ಹಳೆ ಬಟ್ಟೆ ಹೊಸ ಲುಕ್
Team Udayavani, Oct 4, 2019, 4:54 AM IST
ಬಟ್ಟೆಗಳ ವಿಷಯ ಕ್ಕೆ ಬಂದರೆ ಕಡಿಮೆ ಅವಧಿಯಲ್ಲಿಯೇ ಹೊಸ ಫ್ಯಾಷನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುತ್ತವೆ. ಸಮಯ ಬದಲಾದಂತೆ ಟ್ರೆಂಡ್‌ಗಳು ಬದಲಾಗುತ್ತವೆ. ಹೀಗೆ ಒಮ್ಮೆ ಹಳತಾದ ಫ್ಯಾಷನ್‌ಗಳನ್ನು ಮತ್ತೆ ಬಳಕೆ ಮಾಡದ ಜನರೂ ನಮ್ಮಲ್ಲಿದ್ದಾರೆ. ಅದರ ಜತೆಗೆ ಹಳತಾದ, ಬಳಕೆಗೆ ಯೋಗ್ಯವಲ್ಲದ ಬಟ್ಟೆಗಳನ್ನು ಏನು ಮಾಡುವುದು ಎನ್ನುವ ಗೊಂದಲಗಳು ಎಲ್ಲರಿಗೂ ಸರ್ವೇ ಸಾಮಾನ್ಯ. ಹೀಗೆ ಬದಲಾದ ಕಾಲ ಘಟ್ಟದಲ್ಲಿ ಹೊಸ ಬದಲಾವಣೆಗೆ ತೆರೆದುಕೊಳ್ಳುತ್ತಲೇ ಹಳೆಯ ಉಡುಗೆಗಳನ್ನು ಮರು ಬಳಕೆಗೆ ಯೋಗ್ಯವಾಗುವಂತೆ ಮಾರ್ಪಾಡುಗೊಳಿಸುವತ್ತಲೂ ಒಮ್ಮೆ ಯೋಚಿಸಿದರೆ ಹೇಗೆ? ಅದು ಹೇಗೆ ಎಂದು ಕೊಂಡಿರಾ?
ಹೌದು ಧರಿಸುವುದಕ್ಕೆ ಯೋಗ್ಯವಲ್ಲದ ಅಥವಾ ಟ್ರೆಂಡ್ ಕಳೆದುಕೊಂಡ ಬಟ್ಟೆಗಳನ್ನು ತೊಡುವ ಬದಲು ಅದರಿಂದಲೇ ಸುಲಭವಾಗಿ ಬಳಕೆಗೆ ಯೋಗ್ಯವಾಗುವಂತೆ ತಯಾರು ಮಾಡಬಹುದಾದ ಕೆಲವು ಕ್ರಾಫ್ಟ್ಗಳ ಬಗ್ಗೆ, ಆಲಂಕಾರಿಕ ವಸ್ತುಗಳು, ಪರ್ಸ್, ಬ್ಯಾಗ್, ಜೋಳಿಗೆಗಳನ್ನಾಗಿ ಮಾರ್ಪಾಡು ಮಾಡುವ ಬಗ್ಗೆ ಒಂದಷ್ಟು ಯೋಚಿಸಿದೆವು ಎಂದಾದಲ್ಲಿ ಹಣ ವ್ಯಯಿಸದೆಯೇ, ಇರುವುದರಲ್ಲಿಯೇ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುವುದು ನಮ್ಮಿಂದಲೇ ಸಾಧ್ಯ. ಇದಕ್ಕೆ ಮಾಡಬೇಕಾಗಿರುವುದು ಕೊಂಚ ತಲೆ ಖರ್ಚು ಮತ್ತು ಸಮಯದ ಹೊಂದಾಣಿಕೆ.
ಹಳೆಯ ಸೀರೆ, ಜೀನ್ಸ್ ಪ್ಯಾಂಟ್, ಟಿ ಶರ್ಟ್ ಇತ್ಯಾದಿಗಳು ಹಳತಾಯಿತು, ಇನ್ನು ಎಸೆಯಬೇಕಲ್ಲಾ ಎಂದು ಚಿಂತಿಸುವ ಬದಲು ಅವುಗಳಿಂದ ತಯಾರಿ ಮಾಡಬಹುದಾದ ಹೊಸ ಉಪಾಯಗಳನ್ನು ಗಮನಿಸೋಣ.
ಸೀರೆಗಳು ಚೆನ್ನಾಗಿವೆ, ಆದರೆ ಹಳತಾಯಿತಲ್ಲಾ ಎನ್ನುವವರು ಅವುಗಳನ್ನು ಬಳಸಿಕೊಂಡು ಚೆನ್ನಾಗಿರುವ ಬ್ಯಾಗ್‌ಗಳನ್ನು, ಕೈ ಚೀಲಗಳನ್ನು ತಯಾರಿಸಿ ಬಳಕೆ ಮಾಡಬಹುದು. ಸೀರೆಗಳನ್ನು ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಅವುಗಳು ಇನ್ನೊಬ್ಬರ ಕಣ್ಣಿಗೆ ಚೆನ್ನಾಗಿ ಕಾಣಬೇಕು ಎಂದಾದಲ್ಲಿ ಅವುಗಳಿಗೆ ಬಣ್ಣ ಬಣ್ಣದ ಟಿಕ್ಲಿ, ಗೊಂಡೆಗಳು ಅಥವಾ ಇನ್ನಾವುದಾದರೂ ಸೂಕ್ತ ಎನಿಸುವಂತಹ ಆಲಂಕಾರಿಕ ವಸ್ತುಗಳನ್ನು ಬಳಕೆ ಮಾಡಿ ಸಿಂಗರಿಸುವುದು, ಆ್ಯಂಬ್ರಾಯರಿ, ಕಸೂತಿ ಕೆಲಸಗಳನ್ನು ಮಾಡಿ ಇನ್ನಷ್ಟು ಮಿಂಚುವಂತೆ ಮಾಡುವ ಮೂಲಕ ನಾವದನ್ನು ಮರು ಬಳಕೆಗೆ ಯೋಗ್ಯವಾಗುವಂತೆ ಮಾಡಬಹುದು.
ಇನ್ನು ಹಳೆಯ ವಸ್ತ್ರಗಳನ್ನು ಬಳಸಿ ಕರ್ಚಿಫ್, ಬ್ಯಾಂಗಲ್ಸ್, ಇಯರಿಂಗ್ಸ್, ಸ್ಕಾರ್ಪ್ ಸೇರಿದಂತೆ ಇನ್ನೂ ಅನೇಕ ನ್ಯೂ ಫ್ಯಾಷನ್‌ಗಳ ಸೃಷ್ಟಿಯನ್ನು ನಾವೇ ಮಾಡಬಹುದು. ಇವನ್ನು ಹೇಗೆ ಮಾಡುವುದು, ಕಲಿಯುವ ಬಗೆ ಹೇಗೆ ಎಂದು ಯೋಚಿಸುವವರಿಗೆ ಸ್ನೇಹಿತನಾಗಿ ಇದ್ದೇ ಇದೆಯಲ್ಲ ಯೂಟ್ಯೂಬ್. ಪ್ರಯತ್ನಿಸಿ ನೋಡಿ.
- ಭಾವ ಭೃಂಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.