ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ
Team Udayavani, Oct 4, 2019, 12:44 PM IST
ಬೆಂಗಳೂರು: ಪಾಲಿಕೆ ಜಂಟಿ ಆಯುಕ್ತರು ಪ್ರತಿ ವಾರ ಕಡ್ಡಾಯವಾಗಿ ಸಭೆ ನಡೆಸಿ, ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಮೇಯರ್ ಎಂ.ಗೌತಮ್ ಕುಮಾರ್ ಜಂಟಿ ಆಯುಕ್ತರಿಗೆ ತಾಕೀತು ಮಾಡಿದ್ದಾರೆ.
ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಮೇಯರ್ ಸರಣಿ ಸಭೆ ನಡೆಸಿದರು.
ಈ ವೇಳೆ ಬಿಬಿಎಂಪಿ ವ್ಯಾಪ್ತಿಯ ಯಾವುದೇ ವಲಯದ ಜಂಟಿ ಆಯುಕ್ತರು ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸದೆ ಇರುವುದನ್ನು ಗಮನಿಸಿದ ಅವರು, ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್
ಕುಮಾರ್, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಣ್ಣ ಪುಟ್ಟ ಸಮಸ್ಯೆಗಳೂ ಪರಿಹಾರವಾಗುತ್ತಿಲ್ಲ. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ ಎಲ್ಲ ಜಂಟಿ ಆಯುಕ್ತರು ಪ್ರತಿವಾರ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್‌ಗಳೊಂದಿಗೆ ಕಡ್ಡಾಯವಾಗಿ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಡಾವಳಿ ಸಿದ್ಧಪಡಿಸುವ ಜತೆಗೆ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಪಟ್ಟಿಯನ್ನು ಕಡ್ಡಾಯವಾಗಿ ಮಾಡುವಂತೆ, ಈ ವರದಿಯನ್ನು ಪ್ರತಿ 15 ದಿನಗಳಿಗೆ ಒಮ್ಮೆ ವಿಶೇಷ ಆಯುಕ್ತರಿಗೆ ಹಾಗೂ ಪ್ರತಿ ತಿಂಗಳು ಮೇಯರ್‌ಗೆ ನೀಡುವಂತೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಕಚೇರಿಯಲ್ಲಿ ಸಭೆ ಬೇಡ: ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದಾಗ ವಿವಿಧ ವಲಯಗಳ ಅಧಿಕಾರಿಗಳ ಸಭೆಗೆ ಬರಲು ಅಧಿಕಾರಿಗಳು ಕಾರು ಬಳಸುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸದಂತೆ ವಿಶೇಷ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ಮೇಯರ್ ಹೇಳಿದ್ದಾರೆ.
ಮಾಹಿತಿಗೆ ಒತ್ತು: ವಲ್ಲಬ್ ಸಲ್ಯೂಷನ್ ಎನ್ನುವ ಖಾಸಗಿ ಕಂಪನಿಗೆ ಬಿಬಿಎಂಪಿ ವ್ಯಾಪ್ತಿಯ ಆನ್‌ಲೈನ್ ವ್ಯವಸ್ಥೆ, ಆರ್ಥಿಕ
ಮಾಹಿತಿ, ಇ-ಆಡಳಿತ ಸೇರಿದಂತೆ ವಿವಿಧ ವಿಷಯಗಳ ತಾಂತ್ರಿಕ ಮಾಹಿತಿ ನಿರ್ವಹಣೆ ಹೊಣೆ ನೀಡಿದೆ. ಈ ಬಗ್ಗೆ ಇಷ್ಟರಲ್ಲೇ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪಾಲಿಕೆ ಹಣ ಮತ್ತು ಮಾಹಿತಿಯ ಕಳುವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮೇಯರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.