ಮಾಲಿನ್ಯ ನಿಯಂತ್ರಣ ಸಾಧನ ಕಂಡುಹಿಡಿದ ವಿದ್ಯಾರ್ಥಿ
ಮನೆ,ಸಂಚಾರದಟ್ಟಣೆ ತಾಣ,ಕೈಗಾರಿಕೆಗಳಿಗೂ ಯೋಗ್ಯ ;ಸಂಗ್ರಹಿಸಿದ ಮಾಲಿನ್ಯದಿಂದ ಡಾಮರು,ಶಾಯಿ ತಯಾರಿ
Team Udayavani, Oct 5, 2019, 5:38 AM IST
ಕುಂದಾಪುರ: ಸಂಚಾರಿ ವಾಹನಗಳ ಮೇಲೆ ದಂಡ ಪ್ರಕರಣ ಹೆಚ್ಚಾದ ಮೇಲೆ ಎಲ್ಲರೂ ಮಾಲಿನ್ಯ ನಿಯಂತ್ರಣ ಮಳಿಗೆಗಳಿಗೆ ದಾಂಗುಡಿಯಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಗ್ರಾಮೀಣ ಪ್ರತಿಭೆ ವಾಯು ಮಾಲಿನ್ಯ ನಿಯಂತ್ರಣ ಸಾಧನ ಕಂಡು ಹಿಡಿದಿದ್ದಾರೆ. ಅದು ಕೇವಲ ವಾಹನಗಳಿಗೆ ಅಲ್ಲ, ಮನೆಗೆ, ವಾಹನ ದಟ್ಟಣೆ ಇರುವಲ್ಲಿಗೆ, ಕೈಗಾರಿಕೆಗಳಿಗೆ ಸಾಕಾಗುತ್ತದೆ. ಅಂತಹ ಅಪ್ಪಟ ಗ್ರಾಮೀಣ ಪ್ರತಿಭೆ ಶಂಕರನಾರಾಯಣದ ಎಸ್.ವಿ. ಆಶಿಕ್ ಶೇಟ್.
ಇವರು ಶಂಕರನಾರಾಯಣ ಗ್ರಾಮದ ಕುಪ್ಪಾರಿನ ವಸಂತ ಶೇಟ್ ಹಾಗೂ ಶಾರದ ಶೇಟ್ ಅವರ ದ್ವಿತೀಯ ಪುತ್ರ , ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲಾ ಹಳೆ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರು ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಟೊಮೊಬೈಲ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ.
ಮೊದಲ ಯತ್ನವಲ್ಲ
ಮೊದಲ ಯತ್ನದಲ್ಲೇ ಇವರಿಗೆ ಯಶಸ್ಸು ಸಿಕ್ಕಿದ್ದಲ್ಲ. ದ್ವಿತೀಯ ಪಿಯುಸಿಯಲ್ಲಿ ಮೊದಲ ಬಾರಿಗೆ ಮಾದರಿಯೊಂದನ್ನು ರೂಪಿಸಿದರು. ಸತತವಾಗಿ ಪ್ರಯೋಗಗಳ ಮೂಲಕ 35 ಮಾದರಿಗಳನ್ನು ರೂಪಿಸಿ ಈಗಿರುವ ಸಾಧನ ಅಂತಿಮವಾಗಿದೆ. ಕಾರ್ಖಾನೆಗಳು ಮತ್ತು ವಾಹನಗಳು ಉಗುಳುವ ಹೊಗೆಯಿಂದ ವಾತಾವರಣ ಸೇರುವ ಇಂಗಾಲದ ಹಾನಿಕಾರಕ ಕಣಗಳನ್ನು ತಡೆಯುವ ಕೆಲಸವನ್ನು ಈ ಸಾಧನ ಮಾಡುತ್ತದೆ. ಸಾಧನದ ಪೇಟೆಂಟ್‌ಗೆ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ.
ಏನೇನಿದೆ?
ಮಾಲಿನ್ಯ ನಿಯಂತ್ರಣ ಸಾಧನದಲ್ಲಿ ಮೇಲ್ಭಾಗದಲ್ಲಿ ಫ್ಯಾನ್, ಒತ್ತಡ ನಿಯಂತ್ರಕ, ಪೈಪ್, ದ್ರವ ಮಾದರಿ ಸಂಗ್ರಹದ ಟ್ಯಾಂಕ್, ಪ್ರಕ್ರಿಯೆ ನಡೆಯುವ ಭಾಗ, ತೆಳು ಪದರಗಳು, ಫಿಲ್ಟರ್ ಹಾಗೂ ಅನಿಲ ಹೊರಬಿಡುವ ಸಾಧನಗಳಿವೆ. ಈ ಪ್ರಕ್ರಿಯೆಗೆ ರಾಸಾಯನಿಕವನ್ನು ಬಳಸಲಾಗುತ್ತದೆ. ಭಾರತದಲ್ಲಿ ಇದರ ಪರೀಕ್ಷೆಗೆ ಯಾವುದೇ ಸಾಧನಗಳಿಲ್ಲದ ಕಾರಣ ಡೀಸೆಲ್ ಹಾಗೂ ಸೀಮೆಣ್ಣೆಯ ಮಿಶ್ರಣ ಮಾಡಿ ಉರಿಸಿದ ಹೊಗೆಯನ್ನು ಬಿಟ್ಟು 150 ಗಂಟೆಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾವುದೇ ದೋಷ ಕಂಡುಬಂದಿಲ್ಲ .
ಕಾರ್ಯಾಚರಣೆ
ಸಾಧನದ ಮೇಲೆ ಅಳವಡಿಸಿರುವ ಫ್ಯಾನ್ ಹೊಗೆಯಲ್ಲಿರುವ ಹಾನಿಕಾರಕ ಇಂಗಾಲ ಕಣಗಳನ್ನು ಹೀರಿಕೊಂಡು ಶೋಧಿ ಸುತ್ತದೆ. ಇದರೊಳಗೆ ಅಳ ವಡಿಸಿದ ತೆಳು ಪದರಗಳು ಸೋಸುತ್ತವೆ. ಫಿಲ್ಟರ್ ಚೇಂಬರ್‌ನಲ್ಲಿ ಅಳವಡಿಸಿದ ವಿಶೇಷ ಲೋಹದ ಬಲೆ ಅಥವಾ ಜಾಲವು ಕಣಗಳನ್ನು ಸೋಸುತ್ತದೆ. ಆದ್ದರಿಂದ ತಳಭಾಗದಲ್ಲಿ ಇಂಗಾಲದ ಕಣಗಳು ಉಳಿಯುತ್ತವೆ.
ಯಾಕಾಗಿ
ಜಾಗತಿಕ ತಾಪಮಾನ ಹೆಚ್ಚಲು ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿರುವುದು ಕಾರ್ಖಾನೆ ಹಾಗೂ ವಾಹನಗಳು ಉಗುಳುತ್ತಿರುವ ಹೊಗೆ. ಅದರ ನಿಯಂತ್ರಣ ಈ ಸಾಧನದ ಪ್ರಮುಖ ಕೆಲಸ. ಈ ಕುರಿತು ಆಶಿಕ್ ವಿವರಿಸುವುದು ಹೀಗೆ; “ಶಂಕರನಾರಾಯಣದಲ್ಲಿ ಏಳನೇ ತರಗತಿಯಲ್ಲಿ ಶಿಕ್ಷಕರೊಬ್ಬರು ವಾಯುಮಾಲಿನ್ಯ ಕುರಿತು ಪಾಠ ಮಾಡುತ್ತಿದ್ದರು. ಆಗಲೇ ಮಾಲಿನ್ಯ ನಿಯಂತ್ರಣಕ್ಕೆ ಸಾಧನ ಕಂಡುಹಿಡಿಯುವ ಆಸೆ ಚಿಗುರಿತು. ಕಳೆದ ವರ್ಷ ಈಗಿರುವ ಅಂತಿಮ ಸಾಧನ ರೂಪು ತಳೆಯಿತು’ ಎನ್ನುತ್ತಾರೆ. “ನನಗೆ ತಂದೆ ವಸಂತಕುಮಾರ್ ಶೇಟ್, ತಾಯಿ ಶಾರದಾ ಬೆಂಬಲವಾಗಿ ನಿಂತಿದ್ದಾರೆ. ಸ್ನೇಹಿತ ಪ್ರತೀಕ್ ಚಂದ್ರ ಸಹಕಾರ ನೀಡಿದ್ದಾರೆ. ಅಲ್ಲದೆ, ನಮ್ಮ ಕಾಲೇಜಿನ ಪ್ರೊ| ನವೀನ್ ಸಂಶೋಧನಾ ವರದಿ ರೂಪಿಸಲು ಸಹಾಯ ಮಾಡಿದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ.
ವೆಚ್ಚದಾಯಕವಲ್ಲ
ಇದಕ್ಕೆ ಬರೋಬ್ಬರಿ ವೆಚ್ಚವೇನೂ ಇಲ್ಲ. ಕೇವಲ 20 ಸಾವಿರ ರೂ. ವೆಚ್ಚ ತಗುಲುತ್ತದೆ. ಸಾಧನದ ಗಾತ್ರದ ಆಧಾರದ ಮೇಲೆ ಬೆಲೆ ನಿರ್ಧರಿತವಾಗುತ್ತದೆ. ದೀರ್ಘಾವಧಿ ಬಾಳಿಕೆ ಬರುವ ಈ ಸಾಧನಕ್ಕೆ ಆರು ತಿಂಗಳಿಗೊಮ್ಮೆ ಸರ್ವಿಸ್ ಮಾಡಿಸಬೇಕಾಗುತ್ತದೆ. ಇದಕ್ಕೆ ಮಾಡಿದ ವೆಚ್ಚ ಆರು ತಿಂಗಳಲ್ಲಿ ಖರೀದಿಸಿದವರಿಗೆ ಸಿಗುತ್ತದೆ’ ಎನ್ನುತ್ತಾರೆ ಆಶಿಕ್.
ಪರ್ಯಾಯ ಉಪಯೋಗ
ಅಡುಗೆ ಕೋಣೆಗೆ, ಟ್ರಾಫಿಕ್ ಜಂಕ್ಷನ್‌ಗಳಿಗೆ, ಇಡೀ ಮನೆಗೆ ಆಗುವಂತಹ ಮೂರು ಮಾದರಿಗಳನ್ನು ಮಾಡಲಾಗಿದೆ. ಇದರ ತ್ಯಾಜ್ಯವನ್ನು ರಸ್ತೆಗೆ ಡಾಮರು, ಟೈರ್ ,
ಶಾಯಿ ಮೊದಲಾದ ರೂಪಗಳಲ್ಲಿ ಮರುಬಳಕೆ ಮಾಡಬಹುದು ಎಂದು ವಿವರಿಸುತ್ತಾರೆ.
ಜಾಗತಿಕ ತಾಪಮಾನ ನಿಯಂತ್ರಣ
ವಾತಾವರಣ ಸೇರುವ ಶೇ. 60ರಿಂದ 70ರಷ್ಟು ಇಂಗಾಲದ ಕಣಗಳನ್ನು ಈ ಸಾಧನೆ ತಡೆಯುವ ಕಾರಣ ಸಾಧನದಲ್ಲಿ ಸಂಗ್ರಹವಾದ ಕಾರ್ಬನ್ ಅನ್ನು ಪುನರ್ ಬಳಕೆ ಮಾಡಬಹುದು. ಇದನ್ನು ಪರೀಕ್ಷಿಸಿಯೇ ಹೇಳಲಾಗುತ್ತಿದೆ. ಕಾರ್ಖಾನೆಗಳಿಂದ ಕೂಡಾ ವಿಚಾರಣೆ ಬರುತ್ತಿದೆ. ಮಾರುಕಟ್ಟೆಗೆ ಬಿಟ್ಟರೆ ಜಾಗತಿಕ ತಾಪಮಾನ ಖಂಡಿತ ಕಡಿಮೆಯಾಗಲಿದೆ. ಈಗ ಕಾಲೇಜಿನ ಸಿಎಸ್‌ಆರ್ ಫಂಡ್ ಮೂಲಕ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿದ್ಧಪಡಿಸಲಾಗುವುದು.
–ಎಸ್.ವಿ. ಆಶಿಕ್,
ಎಂಜಿನಿಯರಿಂಗ್ ವಿದ್ಯಾರ್ಥಿ
ಮರಗಳು ಈ ಕೆಲಸ ಮಾಡುತ್ತಿವೆ
ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೆ„ಡ್ ಹೀರಿಕೊಂಡು ಉತ್ತಮವಾದ ಆಮ್ಲ ಜನಕವನ್ನು ವಾತಾವರಣಕ್ಕೆ ಮರ ಗಿಡಗಳು ದ್ಯುತಿ ಸಂಶ್ಲೇಷಣೆ ಕ್ರಿಯೆ ಸಂದರ್ಭ ನೀಡುತ್ತವೆ. ಕಾಡುಗಳು ಬೇರೆ ಬೇರೆ ಕಾರಣಕ್ಕೆ ನಾಶವಾಗಿವೆ,ಈ ಸಾಧನ ಕೃತಕ ಮರಗಳ ಕೆಲಸ ಮಾಡುತ್ತದೆ.
-ಚಿಟ್ಟೆ ರಾಜಗೋಪಾಲ ಹೆಗ್ಡೆ,
ಸಾಮಾಜಿಕ ಕಾರ್ಯಕರ್ತ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.