20 ವರ್ಷಗಳ ನಂತರ…
ದ್ವಾರಕೀಶ್ ಬ್ಯಾನರ್, ಶಿವಣ್ಣ ಹೀರೋ
Team Udayavani, Oct 4, 2019, 6:00 AM IST
“ಆಯುಷ್ಮಾನ್‌ಭವ’ ಒಂದೊಳ್ಳೆಯ ಜರ್ನಿ ಸ್ಟೋರಿ ಹೊಂದಿದೆ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ಒಳ್ಳೆಯದು, ಇದೆ, ಕೆಟ್ಟದ್ದೂ ಇದೆ. ವಾಸು ಅವರು ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ…
“ಸುಮಾರು ಇಪ್ಪತ್ತು ವರ್ಷಗಳಿಂದಲೂ ಶಿವರಾಜಕುಮಾರ್ ಅವರೊಂದಿಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಆಸೆ, ಈಗ ಈಡೇರಿದೆ…’
– ಹೀಗೆ ಹೇಳಿ ಹಾಗೊಂದು ಸ್ಮೈಲ್ ಹೊರಹಾಕಿದರು ನಿರ್ಮಾಪಕ ಯೋಗೀಶ್ ದ್ವಾರಕೀಶ್.
ಅವರು ಹೇಳಿದ್ದು, ತಮ್ಮ ನಿರ್ಮಾಣದ “ಆಯುಷ್ಮಾನ್ ಭವ’ ಚಿತ್ರದ ಬಗ್ಗೆ. ಈ ಚಿತ್ರ ಈಗ ಮುಗಿದಿದ್ದು, ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಲೆಂದೇ, ತಮ್ಮ ತಂಡದ ಜೊತೆ ಆಗಮಿಸಿದ್ದ ಯೋಗೀಶ್ ದ್ವಾರಕೀಶ್ ಹೇಳಿದ್ದಿಷ್ಟು;
“ನಮ್ಮ ಬ್ಯಾನರ್‌ನಲ್ಲಿ ಮೊದಲ ಚಿತ್ರ ನಿರ್ಮಾಣವಾಗಿದ್ದು “ಮೇಯರ್ ಮುತ್ತಣ್ಣ’. ಅದು 1969 ರಲ್ಲಿ. ದ್ವಾರಕೀಶ್ ಚಿತ್ರ ಬ್ಯಾನರ್‌ಗೆ 50 ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಷ್ಟು ವರ್ಷಗಳಲ್ಲಿ 52 ಸಿನಿಮಾಗಳ ನಿರ್ಮಾಣ ಮಾಡಿದ್ದೇವೆ. ಮೊದಲ ಚಿತ್ರ ಡಾ.ರಾಜಕುಮಾರ್ ಅವರಿಗೆ ನಿರ್ಮಾಣ ಮಾಡಿದರೆ, 52ನೇ ಸಿನಿಮಾ ಅವರ ಪುತ್ರ ಶಿವರಾಜಕುಮಾರ್ ಅವರಿಗೆ ಮಾಡಿದ್ದೇವೆ. ಈ ಹಿಂದೆಯೇ ನಾವು ಶಿವರಾಜಕುಮಾರ್ ಜೊತೆಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆವು. ಕಳೆದ 20 ವರ್ಷಗಳಿಂದಲೂ ಅದು ಯಾಕೋ ಕೆಲ ಕಾರಣಗಳಿಂದ ಸಾಧ್ಯವೇ ಆಗಲಿಲ್ಲ. ಕೊನೆಗೆ ಶಿವರಾಜಕುಮಾರ್ ಅವರೇ, ಈ ಕಥೆ ಆಯ್ಕೆ ಮಾಡಿ, ಸಿನಿಮಾ ಮಾಡುವಂತೆ ಅವಕಾಶ ಕೊಟ್ಟಿದ್ದಕ್ಕೆ ಸಿನಿಮಾ ಆಗಿದೆ ಎಂದು ವಿವರಿಸಿದ ಯೋಗಿ, “ಪಿ. ವಾಸು ಅವರು 57 ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಇನ್ನು, ಗುರುಕಿರಣ್ ಅವರ 100ನೇ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಮೊದಲ ಸಲ ರಚಿತಾ ಅವರು ಶಿವಣ್ಣ ಅವರ ಜೋಡಿಯಾಗಿ ನಟಿಸಿದ್ದಾರೆ. ಪಿ.ಕೆ.ಎಚ್.ದಾಸ್ ಕೂಡ ಮೊದಲ ಬಾರಿಗೆ ನಮ್ಮ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದಾರೆ. ಅದೇನೆ ಇರಲಿ, ಕಷ್ಟಕಾಲದಲ್ಲಿದ್ದಾಗ, ಶಿವಣ್ಣ ನಮ್ಮನ್ನು ಕರೆದು ಈ ಚಿತ್ರ ಮಾಡಲು ಅವಕಾಶ ಕೊಟ್ಟಿದ್ದಾರೆ’ ಎಂದು ನೆನಪಿಸಿಕೊಂಡರು ಯೋಗಿ.
ಶಿವರಾಜ ಕುಮಾರ್ ಅವರಿಗೆ ದ್ವಾರಕೀಶ್ ಫ್ಯಾಮಿಲಿ ಅಂದರೆ ಅದೊಂಥರಾ ಖುಷಿಯಂತೆ. “ದ್ವಾರಕೀಶ್ ಅಂಕಲ್ ಅಂದರೆ ಎಲ್ಲರಿಗೂ ಪ್ರೀತಿ. ಅವರು “ಮೇಯರ್ ಮುತ್ತಣ್ಣ’ ಮಾಡುವಾಗ ನನಗೆ 7 ವರ್ಷ. “ಆಯುಷ್ಮಾನ್‌ಭವ’ ಒಂದೊಳ್ಳೆಯ ಜರ್ನಿ ಸ್ಟೋರಿ ಹೊಂದಿದೆ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ಒಳ್ಳೆಯದು, ಇದೆ, ಕೆಟ್ಟದ್ದೂ ಇದೆ. ವಾಸು ಅವರು ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅನಂತ್ ನಾಗ್, ಸುಹಾಸಿನಿ, ರಚಿತಾ ರಾಮ್ ಹೀಗೆ ಪ್ರತಿಯೊಬ್ಬರ ಪಾತ್ರಗಳು ಗಮನಸೆಳೆಯುತ್ತವೆ. ಅದೇನೆ ಇರಲಿ, ಯೋಗಿ ಅಂತಹ ಮಗನನ್ನು ಪಡೆಯಲು ದ್ವಾರಕೀಶ್ ಪುಣ್ಯ ಮಾಡಿದ್ದಾರೆ. ಇನ್ನೂ ಒಂದೆರೆಡು ಕಥೆ ಕೇಳಿದ್ದೇನೆ. ಅದನ್ನೂ ಯೋಗಿ ಕೈಯಲ್ಲೇ ಮಾಡಿಸ್ತೀನಿ’ ಎಂದರು ಶಿವರಾಜಕುಮಾರ್.
ರಚಿತಾ ರಾಮ್ ಅವರಿಗಿಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರ ಸಿಕ್ಕಿದೆಯಂತೆ. ಸಾಕಷ್ಟು ಕಲಿತಿದ್ದೇನೆ ಎಂದು ಹೇಳುವ ರಚಿತಾ, “ಶಿವಣ್ಣ ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವ. ಅವರ ಎನರ್ಜಿ ನೋಡಿದರೆ, ಖುಷಿಯಾಗುತ್ತೆ. ನಾನಿಲ್ಲಿ ಏನೇ ಕೆಲಸ ಮಾಡಿದ್ದರೂ, ಆ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು’ ಎಂದರು ರಚಿತಾರಾಮ್.
ಗುರುಕಿರಣ್ ಅವರಿಗೆ ಇದು 100ನೇ ಚಿತ್ರ. ಅವರಿಲ್ಲಿ ಐದು ಹಾಡುಗಳ ಜೊತೆಗೆ ಐದು ತುಣುಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಈ ಹಿಂದೆ ಶಿವರಾಜಕುಮಾರ್ ಅಭಿನಯದ “ಸತ್ಯ ಇನ್ ಲವ್’ ಗುರುಕಿರಣ್ ಅವರ 50ನೇ ಚಿತ್ರವಾಗಿತ್ತು. ಈಗ ಇದು 100ನೇ ಚಿತ್ರ. ಸಹಜವಾಗಿಯೇ ಗುರುಕಿರಣ್‌ಗೆ ಖುಷಿ ಇದೆ. “ಇದು ಪಕ್ಕಾ ಮ್ಯೂಸಿಕಲ್ ಸಿನಿಮಾ. ಮೊದಲು ಯೋಗಿ ಹೇಳಿದಾಗ, ಇಳೆಯರಾಜ ಅವರ ಬಳಿ ಮಾಡಿಸು. ಅವರು ಒಪ್ಪದಿದ್ದರೆ, ನಾನು ಮಾಡ್ತೀನಿ ಅಂದೆ. ಆದರೆ, “ಆಯುಷ್ಮಾನ್‌ಭವ’ ನನ್ನ ಪಾಲಾಯ್ತು. ನಿರೀಕ್ಷೆ ಸುಳ್ಳಾಗದ ಚಿತ್ರವಿದು’ ಎಂದರು ಗುರು. ದ್ವಾರಕೀಶ್, 50ನೇ ವರ್ಷದ ಸಂಭ್ರಮದ ಬಗ್ಗೆ, ಸಾಧು ಕೋಕಿಲ, ನಿಧಿ ಸುಬ್ಬಯ್ಯ, ಪಿಕೆಎಚ್ ದಾಸ್ ಸಿನಿಮಾ ಅನುಭವ ಹೇಳಿಕೊಂಡರು.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.