“ಗುಣಮಟ್ಟ ಕಾಪಾಡುವತ್ತ ಕಾಫಿ ಬೆಳೆಗಾರರು ಗಮನ ಹರಿಸಿ’
Team Udayavani, Oct 3, 2019, 5:14 AM IST
ಶನಿವಾರಸಂತೆ: ಕಾಫಿ ಬೆಳೆಯವ ನಾಡಿನಲ್ಲಿ ಪ್ರತಿಯೊಬ್ಬರೂ ಕಾಫಿ ಸೇವನೆ ಮಾಡುವುದ್ದರಿಂದ ಕಾಫಿ ಉದ್ದಿಮೆ ಅಭಿವೃದ್ದಿ ಹೊಂದುತ್ತದೆ ಎಂದು ಹಾಸನ ಕಾಫಿ ಮಂಡಳಿ ಜಂಟಿ ನಿರ್ದೇಶಕ ಗುಡ್ಡೇಗೌಡ ಹೇಳಿದರು.
ಅವರು ಸ್ಥಳೀಯ ಗುಡುಗಳಲೆ ಮಂಜುನಾಥ ಪೆಟ್ರೋಲ್ ಬಂಕ್ ಬಳಿ ಅಂತಾರಾಷ್ಟ್ರೀಯ ಕಾಫಿ ಡೇ ಅಂಗವಾಗಿ ಕೊಡಗು ಜಿಲ್ಲಾ ಕರ್ನಾಟಕ ಬೆಳೆಗಾರರ ಒಕ್ಕೂಟ, ಶನಿವಾರಸಂತೆ ನಮ್ಮ ಬೆಳೆಗಾರರ ಸ್ವ-ಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾಫಿ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಫಿ ಅಂತಾರಾಷ್ಟ್ರೀಯ ವಾಣಿಜ್ಯ ಬೆಳೆಯ ಉದ್ದೇಮೆಯಾಗಿದ್ದು ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಾಗಿ ಕಾಫಿಯನ್ನು ಬೆಳೆಯಲಾಗುತ್ತಿದ್ದರೂ ಇತ್ತೀಜೆಗಿನ ದಿನಗಳಲ್ಲಿ ಭಾರತದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇಳಿಮುಖವಾಗುತ್ತಿರುವುದು ಬೆಳೆಗಾರರು ಹಾಗೂ ಕಾಫಿ ಉದ್ದೇಮಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ, ಭಾರತದ ಕಾಫಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶ, ಕಾಫಿ ಬೆಳೆಗಾರರ ಸಂಕಷ್ಟ ಮುಂತಾದ ವಿಷಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಶತಮಾನಗಳಿಂದ ಕಾಫಿ ಬೆಳೆಯುವ ನಾಡಿನಲ್ಲಿ ಕಾಫಿ ಸೇವನೆ ಮಾಡುವುದು ಕಮ್ಮಿಯಾಗುತ್ತಿದೆ ಗ್ರಾಹಕರು ಚಹಪುಡಿಯನ್ನು ಖರೀದಿಸುತ್ತಾರೆ ಕಾಫಿ ಗುಣಮಟ್ಟದಲ್ಲಿ ವ್ಯತ್ಯಾಸ ಮುಂತಾದವುಗಳಿಂದ ಕ ಬೇಡಿಕೆ ಇಳಿಮುಖವಾಗಲು ಕಾರಣವಾಗುತ್ತಿದೆ ಎಂದರು. ಕಾಫಿ ಬೆಳೆಯನ್ನು ಗುಣಾತ್ಮಕವಾಗಿ ಬೆಳೆಸುವುದು, ಕಾಫಿ ಬೆಳೆ ಮತ್ತು ಕಾಫಿ ಪಾನಿಯ ಸೇವಿಸುವ ಬಗ್ಗೆ ಗ್ರಾಹಕರು, ಸಾರ್ವಜನಿಕರಲ್ಲಿ ಪ್ರೇರೆಪಿಸುವ ಕ್ರಮದಿಂದ ಕಾಫಿ ಉದೇಮೆ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಕೆಡಿಎಫ್ ಅಧಿಕಾರಿ ನಂದ ಬೆಳ್ಳಿಯಪ್ಪ, ದಿನೇಶ್, ಕಾಫಿ ಬೆಳೆಗಾರರ ಸಂಘದ ಪ್ರಮುಖರಾದ ಎನ್.ಬಿ.ನಾಗಪ್ಪ, ಬಿ.ಕೆ.ಚಣ್ಣಪ್ಪ, ಎಸ್.ಎಂ.ಉಮಾಶಂಕರ್, ಶನಿವಾರಸಂತೆ ಕಾಫಿ ಮಂಡಳಿ ಸಂಪರ್ಕಾಧಿಕಾರಿ ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.
ಉಪ-ಉತ್ಪನ್ನ ಮಾಹಿತಿ
ಕೊಡಗು ಜಿಲ್ಲಾ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್ ರೈತರ ಉತ್ಪಾದಕ ಸಂಸ್ಥೆ, ಕಾಫಿ ಉದ್ಯಮ ಕುರಿತು ಮಾಹಿತಿ ನೀಡಿದರು. ಕಾಫಿ ಮಂಡಳಿಯಿಂದ ದೊರಕುವ ಸವಲತ್ತುಗಳ ಬಗ್ಗೆ ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕ ಶಿವಕುಮಾರಸ್ವಾಮಿ, ರೈತರ ಕೃಷಿ ಉತ್ಪಾದಕ ಉಪ-ಉತ್ಪನ್ನಗಳಿಂದ ದಿನ ನಿತ್ಯದ ಪ್ಪಾಸ್ಟಿಕ್ ತ್ಯಜಿಸುವ ಕುರಿತು ಸೋಮವಾರಪೇಟೆ ಕಾಫಿ ಮಂಡಳಿ ಎಸ್‌ಎಲ್‌ಒ ಮರುಳೀಧರ್ ಮಾಹಿತಿ ನೀಡಿದರು.
ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.