ವಿಜಯಪುರ: ಮದ್ಯ ವ್ಯಸನಿ ಮಗನಿಂದ ತಂದೆಯ ಹತ್ಯೆ
Team Udayavani, Oct 3, 2019, 10:53 AM IST
ವಿಜಯಪುರ : ಮದ್ಯ ವ್ಯಸನಿ ಮಗನೊಬ್ಬ ಬುದ್ದಿ ಹೇಳಲು ಬಂದ ತಂದೆಯನ್ನೇ ಹತ್ಯೆ ಮಾಡಿರುವ ಕೃತ್ಯ ಜಿಲ್ಲೆಯ ಚಡಚಣ ತಾಲೂಕಿನ ಟಾಕಳಿ ಗ್ರಾಮದಲ್ಲಿ ಜರುಗಿದೆ.
ಟಾಕಳಿ ಗ್ರಾಮದ ಅಣ್ಣಪ್ಪ ತೊರವಿ ( 55 ) ಮಗನಿಂದಲೇ ಕೊಲೆಯಾದ ದುರ್ದೈವಿ.
ಮದ್ಯ ವ್ಯಸನಿ ಸಂಜೀವ ತೊರವಿ ( 38 ) ಎಂಬ ವ್ಯಕ್ತಿಯೇ ತಂದೆಯನ್ನು ಹತ್ಯೆ ಮಾಡಿರುವ ಆರೋಪಿ.
ಸಂಜೀವ ತೊರವಿ ನಿತ್ಯವೂ ಮದ್ಯ ಸೇವನೆ ಮಾಡಿ ಮನೆಗೆ ಬಂದು ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆಯುತ್ತಿದ್ದ.
ಇದರಿಂದ ಕುಟುಂಬ ಸದಸ್ಯರು ರೋಸಿ ಹೋಗಿದ್ದರು. ಬುಧವಾರ ರಾತ್ರಿಕೂಡ ಸಂಜೀವ ಮದ್ಯ ಸೇವಿಸಿ ನಶೆಯಲ್ಲೇ ಮನೆಗೆ ಬಂದು ತನ್ನ ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಇದನ್ನು ಕಂಡ ತಂದೆ ಅಣ್ಣಪ್ಪ ಬುದ್ದಿವಾದ ಹೇಳಿ ಜಗಳ ಬಿಡಿಸಲು ಬಂದಿದ್ದರು. ಆಗ ಕೊಡಲಿಯಿಂದ ಹೆತ್ತ ತಂದೆಯನ್ನು ಕೊಲೆ ಮಾಡಿದ್ದಾನೆ.
ಈ ಕುರಿತು ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.