ಕುಮಾರಿ ನಂಬಿ ಬಂದವರು…

ಹೆಣ್ಣೊಬ್ಬಳನ್ನು ಬೈಯೋದೇ ಚಿತ್ರದ ಕಂಟೆಂಟ್‌!

Team Udayavani, Oct 4, 2019, 5:38 AM IST

c-30

ಸಿನಿಮಾಗಳಲ್ಲಿ ಹೆಣ್ಣುಮಕ್ಕಳನ್ನು ಬೈದು, ಹುಡುಗರ ಪ್ರೀತಿಯೇ ಗ್ರೇಟ್‌, ಹುಡುಗಿಯರು ಯಾವತ್ತಿದ್ದರೂ ಮೋಸ ಮಾಡುವವರು ಎಂದು ಸಂಭಾಷಣೆ ಬರೆದು ಶಿಳ್ಳೆ ಗಿಟ್ಟಿಸಿಕೊಂಡ ಸಿನಿಮಾಗಳು ಸಾಕಷ್ಟಿವೆ. ಇವತ್ತು ಪ್ರೀತಿ ವಿಷಯಕ್ಕೆ ಬಂದರೆ ಹೆಣ್ಣು ಮಕ್ಕಳೇ ಮೋಸ ಮಾಡುತ್ತಾರೆಂದು ಹೇಳ್ಳೋದು ಈಗ ಸಿನಿಮಾ ಮಂದಿಗೆ ಟ್ರೆಂಡ್‌ ಆಗಿ ಬಿಟ್ಟಿದೆ. ಈಗ ಅದನ್ನೇ ಬಂಡವಾಳ ಮಾಡಿಕೊಂಡು ಹೊಸ ಸಿನಿಮಾವೊಂದು ತಯಾರಾಗಿದೆ. ಅದು “ಕಾಲೇಜ್‌ ಕುಮಾರಿ’. ಈ ಹಿಂದೆ ಕನ್ನಡದಲ್ಲಿ “ಕಾಲೇಜ್‌ ಕುಮಾರ್‌’ ಎಂಬ ಸಿನಿಮಾ ಬಂದಿರುವ ವಿಚಾರ ನಿಮಗೆ ಗೊತ್ತಿರ­ಬಹುದು. ಈಗ “ಕಾಲೇಜ್‌ ಕುಮಾರಿ’. ಹಾಗಂತ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ “ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಎಂಬ ಸಿನಿಮಾ ಮಾಡಿದ್ದ ಶಂಕರ್‌ ಅರುಣ್‌ ಈಗ “ಕಾಲೇಜ್‌ ಕುಮಾರಿ’ ಹಿಂದೆ ಬಂದಿದ್ದಾರೆ. ಇತ್ತೀಚೆಗೆ ಚಿತ್ರದ ಕೆಲವು ತುಣುಕುಗಳನ್ನು ಮಾಧ್ಯಮ ಮಂದಿಗೆ ತೋರಿಸಲಾಯಿತು. ಅಲ್ಲಿಗೆ ಇದು ಕೂಡಾ ಹೆಣ್ಣು ಮಕ್ಕಳನ್ನು ನೆಗೆಟಿವ್‌ ಆಗಿ ತೋರಿಸಿ, ಶಿಳ್ಳೆ ಗಿಟ್ಟಿಸಿಕೊಳ್ಳುವ ಪ್ರಯತ್ನ ಎಂಬುದು ಸಾಬೀತಾಯಿತು.

ಹೆಣ್ಣೊಬ್ಬಳು ಹೇಗೆ ಇಬ್ಬಿಬ್ಬರು ಹುಡುಗರಲ್ಲಿ ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಾಳೆ ಎಂಬ ಅಂಶದೊಂದಿಗೆ ಸಿನಿಮಾ ಮಾಡಿದ್ದಾಗಿ ಹೇಳಿ­ಕೊಂಡರು ಶಂಕರ್‌ ಅರುಣ್‌. ಗಂಡಸಿನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳ್ಳೋ ಅದೇ ರೀತಿ ಆತನ ತೊಂದರೆಯ ಹಿಂದೆಯೂ ಮಹಿಳೆ ಇರುತ್ತಾಳೆ ಎಂಬುದು ನಿರ್ದೇ­ಶಕರ ವಾದ. ಅದೇ ವಾದದೊಂದಿಗೆ ಸಿನಿಮಾ ಮಾಡಿದ್ದಾರೆ. “ಚಿತ್ರದಲ್ಲಿ ಮಹಿಳೆಯರನ್ನು ಅವಮಾನಿಸಿ­ದಂತಾಗಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಶಂಕರ್‌ ಅರುಣ್‌, “ಚಿತ್ರದಲ್ಲಿ ಕೇವಲ ನೆಗೆಟಿವ್‌ ಆಗಿ ತೋರಿಸಿಲ್ಲ. ಹೆಣ್ಣೊಬ್ಬಳ ಎರಡು ಮುಖಗಳನ್ನು ತೋರಿಸಿದ್ದೇನೆ’ ಎಂದರು. ಪತ್ರಕರ್ತರ ಮತ್ತೂಂದಿಷ್ಟು ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ.

ಚಿತ್ರದಲ್ಲಿ ರುಚಿತಾ ನಾಯಕಿ. ಇಬ್ಬಿಬ್ಬರು ಹುಡುಗರ ಜೊತೆ ಪ್ರೀತಿಯ ನಾಟಕವಾಡುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಕಥೆಗೂ ರುಚಿತಾ ಒಂದಷ್ಟು ಸಲಹೆ ಕೊಟ್ಟಿದ್ದಾರಂತೆ. ಕಾಲೇಜಿನಲ್ಲಿದ್ದಾಗ ತಮ್ಮ ಕೆಲವು ಸ್ನೇಹಿತರು ಇದೇ ರೀತಿ ಇಬ್ಬಿಬ್ಬರ ಜೊತೆ ಪ್ರೀತಿಯ ನಾಟಕವಾಡಿದ ಅಂಶವನ್ನು ನಿರ್ದೇಶಕರಿಗೆ ಹೇಳಿ,

ಸ್ಕ್ರಿಪ್ಟ್ ಅನ್ನು ಮತ್ತಷ್ಟು ಬಲಗೊಳಿಸಿದರಂತೆ. ಉಳಿದಂಣತೆ ಚಿತ್ರದಲ್ಲಿ ಜೀವಾ, ಚರಣ್‌ ರಾಜ್‌, ವಿಕ್ರಮ್‌ ಕಾರ್ತಿಕ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.