ಮೂರು ತಿಂಗಳಿನಿಂದ ಪೋಲಾಗುತ್ತಿದೆ ಜೀವಜಲ
Team Udayavani, Oct 4, 2019, 5:21 AM IST
ವಿಶೇಷ ವರದಿ-ಉಡುಪಿ: ನಗರಸಭೆ ಬನ್ನಂಜೆ ವಾರ್ಡ್‌ನ ನೇತಾಜಿ ನಗರದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.
ಕುಡಿಯುವ ನೀರು ಪೋಲು
ಶಿರಿಬೀಡು ಸರಸ್ವತಿ ಹಿ.ಪ್ರಾ. ಶಾಲೆಯ ಆವರಣ ಗೋಡೆಯ ಒಳಗಿನಿಂದ ಹಾದು ಹೋಗುವ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ಸುಮಾರು ಮೂರು ತಿಂಗಳಿನಿಂದ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 5.30ರ ವರೆಗೆ ಸಾವಿರಾರು ಲಿ. ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಒಡೆದ ಪೈಪ್ ಲೈನ್
ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಎಲ್ಲೆಂದರಲ್ಲಿ ಒಡೆದು ಹೋಗುತ್ತಿದೆ. ಈ ಕುರಿತು ಸಾರ್ವಜನಿಕರು ಮಾಹಿತಿ ನೀಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವ ಆರೋಪವಿದೆ.
ನಿತ್ಯ 6 ದಶ ಲೀ. ನೀರು ಪೋಲು
ಬಜೆ ಅಣೆಕಟ್ಟಿನಿಂದ ಉಡುಪಿ ನಗರ ಸಭೆ ವ್ಯಾಪ್ತಿಯ 35 ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿದೆ. ನಗರದ ಜನಸಂಖ್ಯೆ ಆಧಾರದ ಪ್ರಕಾರ ವೈಜ್ಞಾನಿಕವಾಗಿ ದಿನಕ್ಕೆ 18 ದಶಲಕ್ಷ ಲೀ. ನೀರು ಸಾಕು. ಆದರೆ ಈಗ ನಗರಸಭೆ 24 ದಶಲಕ್ಷ ಲೀ. ನೀರು ಪೂರೈಕೆಯಾಗುತ್ತಿದೆ. ಅಂದರೆ ನಿತ್ಯ ಸುಮಾರು 6 ದಶಲಕ್ಷ ಲೀ. ಹೆಚ್ಚುವರಿ ಪೋಲಾಗುತ್ತಿದೆ. ನಗರಸಭೆ ಅಧಿಕಾರಿಗಳು ಒಡೆದು ಹೋದ ಪೈಪ್
ದುರಸ್ತಿಗೊಳಿಸಿ ನೀರು ಪೋಲಾಗುವು ದನ್ನು ತಡೆಯಬೇಕಾಗಿದೆ.
ತತ್‌ಕ್ಷಣ ದುರಸ್ತಿ ಕಾರ್ಯ
ಪೈಪ್ ಒಡೆದು ನೀರು ಪೋಲಾಗು ತ್ತಿರುವ ಸ್ಥಳದ ಪರಿಶೀಲನೆ ನಡೆಸಲಾಗುವುದು. ತತ್‌ಕ್ಷಣ ದುರಸ್ತಿ ಕಾರ್ಯ ಕೈಗೊಂಡು ನೀರು ವ್ಯರ್ಥವಾಗಿ ಹರಿಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಆನಂದ್ ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ ನಗರಸಭೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.