ಚಂದ್ರನಲ್ಲಿ ಎಲೆಕ್ಟ್ರಾನ್ ನೃತ್ಯ!
Team Udayavani, Oct 5, 2019, 5:17 AM IST
ಹೊಸದಿಲ್ಲಿ: ಚಂದ್ರನ ಮೇಲ್ಮೈ ಮೇಲೆ ಇಳಿದ ವಿಕ್ರಮ್ ಸಂವಹನಕ್ಕೆ ಸಿಗದೇ ಇದ್ದರೂ ಆರ್ಬಿಟರ್ ಮೂಲಕ ಇಸ್ರೋ ಹಲವು ಸಂಶೋಧನೆಗಳನ್ನು ನಡೆಸುತ್ತಿದ್ದು, ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ಚಂದ್ರನ ವಾತಾವರಣದಲ್ಲಿ ಎಲೆಕ್ಟ್ರಾನ್ಗಳು ವಿಚಿತ್ರವಾಗಿ ವರ್ತಿಸುತ್ತಿ ರುವುದನ್ನು ಗುರುತಿಸಿದೆ. ಆರ್ಬಿಟರ್ನಲ್ಲಿ ಎಕ್ಸ್ರೇ ಸ್ಪೆಕ್ಟ್ರೋ ಮೀಟರ್ ಮೂಲಕ ಸೋಡಿಯಂ, ಕ್ಯಾಲ್ಸಿಯಂ, ಅಲ್ಯುಮಿ ನಿಯಂ, ಸಿಲಿಕಾನ್, ಟೈಟಾನಿಯಂ ಮತ್ತು ಕಬ್ಬಿಣದ ಅಂಶಗಳನ್ನು ಗುರುತಿಸಲಾಗಿದ್ದು, ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕಾಗ ಇವು ವಿಚಿತ್ರವಾಗಿ ತೀವ್ರಗತಿಯಲ್ಲಿ ವರ್ತಿಸುತ್ತಿವೆ.
ಅಯಸ್ಕಾಂತೀಯ ಗೋಳದ ಮೇಲೆ ಆರ್ಬಿಟರ್ ಹಾದು ಹೋಗುವಾಗ ಚಂದ್ರನ ಮೇಲಿನ ಕಣಗಳ ಸಾಂದ್ರತೆಯಲ್ಲಿ ವ್ಯತ್ಯಾಸವಾಗುತ್ತದೆ. ಗಾಳಿಯು ಈ ಕಣಗಳನ್ನು ಅಸಮಾನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ ಹಾಗೂ ಇದಕ್ಕೆ ಅಯಸ್ಕಾಂತೀಯ ಕ್ಷೇತ್ರವೂ ಪ್ರಭಾವ ಬೀರುತ್ತದೆ ಎಂದು ಬೆಂಗಳೂರಿನ ಐಐಎಸ್ಸಿ ಫಿಸಿಕ್ಸ್ ಸಹಾಯಕ ಪ್ರೊಫೆಸರ್ ನಿರುಪಮ್ ರಾಯ್ ಹೇಳಿದ್ದಾರೆ. ಚಂದ್ರನ ಮೇಲಿನ ವಾತಾವರಣದ ಸಂಪೂರ್ಣ ಚಿತ್ರಣವನ್ನು ಆರ್ಬಿಟರ್ನಿಂದ ಅಳೆಯಲು ಸಾಧ್ಯವಿಲ್ಲವಾದರೂ, ವಾತಾವರಣದಲ್ಲಿ ಇರುವ ಕೆಲವು ಅಂಶಗಳ ಮಾಹಿತಿಯನ್ನು ನಮಗೆ ಕೊಡಲು ಶಕ್ತವಾಗಿದೆ. ಆದರೆ ಚಂದ್ರನ ವಾತಾವರಣದಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಯಾಗುವುದರಿಂದ ಈ ಮಾಹಿತಿಯ ನಿಖರತೆ ಅಳೆಯುವುದು ಕಷ್ಟಕರ. ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿದ್ದಾಗ ಈ ಎಲೆಕ್ಟ್ರಾನ್ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ನಡೆಸಬೇಕಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.