ಕುಂಡಂತಾಯರಿಗೆ ಸೀತಾನದಿ ಪ್ರಶಸ್ತಿ
Team Udayavani, Oct 4, 2019, 5:02 AM IST
ಯಕ್ಷಗಾನ ಕ್ಷೇತ್ರದಲ್ಲಿ ಪ್ರವೃತ್ತಿಯಾಗಿ ತೊಡಗಿಸಿಕೊಂಡ ಎಲ್ಲೂರು ಸೀಮೆಯ ಕುಂಜೂರು ನಿವಾಸಿ ಜಾನಪದ ಸಂಶೋಧಕ ವಿದ್ವಾಂಸ, ಸಂಸ್ಕೃತಿಯ ಹರಿಕಾರ, ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯರಿಗೆ (ಕೆ.ಎಲ್. ಕುಂಡಂತಾಯ) ಪಡ್ರೆ ಚಂದು, ಹಾಗೂ ಎರ್ಮಾಳು ವಾಸುದೇವರಾಯರು ಗುರುಗಳು. ಸಮರ್ಥ ಯಕ್ಷಗಾನ ವೇಷಧಾರಿಯಾಗುವುದರ ಜೊತೆಗೆ ತಾಳಮದ್ದಳೆ ಅರ್ಥಧಾರಿಯೂ ಹೌದು. ಯಕ್ಷಗಾನ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ, ಕಮ್ಮಟಗಳ ಅವಲೋಕನ, ತಾಳಮದ್ದಳೆ ಸಪ್ತಾಹಗಳ ಅವಲೋಕನ, ವಿಮರ್ಶಾ ಲೇಖನಗಳಲ್ಲಿಯೂ ಇವರ ಕೊಡುಗೆ ಅಪಾರ. ಇವರ ಸಾಧನೆಯನ್ನು ಪರಿಗಣಿಸಿ ಈ ಸಲದ ಪ್ರತಿಷ್ಠೆಯ “ಅಭಿನವ ಪಾರ್ತಿಸುಬ್ಬ’ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಒಲಿದು ಅರಸಿ ಬಂದದ್ದು ಇವರ ಕೀರ್ತಿ ಮುಕುಟಕ್ಕೆ ಇನ್ನೊಂದು ಗರಿಯು ಸೇರ್ಪಡೆಗೊಂಡ ಹಾಗಾಯ್ತು. ಅ.7ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮೇಳದ ಕಲಾವಿದರಿಂದ ಜಾಂಬವತಿ ಕಲ್ಯಾಣ ಪ್ರಸಂಗದ ಪ್ರದರ್ಶನ ನೆರವೇರಲಿದೆ.
ಕುಂಡಂತಾಯರದ್ದು ಬಹುಮುಖ ಪ್ರತಿಭೆ. ನಾಗಾರಾಧನೆ, ಭೂತಾರಾದನೆ, ಯಕ್ಷಗಾನ ಕ್ಷೇತ್ರದಲ್ಲಿ ಅಗಾದ ಜ್ಞಾನವನ್ನು ಹೊಂದಿದವರು. ಎಲ್ಲೂರು ದೇವಳದಲ್ಲಿ ದೀವಟಿಗೆ ಬೆಳಕಿನ ಯಕ್ಷಗಾನ ಬಯಲಾಟವನ್ನು ಡಾ| ರಾಘವ ನಂಬಿಯಾರರ ನಿರ್ದೇಶನದಲ್ಲಿ ಸಂಯೋಜಿಸಿದ್ದು ಇವರ ಹಿರಿಮೆ.ಕಲಿತದ್ದು ವಿಜ್ಞಾನ ಪದವಿಯಾದರೂ ಸಾಹಿತ್ಯಪರ ಒಲವಿದ್ದು ಇಷ್ಟಪಟ್ಟು ಓದಿದ್ದು ಕನ್ನಡ ಸ್ನಾತಕೋತ್ತರ ಪದವಿ. ಉದಯವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ದೀರ್ಘಕಾಲ ಸಲ್ಲಿಸಿದ ಸೇವೆಯಲ್ಲಿ ಮೂಡಿ ಬಂದ ಮೌಲ್ಯಯುತ, ಸಂಶೋಧನಾತ್ಮಕ, ಅನನ್ಯ ಲೇಖನಗಳು ಸಾವಿರಾರು. ನಾಗಾರಾಧನೆ ಬಗ್ಗೆ ಇವರು ವಿಸ್ತೃತವಾದ ಕ್ಷೇತ್ರ ಕಾರ್ಯ ಅಧ್ಯಯನವನ್ನು ಮಾಡಿ ನೂರಾರು ಲೇಖನಗಳನ್ನು ಬರೆದು ಉಪನ್ಯಾಸ ನೀಡಿದ, ವೈದಿಕ ಪೂರ್ವದ ನಾಗಾರಾಧನೆ ಬಗ್ಗೆ ಸಂಶೋಧನೆ ಮಾಡಿ ಉಪನ್ಯಾಸ, ಲೇಖನ, ದಾಖಲೀಕರಣ ಮಾಡಿದ್ದಾರೆ.
ತುಳುನಾಡಿನ ಮಣ್ಣಿನ ವಿಶಿಷ್ಟ ಆರಾಧನೆಯಾದ, ಭೂತಾರಾಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರು ಅವುಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಲೇಖನ, ಪುಸ್ತಕ ,ಉಪನ್ಯಾಸ , ನಡೆಸಿ ಸಂಗ್ರಹಯೋಗ್ಯವಾದ ಕೃತಿಗಳನ್ನು ರಚಿಸಿದ್ದಾರೆ .
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ದೇವಾಲಯಗಳ ಕುರಿತು ಐತಿಹಾಸಿಕ, ಜಾನಪದ, ಪೌರಾಣಿಕ, ಹಿನ್ನೆಲೆಯನ್ನು ಅಧ್ಯಯನ ಮಾಡಿ ಅನೇಕ ದೇವಾಲಯಗಳ ಕುರಿತು ಕೃತಿಗಳನ್ನು ರಚಿಸಿದ್ದು, ಪುರಾತನ ದೇವಾಲಯಗಳು ಜೀಣೊìàದ್ಧಾರ ಹೊಂದುವ ಸಮಯದಲ್ಲಿ ರಚಿಸಲ್ಪಡುವ ಕ್ಷೇತ್ರ ಪರಿಚಯ ಲೇಖನಗಳಿಗೆ ಇವರದೇ ಸಂಪಾದಕೀಯತ್ವ.
ವಿರಾಡ್ – ದರ್ಶನ, ದುರ್ಗಾ ದರ್ಶನ ಶಿಲೆಗಿರಿ ಸುಬ್ಬನ ಪ್ರಸಂಗ,ಧರ್ಮನೇಮ,ಅಣಿ ಅರದಲ,ಸಿರಿ ಸಿಂಗಾರ, ಸಿರಿನಡೆ ಪೇರೂರು ಆಲಡೆ, ಮಾರ್ನೆಮಿ, ದೇವಾಲಯ ಪೂರ್ವೋತ್ತರ, ನಂಬಿಕೆ ನಡವಳಿಕೆ, ಪರ್ವಕಾಲ ಇವರ ಕೆಲವು ಪ್ರಮುಖ ಕೃತಿಗಳು.
-ಸುರೇಂದ್ರ ಪಣಿಯೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.