ತಟ್ಟೆ ತುಂಬಾ ಬೆಣ್ಣೆ ದೋಸೆ


Team Udayavani, Oct 3, 2019, 10:02 AM IST

x-54

ಭುವನ್‌ಗೆ ಬೆಣ್ಣೆ ದೋಸೆ ಎಂದರೆ ತುಂಬಾ ಇಷ್ಟ. ಅಮ್ಮ,”ವಿಜ್ಞಾನ ಟೀಚರ್‌ ಹೇಳಿರುವ ಪ್ರಾಜೆಕ್ಟ್ ಮಾಡಿದರೆ ಮಾತ್ರ ದೋಸೆ ಮಾಡಿಕೊಡುತ್ತೇನೆ’ ಎಂದಿದ್ದಾರೆ. ಭುವನ್‌, ಶಾಲೆಯ ಪ್ರಾಜೆಕ್ಟ್ ಮಾಡಿದನೇ? ಬೆಣ್ಣೆ ದೋಸೆ ತಿಂದನೇ?

ಸಂಜೆಯ ಟ್ಯೂಷನ್‌ ತರಗತಿ ಮುಗಿಸಿ ಓಡಿ ಬಂದ ಭುವನ್‌ “ಅಮ್ಮಾ ಹಸಿವು’ ಅನ್ನುತ್ತಲೇ ಮನೆಯೊಳಗೆ ಬಂದ. “ಏನೂ ಹೋಮ್‌ವರ್ಕ್‌ ಇಲ್ವಾ?’ ಎಂದು ಅಮ್ಮ ಅಡುಗೆಕೋಣೆಯಿಂದಲೇ ಕೇಳಿದರು. “ಬೇಗ ಬೇಗ ಹೋಂವರ್ಕ್‌ ಮುಗಿಸಿದರೆ ನಿನ್ನ ಇಷ್ಟದ ಬೆಣ್ಣೆ ದೋಸೆ ಮಾಡಿಕೊಡುವೆ’ ಎಂದು ಆಮಿ, ಒಡ್ಡಿದರು ಅಮ್ಮ.

“ಬೆಣ್ಣೆ ದೋಸೇನಾ? ನನಗೆ ಈಗ್ಲೆ ಬೇಕು.. ಹೋಮ್‌ ವರ್ಕ್‌ ಏನೂ ಕೊಟ್ಟಿಲ್ಲಮ್ಮಾ…’ ಎನ್ನುತ್ತಾ ಫ‌ುಟ್‌ಬಾಲ್‌ ಹಿಡಿದು ಆಡಲು ಮನೆಯಿಂದ ಹೊರಗೆ ಹೊರಟನು. ಅಷ್ಟರಲ್ಲಿ ಅಮ್ಮ “ಮೊನ್ನೆ ಹೇಳ್ತಿದ್ದೆ… ವಿಜ್ಞಾನದ ಪ್ರಾಜೆಕr… ಇದೆ ಅಂತ… ಮರೆತೆಯಾ?’ ಎಂದು ನೆನಪು ಮಾಡಿಸಿದಾಗ ಭುವನ್‌ಗೆ ನೆನಪು ಬಂತು. ಅವನು ಕೈಯಲ್ಲಿದ್ದ ಬಾಲನ್ನು ಬಿಸಾಡಿ “ಹೌದಮ್ಮ… ನನಗೆ ನೆನಪೇ ಇಲ್ಲ. ನೀನೀಗ ನೆನಪಿಸದೆ ಇರುತ್ತಿದ್ದರೆ ನಾನು ನಾಳೆ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆಗೆ ಗುರಿಯಾಗಬೇಕಿತ್ತು..’ ಎಂದನು. ಅವನು ತನ್ನ ಕೋಣೆಯೊಳಗೆ ಬಂದು ಚೀಲದಿಂದ ಪ್ರಾಜೆಕ್ಟ್ ಗೆ ಬೇಕಾದ ಹಾಳೆ, ಗಮ್‌, ಪೆನ್ಸಿಲ್‌, ಪೆನ್‌ ಮುಂತಾದ ಪರಿಕರಗಳನ್ನು ತೆಗೆದಿರಿಸಿದನು.

ಅವನಿಗೆ ಯಾಕೋ ಪ್ರಾಜೆಕ್ಟ್ ಮಾಡಲು ಉದಾಸೀನ ಹತ್ತಿತು. ಆಟ ಕೈ ಬೀಸಿ ಕರೆಯುತ್ತಿತ್ತು. ಅತ್ತ ಆಟವನ್ನೂ ಆಡಲಾಗುತ್ತಿಲ್ಲ, ಇತ್ತ ಪ್ರಾಜೆಕ್ಟ್ ಮಾಡಲೂ ಮನಸ್ಸು ಬರುತ್ತಿಲ್ಲ. ಭುವನ್‌ಗೆ ಕಾಗದದಲ್ಲಿ ಕ್ರಾಫ್ಟ್ ಮಾಡುವುದೆಂದರೆ ಬಹಳ ಇಷ್ಟ. ಅವನಿಗೆ ಕಾಗದ, ಪೆನ್ಸಿಲ್‌ ಕಂಡಾಕ್ಷಣ ಅವನ ಕೈಗಳು ಹಾಳೆಗಳಲ್ಲಿ ಆಡಲು ಆರಂಭಿಸದವು. ಸರಸರನೆ ಕಾಗದಗಳನ್ನು ತನಗೆ ಬೇಕಾದ ಆಕೃತಿಗೆ ಕತ್ತರಿಸಿ ವಿಮಾನವನ್ನು ತಯಾರಿಸಿದ. ಅದನ್ನು ಮನೆಯೊಳಗೆ ಗಾಳಿಯಲ್ಲಿ ತೇಲಿಸಿ ಹೊಡೆಯತೊಡಗಿದನು. ಒಂದು ಕಣ್ಣನ್ನು ಮುಚ್ಚಿ “ಶೂ’ ಅಂತ ರಾಕೆಟ್‌ ಉಡಾವಣೆ ಮಾಡಿದಂತೆ ಪೇಪರ್‌ ವಿಮಾನವನ್ನು ಎತ್ತರಕ್ಕೆ ಚಿಮ್ಮಿಸಿದನು. ನಂತರ ಚಕಚಕನೆ ಇನ್ನೊಂದು ಕಾಗದದ ಹಾಳೆಯನ್ನು ಕತ್ತರಿಸಿ ದೋಣಿ ಮಾಡಿದನು.

ಕಾಗದದಲ್ಲಿ ಇನ್ನೇನೋ ಆಕೃತಿ ತಯಾರಿಸಲು ಹೊರಟವನಿಗೆ ಅಮ್ಮನ ದನಿ ಎಚ್ಚರಿಸಿತು. “ಭುವನ್‌ ಪ್ರಾಜೆಕ್ಟ್ ಮುಗೀತಾ?’. ಅಯ್ಯೊ, ಪೇಪರ್‌ ಕ್ರಾಫ್ಟ್ ಮಾಡುತ್ತಾ ಪ್ರಾಜೆಕ್ಟ್ ಮಾಡೋದೇ ಮರೆತುಹೋಗಿತ್ತು. ತನ್ನ ಆಕೃತಿಗಳನ್ನೆಲ್ಲಾ ಅಮ್ಮನಿಗೆ ಕಾಣದಂತೆ ಬಚ್ಚಿಡಬೇಕೆಂದು ಹೊರಟನು. ಆದರೆ, ಅಷ್ಟರಲ್ಲಿ ತಡವಾಗಿತ್ತು. ಅಮ್ಮ ಒಳಗೆ ಬಂದುಬಿಟ್ಟಿದ್ದರು. “ಏನಿದು?’ ಅಂತ ಸುತ್ತಲೂ ನೋಡಿದರು. ಪ್ರಾಜೆಕ್ಟ್ ಮಾಡುವುದು ಬಿಟ್ಟು ಇನ್ನೇನೋ ಮಾಡುತ್ತಿರುವುದನ್ನು ಕಂಡು “ನಿನಗೆ ದೋಸೆ ಮಾಡಿಕೊಡುವುದಿಲ್ಲ. ಆಟ ಆಡುತ್ತಿದ್ದೀಯಲ್ಲಾ’ ಎಂದರು ಅಮ್ಮ. ಭುವನ್‌ ಮುಖ ಬಾಡಿತು. ಅಮ್ಮ ಸಿಟ್ಟಿನಿಂದ ಕೋಣೆಯಿಂದ ಹೊರಕ್ಕೆ ಹೋದರು.

ತನ್ನ ಇಷ್ಟದ ದೋಸೆ ತಿನ್ನಬಹುದೆಂದು ಕಾದು ಕುಳಿತಿದ್ದ ಭುವನ್‌ಗೆ ನಿರಾಸೆಯಾಗಿತ್ತು. ಅವನು “ಸಾರಿ ಅಮ್ಮಾ…’ ಎನ್ನುತ್ತಾ ಅಮ್ಮನ ಬಳಿ ಹೋದ. ಅಮ್ಮ, ಅವನ ತಲೆಗೂದಲಲ್ಲಿ ಕೈಯಾಡಿಸುತ್ತಾ “ಕಾಗದದಲ್ಲಿ ಎಷ್ಟು ಚೆನ್ನಾಗಿ ವಿಮಾನ, ದೋಣಿ, ಮನೆ ಮಾಡಿದ್ದೀಯಾ…’ ಎಂದರು. ಅಮ್ಮನ ಕೋಪ ಮಾಯವಾಗಿದ್ದನ್ನು ಕಂಡು ಭುವನ್‌ಗೆ ಖುಷಿಯಾಯಿತು. ಅಷ್ಟರಲ್ಲಿ ಅಡುಗೆ ಮನೆಯಿಂದ ದೋಸೆಯ ವಾಸನೆಯೂ ಬಂದಿತ್ತು. “ಹಸಿವಾಗ್ತಿದೆ ಅಂದೆಯಲ್ಲ…ನಿನ್ನ ಇಷ್ಟದ ಬೆಣ್ಣೆದೋಸೆ ಮಾಡಿದ್ದೀನಿ. ತಿಂದು ನಂತರ ಪ್ರಾಜೆಕ್ಟ್ ಮಾಡುವಿಯಂತೆ…’ ಎಂದು ದೋಸೆಯ ತಟ್ಟೆಯನ್ನು ಅವನ ಮುಂದಿಟ್ಟರು. ಭುವನ್‌ ಒಂದೊಂದೇ ದೋಸೆಯನ್ನು ಗಬಗಬನೆ ತಿನ್ನಲು ಪ್ರಾರಂಭಿಸಿದನು.

– ರಜನಿ ದುಬೈ

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.