ವಿಮಾನದಲ್ಲಿ ಮೂತ್ರವಿಸರ್ಜನೆಗೆ ನಿರಾಕರಣೆ : ಆ ಏಳು ಗಂಟೆ ಆಕೆ ಕಳೆದದ್ದು ಹೇಗೆ ಗೊತ್ತೇ?

Team Udayavani, Oct 3, 2019, 7:10 AM IST

Air-Canada-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರತೀದಿನ ನಾವು ಯಾವ್ಯಾವುದೋ ರೀತಿಯ ಚಿತ್ರವಿಚಿತ್ರ ಸುದ್ದಿಗಳನ್ನು ವಿಶ್ವದ ನಾನಾ ಭಾಗಗಳಿಂದ ಕೇಳುತ್ತಲೇ ಇರುತ್ತೇವೆ. ಇಲ್ಲಿ ಈಗ ಹೇಳಲು ಹೊರಟಿರುವುದು ಅಂತದ್ದೇ ಒಂದು ವಿಚಿತ್ರವಾದ ಆದರೆ ಬಹಳ ಅವಮಾನಕಾರಿಯಾದ ವಿಚಾರವನ್ನು.

ಏರ್ ಕೆನಡಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಬರೋಬ್ಬರಿ ಏಳು ಗಂಟೆ ಮೂತ್ರವಿಸರ್ಜನೆಗೆ ಅವಕಾಶ ನೀಡದೇ ಇದ್ದ ಕಾರಣ ಆ ಮಹಿಳಾ ಪ್ರಯಾಣಿಕರೊಬ್ಬರು ತನ್ನ ಸೀಟಿನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡು ವಿಮಾನ ಲ್ಯಾಂಡಿಂಗ್ ಆಗುವವರೆಗೆ ಅದರಲ್ಲೇ ಕುಳಿತಿದ್ದ ಅಮಾನವೀಯ ಘಟನೆಯೊಂದು ವರದಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏನು ಕಥೆ?
26 ವರ್ಷ ಪ್ರಾಯದ ಆ ಮಹಿಳೆ ಕೊಲಂಬಿಯಾದ ಬೊಗೋಟಾದಿಂದ ಐರ್ಲ್ಯಾಂಡ್ ನ ಡಬ್ಲಿನ್ ಗೆ ಪ್ರಯಾಣಿಸುತ್ತಿದ್ದರು. ಮತ್ತು ಈ ವಿಮಾನ ಹೊರಡುವುದು ಎರಡು ಗಂಟೆ ತಡವಾಗಿತ್ತು. ಮತ್ತು ವಿಮಾನ ಹೀಗೆ ನಿಂತಿದ್ದ ಸಮಯದಲ್ಲೇ ಈ ಮಹಿಳೆಗೆ ಮೂತ್ರಶಂಕೆಯಾಗಿ ಆಕೆ ವಿಮಾನದಲ್ಲಿದ್ದ ಟಾಯ್ಲೆಟ್ ಗೆ ಹೋಗಲು ಎದ್ದಿದ್ದಳು. ಆದರೆ ವಿಚಿತ್ರವೆಂಬಂತೆ ಗಗನ ಸಖಿ ಈಕೆಯನ್ನು ಟಾಯ್ಲೆಟ್ ಕಡೆ ಹೋಗದಂತೆ ತಡೆಯುತ್ತಾರೆ. ಆದರೆ ಈ ಮಹಿಳೆ ತನಗೆ ಎದುರಾಗಿದ್ದ ತುರ್ತು ಸ್ಥಿತಿಯನ್ನು ವಿವರಿಸಿದರೂ ಸಿಬ್ಬಂದಿ ಆಕೆಗೆ ಅವಕಾಶವನ್ನೇ ನೀಡುವುದಿಲ್ಲ.

ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಎರಡು ಗಂಟೆಗಳಲ್ಲಿ ಕನಿಷ್ಟವೆಂದರೂ ಆಕೆ ನಾಲ್ಕು ಸಲ ವಿಮಾನ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರ ಕಟು ವರ್ತನೆ ಮಹಿಳೆಗೆ ಅಚ್ಚರಿ ಮೂಡಿಸಿದೆ. ವಿಮಾನ ಸಿಬ್ಬಂದಿಯ ಗದರುವಿಕೆಗೆ ಕಂಗಾಲಾದ ಮಹಿಳೆ ತನ್ನ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಆದರೆ ದುರದೃಷ್ಟವೆಂಬಂತೆ ಇದೇ ಸಂದರ್ಭದಲ್ಲಿ ಮಹಿಳೆಗೆ ಕುಳಿತ ಜಾಗದಲ್ಲೇ ಮೂತ್ರವಿಸರ್ಜನೆಯಾಗಿದೆ.

ಆ ಬಳಿಕ ಈ ಪ್ರಯಾಣಿಕೆ ಅನುಭವಿಸಿದ್ದು ಅಕ್ಷರಶಃ ನರಕಯಾತನೆ! ಬೊಗೋಟಾದಿಂದ ಹೊರಟ ವಿಮಾನ ತನ್ನ ಯಾನ ಮಧ್ಯದಲ್ಲಿ ಟೊರೆಂಟೋದಲ್ಲಿ ನಿಲ್ಲುವವರೆಗೆ ಬರೋಬ್ಬರಿ ಏಳುಗಂಟೆ ಆಕೆ ತನ್ನ ಸೀಟಿನಲ್ಲಿ ತಾನು ವಿಸರ್ಜಿಸಿದ ಮೂತ್ರದ ಮೇಲೆಯೇ ಹಿಂಸೆ ಅನುಭವಿಸಿಕೊಂಡು ಕುಳಿತುಕೊಳ್ಳುವಂತಾಯಿತು.

ಟೊರೆಂಟೋದಲ್ಲಿ ವಿಮಾನ ನಿಲ್ಲುತ್ತಿದ್ದಂತೆ ನಿಲ್ದಾಣದಲ್ಲೇ ಮಹಿಳೆ ರೂಂ ಒಂದನ್ನು ಬುಕ್ ಮಾಡಿ ಸ್ನಾನ ಮಾಡಿ ಶುಭ್ರವಾದ ಬಳಿಕವಷ್ಟೇ ಆಕೆ ನಿರಾಳವಾಗಿದ್ದು. ಈ ಎಲ್ಲಾ ವಿಚಾರವನ್ನು ಮಹಿಳೆ ಡಬ್ಲಿನ್ ಲೈವ್ ಗೆ ನೀಡಿರುವ ಸಂದರ್ಶನದಲ್ಲಿ ನೋವಿನಿಂದಲೇ ಹೇಳಿಕೊಂಡಿದ್ದಾರೆ. ಆ ಬಳಿಕ ಡಬ್ಲಿನ್ ತಲುಪವವರೆಗೂ ಏರ್ ಕೆನಡಾ ವಿಮಾನದ ಸಿಬ್ಬಂದಿ ಈಕೆಯನ್ನು ನಿರ್ಲಕ್ಷಿಸುತ್ತಿದ್ದ ವಿಚಾರ ಈ ಮಹಿಳೆಗೆ ಬಹಳಷ್ಟು ನೋವನ್ನುಂಟು ಮಾಡಿತ್ತು.

ಇನ್ನು ಡಬ್ಲಿನ್ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಈಕೆ ತನ್ನನ್ನು ಅವಮಾನಿಸಿದ ಸಿಬ್ಬಂದಿಯನ್ನು ಮಾತನಾಡಿಸಿ ತನಗಾದ ನೋವು ಮತ್ತು ಅವಮಾನವನ್ನು ಹೇಳಿಕೊಳ್ಳಬೇಕೆಂದು ಬಯಸಿದ್ದಾರೆ ಆದರೆ ವಿಚಿತ್ರವೆಂಬಂತೆ ಆ ಸಿಬ್ಬಂದಿ ವಿಮಾನದ ಹಿಂಭಾಗದಲ್ಲಿ ಹೇಡಿಯಂತೆ ಅಡಗಿಕೊಂಡಿದ್ದರು ಎಂಬ ವಿಚಿತ್ರ ಮಾಹಿತಿಯನ್ನೂ ಸಹ ಮಹಿಳೆ ತನ್ನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಇದೀಗ ಮಹಿಳೆ ತಾನು ಪ್ರಯಾಣಿಸಿದ್ದ ವಿಮಾನ ಯಾನ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು ಈ ಘಟನೆಯ ಕುರಿತಾಗಿ ದೂರನ್ನೂ ಸಹ ನೀಡಿರುವುದಾಗಿ ಆ ಮಹಿಳೆ ಹೇಳಿಕೊಂಡಿದ್ದಾರೆ.

ಆದರೆ ವಿಮಾನ ಸಿಬ್ಬಂದಿ ಈ ಮಹಿಳಾ ಪ್ರಯಾಣಿಕೆಯೊಂದಿಗೆ ಅಷ್ಟೊಂದು ನಿರ್ದಯವಾಗಿ ಮತ್ತು ನಿಷ್ಠುರವಾಗಿ ನಡೆದುಕೊಂಡಿದ್ದು ಮಾತ್ರ ಯಾಕೆ ಎಂಬುದು ಯಾರಿಗೂ ಅರ್ಥವಾಗದ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ.

ಟಾಪ್ ನ್ಯೂಸ್

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.