತ್ಛತೆ ತನ್ನ ಕರ್ತವ್ಯ ಎಂದು ಭಾವಿಸುವಂತೆ ಮಾಡಿದ್ದರಿಂದಲೇ ಯೋಜನೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು.

ಸರಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಮಾತ್ರವಲ್ಲದೆ ಸಂಪನ್ಮೂಲಗಳನ್ನೂ ದೊಡ್ಡ ಮಟ್ಟದಲ್ಲಿ ಸ್ವತ್ಛ ಭಾರತ ಅಭಿಯಾನದಲ್ಲಿ ತೊಡಗಿಸಿತು. ಶೌಚಾಲಯ ನಿರ್ಮಾಣ ಮತ್ತು ನೈರ್ಮಲ್ಯಕ್ಕಾಗಿ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವಿನಿಯೋಗಿಸಿತು. ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ಮತ್ತು ಪ್ರೋತ್ಸಾಹ ಧನವನ್ನು ನೀಡಲಾಯಿತು. ಶೌಚಾಲಯ ಇಲ್ಲದಿರುವುದೇ ಸಾಮಾಜಿಕ ಕಳಂಕ ಎಂಬ ಭಾವನೆಯನ್ನು ಯಶಸ್ವಿಯಾಗಿ ಸೃಷ್ಟಿಸಲಾಯಿತು. ಇದಕ್ಕಾಗಿ ನವಮಾಧ್ಯಮ ಮತ್ತು ಸಾಂಪ್ರದಾಯಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಯಿತು.

ಸ್ವತ್ಛ ಜಿಲ್ಲೆಗಳಿಗೆ ಪ್ರಶಸ್ತಿ ನೀಡಿದ್ದು, ಸತ್ಯಾಗ್ರಹಿಗಳ ಮಾದರಿಯಲ್ಲಿ ಸ್ವಚ್ಛಾಗ್ರಹಿಗಳನ್ನು ನೇಮಿಸಿ ತರಬೇತಿ ನೀಡಿದ್ದು, ತಳಮಟ್ಟದಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದು, ಸ್ವತ್ಛತೆಯ ಕೈಂಕರ್ಯದಲ್ಲಿ ಕೈಜೋಡಿಸಿ ಸಾಮಾನ್ಯರಲ್ಲಿ ಅಸಾಮಾನ್ಯರಾದವರನ್ನು ಗುರುತಿಸಿ ಗೌರವಿಸಿದ್ದೆಲ್ಲ ಒಟ್ಟಾರೆ ವ್ಯವಸ್ಥೆಯ ಮೇಲೆ ಧನಾತ್ಮಕವಾದ ಪರಿಣಾಮವನ್ನು ಬೀರಿತು. ಹಾಗೆಂದು ಇಲ್ಲಿಗೆ ಈ ಅಭಿಯಾನ ಮುಗಿಯಿತು ಎಂದು ಭಾವಿಸಬಾರದು. ಸ್ವತ್ಛತೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಸರಕಾರದ ಮುಂದಿನ ನಡೆಗಳು ಇದಕ್ಕೆ ಪೂರಕವಾಗಿರಬೇಕು.

ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನಿಂದ ಪ್ರೇರಿತವಾಗಿ ಸರಕಾರ 2022ಕ್ಕಾಗುವಾಗ ಬಳಸಿ ಎಸೆಯುವ ಪ್ಲಾಸ್ಟಿಕ್‌ ಮುಕ್ತಗೊಳಿಸುವ ಇನ್ನೊಂದು ದೊಡ್ಡ ಗುರಿಯನ್ನು ಹಾಕಿಕೊಂಡಿದೆ. ಒಂದರ್ಥದಲ್ಲಿ ಇದು ಸ್ವತ್ಛ ಭಾರತ ಅಭಿಯಾನಕ್ಕಿಂತಲೂ ದೊಡ್ಡ ಕಾರ್ಯ. ಸ್ವತ್ಛತೆ ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಮುಖ್ಯವಾಗುತ್ತದೆ. ಆದರೆ ಪ್ಲಾಸ್ಟಿಕ್‌ ಹಾಗಲ್ಲ, ಅದು ನಮ್ಮ ಪರಿಸರವನ್ನು ಶಾಶ್ವತವಾಗಿ ಕೆಡಿಸುವಂಥದ್ದು. ತಲೆಮಾರುಗಳ ತನಕ ಅದರ ದುಷ್ಪರಿಣಾಮ ಇರುತ್ತದೆ. ಇಂದು ಪ್ಲಾಸ್ಟಿಕ್‌ ಬಳಕೆಗೆ ನಾವು ಸ್ವನಿಯಂತ್ರಣ ಹಾಕಿದರೆ ಅದು ನಮ್ಮ ಭವಿಷ್ಯದ ತಲೆಮಾರಿಗೆ ಕೊಡುವ ದೊಡ್ಡ ಯೋಗದಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಪ್ರೇರಣೆಯಿಂದ ಪ್ಲಾಸ್ಟಿಕ್‌ ತ್ಯಜಿಸುವ ಅಭಿಯಾನ ಕೂಡ ಒಂದು ಜನಾಂದೋಲನವಾಗಿ ಬದಲಾಗಬೇಕು.

ಟಾಪ್ ನ್ಯೂಸ್

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.