“ಕೌಶಲ ಆಧಾರಿತ ಶಿಕ್ಷಣದಲ್ಲಿ ಉದ್ಯೋಗ ಭದ್ರತೆ’
ಉಜಿರೆ: ಎಸ್‌ಡಿಎಂ ಕಾಲೇಜು ಪದವಿ ಪ್ರದಾನ
Team Udayavani, Oct 5, 2019, 3:45 AM IST
ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪದವಿ ಪ್ರದಾನ ಮಾಡಿದರು.
ಬೆಳ್ತಂಗಡಿ: ಕೌಶಲಾಧಾರಿತ ಶಿಕ್ಷಣದಲ್ಲಿ ಉದ್ಯೋಗ ಭದ್ರತೆ ಇದೆ. ಪಠ್ಯಕ್ರಮ ಮತ್ತು ವರ್ತಮಾನದ ಬದಲಾದ ವೃತ್ತಿಪರ ಟ್ರೆಂಡ್ ಗಮನಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣ ನೆರವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅಭಿಪ್ರಾಯಪಟ್ಟರು.
ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶುಕ್ರವಾರ ನಡೆದ ಪದವೀಧರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು. ಪ್ರಸಕ್ತ ದಿನಗಳಲ್ಲಿ ಸರ್ಟಿಫಿಕೆಟ್ ಆಧಾರದಲ್ಲಿ ಉದ್ಯೋಗಾವಕಾಶ ಪಡೆ ಯುವುದಷ್ಟೇ ಗುರಿಯಾಗುತ್ತಿದೆ. ಈ
ನಿಟ್ಟಿನಲ್ಲಿ ಶಿಕ್ಷಣದ ಪರಿಕಲ್ಪನೆ ಪರಿಷ್ಕೃತವಾಗದ ವಿನಾ ಕಾಲೇಜುಗಳ ಸುಧಾರಣೆ ಅಸಾಧ್ಯ. ಇದನ್ನು ಗಮನದಲ್ಲಿರಿಸಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಪಠ್ಯ ಪರಿಷ್ಕೃತವಾಗಬೇಕು ಎಂದು ಹೇಳಿದರು.
ಮಹತ್ವದ ಕೊಡುಗೆ ನೀಡಿ
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ವ್ಯಕ್ತಿತ್ವ ಸದೃಢಗೊಳಿಸಿಕೊಂಡು ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವತ್ತ ವಿದ್ಯಾರ್ಥಿಗಳು ಮತ್ತು ಪದವೀಧರರು ಗಮನ ಹರಿಸಬೇಕು ಎಂದರು.
ಕಾಲೇಜಿನ ನೂತನ ಬಿ.ವೋಕ್ ವೃತ್ತಿಪರ ಕೋರ್ಸ್‌ಗಳಿಗೆ ಡಾ| ಹೆಗ್ಗಡೆ ಹಾಗೂ ಗಣ್ಯರು ಅಧಿಕೃತ ಚಾಲನೆ ನೀಡಿದರು. ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹೊಸ ಕೋರ್ಸ್ ಗಳ ಮಹತ್ವವನ್ನು ವಿಶ್ಲೇಷಿಸಿದರು. ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹಷೇìಂದ್ರ
ಕುಮಾರ್, ಸ್ನಾತಕೋತ್ತರ ಕೇಂದ್ರದ ಡೀನ್ ಡಾ| ಬಿ. ಗಣಪಯ್ಯ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ| ಜಯಮಾರ್ ಶೆಟ್ಟಿ, ಪ್ರೊ| ಶಾಂತಿ ಪ್ರಕಾಶ್, ಪ್ರೊ| ಶಂಕರನಾರಾಯಣ, ಪ್ರೊ| ಎಸ್.ಎನ್. ಕಾಕತ್ಕರ್ ಉಪ ಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸತೀಶ್ಚಂದ್ರ ಎಸ್. ಸ್ವಾಗತಿಸಿದರು. ಕುಲಸಚಿವ (ಆಡಳಿತ) ಡಾ| ಬಿ.ಪಿ. ಸಂಪತ್ ಕುಮಾರ್ ಸಂಸ್ಥೆಯ ವಾರ್ಷಿಕ ಸಾಧನೆಯ ವಿವರ ನೀಡಿದರು. ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
ಆವಿಷ್ಕಾರಗಳ ಕಾರಣಕ್ಕಾಗಿಯೇ ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಭಿನ್ನ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿವೆ. ಹೊಸ ಹೆಜ್ಜೆಗಳಿಗೆ ತಕ್ಕಂತೆ ವೃತ್ತಿಪರ ಭವಿಷ್ಯ ರೂಪಿಸಿಕೊಳ್ಳುವ ಚಿಂತನೆ ಸಾಕಾರಗೊಳ್ಳುವಂತೆಯೇ ಶೈಕ್ಷಣಿಕ ಸಂಸ್ಕೃತಿ ಪುನರುತ್ಥಾನಗೊಳ್ಳಬೇಕಿದೆ.
-ಡಾ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.