ಇನ್ನು ನಮ್ಮ ಸೈನಿಕರಿಗೆ, ಪೊಲೀಸರಿಗೆ ಸಿಗಲಿದೆ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್
Team Udayavani, Oct 5, 2019, 7:10 AM IST
ನವದೆಹಲಿ: ಇನ್ನು ಮುಂದೆ ನಮ್ಮ ಸಶಸ್ತ್ರಪಡೆಯ ಯೋಧರಿಗೆ, ಅರೆ ಸೈನಿಕ ಪಡೆಯ ಸೈನಿಕರಿಗೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾದ ಬುಲೆಟ್ ಪ್ರೂಫ್ ಜಾಕೆಟ್ ಗಳು ಸಿಗಲಿವೆ. ಈ ಜಾಕೆಟ್ ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಭಾರತದಲ್ಲೇ ತಯಾರಿಸಲಾಗಿದೆ.
ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಂಡಳಿ (ಬಿ.ಐ.ಎಸ್.) 2018ರಲ್ಲಿ ಸಿದ್ಧಪಡಿಸಿ ಸೂಚಿಸಿದ್ದ ಮಾನದಂಡಗಳಿಗೆ ಅನುಗುಣವಾಗಿ ಈ ಜಾಕೆಟ್ ಗಳನ್ನು ತಯಾರಿಸಲಾಗಿದೆ. ನೀತಿ ಆಯೋಗ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಬಿ.ಐ.ಎಸ್. ಈ ಮಾನದಂಡಗಳನ್ನು ಸಿದ್ಧಗೊಳಿಸಿತ್ತು.
ಈ ಜಾಕೆಟ್ ಗಳು ಇದೀಗ ಬಳಕೆಗೆ ಲಭ್ಯವಾಗುವ ಮೂಲಕ ಭಾರತೀಯ ಸಶಸ್ತ್ರ ಪಡೆಗಳು, ಅರೆ ಸೈನಿಕ ಪಡೆಗಳು ಮತ್ತು ರಾಜ್ಯಗಳ ಪೊಲೀಸ್ ಪಡೆಗಳ ದೀರ್ಘಕಾಲೀನ ಬೇಡಿಕೆ ಈಡೇರಿದಂತಾಗಿದೆ. ಇಷ್ಟು ಮಾತ್ರವಲ್ಲದೇ ನಿರ್ಧಿಷ್ಟ ಮಾನದಂಡಗಳನ್ನು ಅನುಸರಿಸಿ ಸ್ವದೇಶಿಯಾಗಿ ತಯಾರಿಸಿದ ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತಯಾರಿಸುವ ಮೂಲಕ ಭಾರತವು ಬುಲೆಟ್ ಪ್ರೂಫ್ ಜಾಕೆಟ್ ಗಳ ತಯಾರಿಯಲ್ಲಿ ತಮ್ಮದೇ ಆದ ಗುಣಮಟ್ಟ ಮಾದರಿಗಳನ್ನು ಹೊಂದಿರುವ ಅಮೆರಿಕಾ, ಇಂಗ್ಲಂಡ್ ಮತ್ತು ಜರ್ಮನಿಯಂತಹ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ಈ ಜಾಕೆಟ್ ಗಳು ಅಪಾಯದ ತೀವ್ರತೆಯನ್ನು ಅವಲಂಬಿಸಿ 5 ರಿಂದ 10 ಕಿಲೋ ಗ್ರಾಂ ತೂಕದಲ್ಲಿ ತಯಾರಾಗಿದೆ ಮತ್ತಿದು ವಿಶ್ವದಲ್ಲೇ ಉತ್ತಮ ಗುಣಮಟ್ಟವನ್ನೂ ಸಹ ಹೊಂದಿದೆ. ಇನ್ನು ಈ ಜಾಕೆಟ್ ಗಳ ಬೆಲೆ 70,000 ದಿಂದ 80,000 ರೂಪಾಯಿಗಳವರೆಗೆ ಇರಲಿದ್ದು, ಇದು ಈ ಹಿಂದೆ ತರಿಸಿಕೊಳ್ಳುತ್ತಿದ್ದ ಜಾಕೆಟ್ ಗಳ ಬೆಲೆಗಳಿಗಿಂತ ಅಗ್ಗವಾಗಲಿದೆ.
ನಮ್ಮಲ್ಲೇ ತಯಾರಿಸಲಾಗುವ ಈ ಜಾಕೆಟ್ ಗಳನ್ನು ಈಗಾಗಲೇ ಇತರೇ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಸಹ ಕೇಂದ್ರ ಸರಕಾರ ಹೊಂದಿದೆ.
ಮಾಜೀ ಸೇನಾಧಿಕಾರಿಯೊಬ್ಬರು ಈ ನೂತನ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ನ ಪ್ರಾತಕ್ಷಿಕೆಯನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಇದರ ಲಕ್ಷಣಗಳನ್ನು ವಿವರಿಸಿದರು.
– ಈ ಜಾಕೆಟ್ ಡೈನಾಮಿಕ್ ತೂಕ ವಿತರಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ಜಾಕೆಟ್ ತೊಟ್ಟುಕೊಳ್ಳುವವರಿಗೆ ಇದರ ನಿಜವಾದ ತೂಕದ ಅರ್ಧ ಭಾರ ಮಾತ್ರ ಅನುಭವಕ್ಕೆ ಬರುತ್ತದೆ.
– ಇನ್ನು ಈ ಜಾಕೆಟ್ ತೊಟ್ಟುಕೊಳ್ಳಲು ಹಾಗೂ ತೆಗೆಯಲು ಸುಲಭ ಸಾಧ್ಯ ರೂಪದಲ್ಲಿದ್ದು ಇದರಿಂದ ಈ ಜಾಕೆಟ್ ಬಳಸುವವರಿಗೆ ಇದನ್ನು ಬೇಕೆಂದಾಗ ಥಟ್ಟನೆ ತೊಟ್ಟುಕೊಳ್ಳಲು ಹಾಗೂ ಬೇಡವೆಂದಾಗ ಸುಲಭವಾಗಿ ತೆಗೆಯಲು ಅನುಕೂಲವಾಗುತ್ತದೆ.
– ಬುಲೆಟ್ ಗಳಿಂದ 360 ಡಿಗ್ರಿ ಕೋನದಲ್ಲಿ ರಕ್ಷಣೆ ಒದಗಿಸುವ ವ್ಯವಸ್ಥೆಯನ್ನು ಇದು ಹೊಂದಿರುವುದರಿಂದ ಸೈನಿಕರಿಗೆ ತಮ್ಮ ಆಯುಧಗಳನ್ನು ಸುಲಭವಾಗಿ ಬಳಸಲು ಈ ಜಾಕೆಟ್ ಸಹಕಾರಿಯಾಗಿದೆ.
ಸಿ.ಆರ್.ಪಿ.ಎಫ್., ಬಿ.ಎಸ್.ಎಫ್., ಎಸ್.ಎಸ್.ಬಿ., ಸಿ.ಐ.ಎಸ್.ಎಫ್., ಎನ್.ಎಸ್.ಜಿ. ಸೇರಿದಂತೆ ಕೇಂದ್ರೀಯ ಸಶಸ್ತ್ರ ಪಡೆಗಳು ಈಗಾಗಲೇ ಈ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.