ಇದ್ದೂ ಇಲ್ಲದಂತಿರುವ ಶುದ್ಧೀಕರಣ ಘಟಕಗಳು
Team Udayavani, Oct 4, 2019, 2:15 PM IST
ಗುಳೇದಗುಡ್ಡ: ಎಲ್ಲೆಂದರಲ್ಲಿ ತುಕ್ಕು ಹಿಡಿದ ಯಂತ್ರ.. ಅದರಿಂದಲೇ ಫಿಲ್ಟರ್ ಆಗಿ ಬರುವ ಜಂಗು ವಾಸನೆ ಹೊಂದಿರುವ ನೀರು… ಇದು ಸಮೀಪದ ಕೋಟೆಕಲ್ ಗ್ರಾಪಂ ವ್ಯಾಪ್ತಿಗೆ ಬರುವ ತೋಗುಣಶಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕದ ಕಥೆ-ವ್ಯಥೆ.
ಇದೇ ಘಟಕದಿಂದ ಜನರಿಗೆ ನಿತ್ಯ ನೀರು ಸಿಗುತ್ತದೆಯೇನೋ ನಿಜ ಆದರೆ ಆ ನೀರು ಬಳಕೆ ಮಾಡಲು ಜನರು ಭಯಪಡುವಂತಾಗಿದೆ. ಅಷ್ಟರಮಟ್ಟಿಗೆ ಯಂತ್ರಗಳು ತುಕ್ಕು ಹಿಡಿದಿವೆ. ಆದರೂ ಇದುವರೆಗೂ ಅಧಿ ಕಾರಿಗಳು ಕಣ್ಣೆತ್ತಿ ನೋಡದಿರುವುದು ವಿಪರ್ಯಾಸ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವತಿಯಿಂದ 2017-18ನೇ ಸಾಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಯೋಜನೆಯಲ್ಲಿ ಸುಮಾರು 11ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ಆರಂಭಿಸಲಾಗಿದೆ. ಘಟಕ ನಿರ್ಮಿಸಿ ಇನ್ನೂ 2 ವರ್ಷ ಕಳೆದಿಲ್ಲ. ಅಷ್ಟರಲ್ಲೇ ಯಂತ್ರಗಳು ತುಕ್ಕು ಹಿಡಿಯುತ್ತಿದ್ದು, ಅದರ ಮೂಲಕವೇ ಫಿಲ್ಟರ್ ಆದ ನೀರನ್ನು ಜನ ನಿತ್ಯ ಕುಡಿಯುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಜಂಗು ವಾಸನೆ: ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿರುವುದರಿಂದ ಫಿಲ್ಟರ್ ಆಗಿ ಬರುವ ನೀರು ಜಂಗು ವಾಸನೆ ಬೀರುತ್ತಿದ್ದು, ಬೇರೆ ದಾರಿಯಿಲ್ಲದೇ ಅದೇ ನೀರನ್ನು ಬಳಸುವಂತಾಗಿದೆ. ಈ ನೀರು ಸೇವಿಸಿ ಆರೋಗ್ಯ ಹದಗೆಟ್ಟರೆ ಯಾರು ಹೊಣೆ ಎಂಬುದು ಗ್ರಾಮಸ್ಥರ ಪ್ರಶ್ನೆ. ಇಲಾಖೆ 5 ವರ್ಷಗಳ ಕಾಲ ಗದಗ ಮೂಲದ ಗುತ್ತಿಗೆದಾರರಿಗೆ ಘಟಕ ನಿರ್ವಹಣೆಯನ್ನು ನೀಡಿದೆ. ಆದರೆ ಆ ಗುತ್ತಿಗೆದಾರರು ಇದುವರೆಗೂ ಬಂದು ಘಟಕದ ಪರಿಸ್ಥಿತಿಯನ್ನು ಗಮನಿಸಿಲ್ಲ. ಶುದ್ಧೀಕರಣ ಘಟಕಕ್ಕೆ ಕ್ಯಾಂಡಲ್ ಅಳವಡಿಸಿಲ್ಲ. ಈ ರೀತಿ ನಿರ್ಲಕ್ಷ ವಹಿಸುತ್ತಿರುವುದರಿಂದ ಯಂತ್ರಗಳು ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ತೋಗುಣಶಿ ಗ್ರಾಮದ ಶುದ್ಧೀಕರಣ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿರುವ ಬಗ್ಗೆ ಪಂಚಾಯಿತಿ ಅ ಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರೂ ಗಮನ ಹರಿಸುತ್ತಿಲ್ಲ. ಕೂಡಲೇ ಅ ಧಿಕಾರಿಗಳು ಯಂತ್ರಗಳನ್ನು ದುರಸ್ತಿಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಗ್ರಾಮದ ಶುದ್ಧೀಕರಣ ಘಟಕ ತುಕ್ಕು ಹಿಡಿದಿರುವ ಬಗ್ಗೆ ಮಾಹಿತಿಯಿದ್ದು, ಗದುಗಿನ ಪೂಜಾರಿ ಎಂಬುವರಿಗೆ ತೋಗುಣಶಿ ಗ್ರಾಮದ ಶುದ್ಧೀಕರಣ ಘಟಕ ನಿರ್ವಹಣೆಗೆ ಕೊಡಲಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ದುರಸ್ತಿ ಮಾಡುವಂತೆ ಸೂಚಿಸಿದ್ದು, 2-3ದಿನಗಳಲ್ಲೇ ಘಟಕ ದುರಸ್ತಿಗೊಳಿಸಲಾಗುವುದು.-ಎನ್.ಎಸ್. ಪತಂಗೆ, ಕಿರಿಯ ಅಭಿಯಂತರ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ
-ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.