“ತುಮುಲಗಳಿಂದ ಪಾರಾಗಲು ಸಾಹಿತ್ಯ ವಿಚಾರ ಔಷಧ’
Team Udayavani, Oct 5, 2019, 5:30 AM IST
ಕುಂಬಳೆ: ಹಿಂದಿನ ಯುಗಗಳಲ್ಲಿ ಪಾತಾಳ ಲೋಕದ ರಾಕ್ಷಸರು, ದೇಶದೊಳಗಿನ ರಾಕ್ಷಸರು, ಬಳಿಕ ಕುಟುಂಬದೊಳಗಿನ ರಾಕ್ಷಸೀ ಶಕ್ತಿಗಳೊಂದಿಗೆ ಯುದ್ಧ ನಡೆಯುತ್ತಿದ್ದು ಪುರಾಣಗಳಿಂದ ವೇದ್ಯವಾಗುತ್ತದೆ. ಆದರೆ ಇಂದು ನಮ್ಮೊಳಗೇ ಯುದ್ಧ ಏರ್ಪಟ್ಟಿರುವುದು ಕಂಡುಬರುತ್ತಿದೆ. ಇಂತಹ ಆಂತರ್ಯದ ಸವಾಲುಗಳಿಗೆ ಪ್ರತಿಸ್ಪಂದಿಯಾಗಿ ತುಮುಲ ಗಳಿಂದ ಪಾರಾಗುವಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳು ಔಷಧಿಯಂತೆ ನೆರವಾಗುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಕುಂಬಳೆ ಅವರು ತಿಳಿಸಿದರು.
ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕಗಳ ಜಂಟಿ ಆಶ್ರಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ನಾರಾಯಣಮಂಗಲದಲ್ಲಿರುವ ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ ಸ್ವಗೃಹ ಶ್ರೀನಿಧಿ ನಿಲಯದಲ್ಲಿ ಆಯೋಜಿಸಲಾಗಿದ್ದ ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ, ಪ್ರಾಧ್ಯಾಪಕಿ ಸೀತಾಲಕ್ಷಿ$¾à ವರ್ಮ ವಿಟ್ಲ ಅವರೊಂದಿಗೆ ಜಂಟಿಯಾಗಿ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರಾÂನಂತರ ಕಂಡ ದೇಶ ವಿಭಜನೆ ಮತ್ತು ರಾಜ್ಯ ಪುನರ್ವಿಂಗಡಣೆಯ ಮರೆಯಲ್ಲಿ ಕನ್ನಡದ ನೆಲವನ್ನು ತುಂಡರಿಸಿ ಅನ್ಯಾಯವೆಸಗಿದಂತಹ ಎರಡು ಘಟನಾ ವಳಿಗಳು ಭವಿಷ್ಯದಲ್ಲಿ ಎಂದಿಗೂ ಮರುಕ ಳಿಸಬಾರದು. ಅಸ್ಮಿತೆಗೆ ಒದಗುವ ವ್ಯಾಕುಲ ಗಳು ನಾಶಕ್ಕೆ ಕಾರಣವಾಗುವ ಸತ್ಯ ನಮ್ಮ ಕಣ್ಣಿದಿರು ಭೀತಿಗೊಳಿಸುತ್ತಿದ್ದು, ಸಾಹಿತ್ತಿಕ ಚಟುವಟಿಕೆಗಳ ಮೂಲಕ ನಿರಂತರ ಭಾಷಾ ಜಾಗೃತಿ ಸಾಧ್ಯವಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ನಿವೃತ್ತ ಉಪಜಿಲ್ಲಾ ಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿವೃತ್ತ ಜಿಲ್ಲಾ ಶಿಕ್ಷಣಾ ಧಿಕಾರಿ ಸೀತಾಲಕ್ಷ್ಮೀ ಕುಳಮರ್ವ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ರಿತೇಶ್ ಕಿರಣ್ ಕಾಟುಕುಕ್ಕೆ, ಅಭಿಲಾಷ್ ಪೆರ್ಲಮೊದಲಾದವರು ಉಪಸ್ಥಿತರಿದ್ದರು. ವಿ.ಬಿ.ಕುಳಮರ್ವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕತೆಗಳ ಮೌಲ್ಯಗಳ ಗಟ್ಟಿತನವನ್ನು ಸಮರ್ಪಕವಾಗಿ ತಿಳಿಯಪಡಿಸುವ ಚಟುವಟಿಕೆಗಳು ನಿರಂತರವಾಗಿರಬೇಕು. ಎಂದು ತಿಳಿಸಿದರು. ಮುರಳೀಧರ ಯಾದವ್ ನಾಯ್ಕಪು ಅವರಿಂದ ದಸರಾ ನಾಡಹಬ್ಬ ವಿಶೇಷೋಪನ್ಯಾಸ ನಡೆಯಿತು. ಆನಂದ ರೈ ಅಡ್ಕಸ್ಥಳ ಸ್ವಾಗತಿಸಿ, ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗಮಕ ಕಲಾ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಸಿರಿಗನ್ನಡ ವೇದಿಕೆ ಎಸ್.ಕೆ.ಗೋಪಾಲಕೃಷ್ಣ ಭಟ್, ಜಯ ಮಣಿಯಂಪಾರೆ, ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ಉಪಸ್ಥಿತರಿದ್ದರು. ಪರಿಣಿತಾ ರವಿ ಎಡನಾಡು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸತ್ಯವತಿ ಕೊಳಚಪ್ಪು ಚಾಲನೆ ನೀಡಿದರು.
“ಗಟ್ಟಿತನ ಅಗತ್ಯ’
ಕವಯಿತ್ರಿ, ಪ್ರಾಧ್ಯಾಪಕಿ ಸೀತಾ ಲಕ್ಷ್ಮೀ ವರ್ಮ ವಿಟ್ಲ ಅವರು ಮಾತ ನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಹೊಸ, ಯುವ ತಲೆ ಮಾರುಗಳನ್ನು ರೂಪಿಸುವಲ್ಲಿ ಇಂತಹ ಸಾಹಿತ್ತಿಕ ಮೌಲ್ಯಯುತ ಕಾರ್ಯಕ್ರಮಗಳು ನಿತ್ಯ ನಡೆಯುತ್ತಿ ರಬೇಕು. ಆಂಗ್ಲ ಸಹಿತ ಇತರ ಭಾಷೆ ಗಳ ಕಲಿಕೆಗೂ ಮೊದಲು ಮಾತೃ ಭಾಷೆಯ ಗಟ್ಟಿತನ ಸುದೃಢ ವ್ಯಕ್ತಿ ಯಾಗಿ ನಿರ್ಮಾಣಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.