ಭದ್ರತಾ ಮಂಡಳಿಯಲ್ಲಿ ಭಾರತ ಇದ್ದರೆ ವಿಶ್ವಸಂಸ್ಥೆಗೆ ಒಳಿತು
Team Udayavani, Oct 3, 2019, 6:35 AM IST
ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸದಸ್ಯತ್ವ ಪಡೆಯುವ ಎಲ್ಲ ಅರ್ಹತೆಯನ್ನೂ ಭಾರತ ಹೊಂದಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ವಾಷಿಂಗ್ಟನ್‌ನಲ್ಲಿ ಹೇಳಿದ್ದಾರೆ. ಭಾರತ ಇಲ್ಲದೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೂ ಕುಂದು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವಕ್ಕಾಗಿ ಕಳೆದ ಹಲವು ವರ್ಷ ಗಳಿಂದಲೂ ಆಗ್ರಹಿಸುತ್ತಿದೆ. ಈ ಕುರಿತಂತೆ ಅಮೆರಿಕದಲ್ಲಿ ನಡೆದ ಸಮಾರಂಭದಲ್ಲಿ ಪ್ರಸ್ತಾಪಿಸಿದ್ದು, ವಿಶ್ವದ ಅತಿ ದೊಡ್ಡ ಆರ್ಥಿಕತೆ ಮತ್ತು ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶವನ್ನು ವಿಶ್ವಸಂಸ್ಥೆಯು ತನ್ನ ಭದ್ರತಾ ಸಮಿತಿಯಲ್ಲಿ ಸದಸ್ಯನನ್ನಾಗಿ ಹೊಂದಿಲ್ಲದೇ ಇದ್ದರೆ, ಇದು ಆ ದೇಶದ ಜತೆಗೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮನವೊಲಿಕೆ ಮುಂದುವರಿಕೆ: ರಷ್ಯಾದಿಂದ ಎಸ್-400 ಟ್ರಂಪ್ ಕ್ಷಿಪಣಿಗಳನ್ನು ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಅಮೆರಿಕ ಸರಕಾರದ ಮನವೊಲಿಕೆ ಪ್ರಯತ್ನವನ್ನೂ ವಿದೇಶಾಂಗ ಸಚಿವ ಜೈಶಂಕರ್ ನಡೆಸಿದ್ದಾರೆ. ಭಾರತದ ಅಗತ್ಯವನ್ನು ಅಮೆರಿಕ ಅರಿತು ವರ್ತಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಎಸ್-400 ಕ್ಷಿಪಣಿ ಖರೀದಿ ಬಗ್ಗೆ ನಾವು ನಿರ್ಧರಿಸಿದ್ದೇವೆ ಮತ್ತು ನಾವು ಅಮೆರಿಕ ಸರಕಾರಕ್ಕೆ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.