ಕುಮ್ಮಟದುರ್ಗ ದಸರಾ ಆರಂಭಕ್ಕೆ ಒತ್ತಾಯ
ಸಂಶೋಧಕ ಡಾ| ಚಿದಾನಂದಮೂರ್ತಿ ಕುಮ್ಮಟದುರ್ಗಕ್ಕೆ ಭೇಟಿಅಗತ್ಯ ಮಾಹಿತಿ ಸಂಗ್ರಹಿಸಲು ಆಗಮನ
Team Udayavani, Oct 3, 2019, 6:23 PM IST
ಗಂಗಾವತಿ: ನಾಡಹಬ್ಬ ಮಹಾನವಮಿ ದಸರಾ ಹಬ್ಬವನ್ನು ಮೊದಲು ಕುಮ್ಮಟದುರ್ಗದಲ್ಲಿ ಆಚರಣೆ ಮಾಡಲಾಗುತ್ತಿತ್ತು. ಮುಂದಿನ ವರ್ಷದಿಂದ ಕುಮ್ಮಟದುರ್ಗದಲ್ಲಿ ದಸರಾ ಹಬ್ಬಕ್ಕೆ ಚಾಲನೆ ನೀಡಿ ಹಂಪಿಯ ಮಹಾನವಮಿ ದಿಬ್ಬದಲ್ಲಿ ಮುಕ್ತಾಯ ವಾಗುವಂತೆ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡುವಂತೆ ಶೀಘ್ರವೇ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದಾಗಿ ಖ್ಯಾತ ಸಂಶೋಧಕ ಪ್ರೊ| ಎಂ.ಚಿದಾನಂದಮೂರ್ತಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮ್ಮಟದುರ್ಗದಲ್ಲಿ ಮೊದಲು ದಸರಾ ಆಚರಣೆ ಮಾಡಲಾಗಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ತಾವು ಇದೀಗ ಕುಮ್ಮಟದುರ್ಗ, ಹೇಮಗುಡ್ಡ ಪ್ರದೇಶಕ್ಕೆ ಆಗಮಿಸಿದ್ದು, ಈ ವರದಿ ನಿಜವಿದೆ. ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನ ಕುಮ್ಮಟದುರ್ಗದ ಅರಸರು ಆಳ್ವಿಕೆ ನಡೆಸುತ್ತಿದ್ದರು. ದಸರಾ, ದೀಪಾವಳಿ ಸೇರಿ ನಾಡಿನ ಪರಂಪರೆ ಹಬ್ಬ, ಸಂಸ್ಕೃತಿಗಳನ್ನು ಅರಸರು ಪಾಲನೆ ಮಾಡುತ್ತಿದ್ದ ಅನೇಕ ಕುರುಹುಗಳಿವೆ. ಕುಮ್ಮಟದುರ್ಗದ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಪ್ರವಾಸೋದ್ಯಮ, ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಇಲಾಖೆಯವರು ಇಲ್ಲಿನ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಬೇಕು. ಈ ಸ್ಥಳಗಳ ಕುರಿತು ಪ್ರವಾಸಿಗರಿಗೆ ಮನವರಿಕೆ ಮಾಡಲು ವೆಬ್‌ಸೈಟ್ ಸೇರಿ ಹಲವು ಮಾಹಿತಿಗಳನ್ನು ಪ್ರಚಾರ ಮಾಡಬೇಕು. ಪ್ರವಾಸೋದ್ಯಮ ಮಾಹಿತಿಯಲ್ಲಿ ಕುಮ್ಮಟದುರ್ಗ, ಹೇಮಗುಡ್ಡ, ಕನಕಗಿರಿ, ಪುರ ಸೋಮನಾಥೇಶ್ವರ ದೇಗುಲಗಳ ಕುರಿತು ಮಾಹಿತಿ ಕೊಡಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇತಿಹಾಸ ತಜ್ಞ ಡಾ| ಶರಣಬಸಪ್ಪ ಕೋಲ್ಕಾರ್, ಡಾ| ಶಿವಕುಮಾರ ಮಾಲೀಪಾಟೀಲ, ರಾಜೇಶ ನಾಯಕ, ಕೆ. ಬಸವರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.