ಗರಿಗೆದರಿದೆ ರಿಯಲ್ ಎಸ್ಟೇಟ್ ಉದ್ಯಮ
Team Udayavani, Oct 5, 2019, 12:34 PM IST
ಬೆಂಗಳೂರು: ಸಾಮಾನ್ಯವಾಗಿ ಯಾದೇ ಉತ್ಪನ್ನದ ಮೇಲೆ ಮಾರಾಟಗಾರರ ಪ್ರಾಬಲ್ಯ ಹೆಚ್ಚಿರುತ್ತದೆ. ಆದರೆ, ನಗರದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾತ್ರ ಈಗ ಖರೀದಿದಾರರು ಪ್ರಾಬಲ್ಯ ಹೊಂದಿದ್ದಾರೆ. ಅಷ್ಟರಮಟ್ಟಿಗೆ ಈ ಮಾರುಕಟ್ಟೆ ಹೂಡಿಕೆಗೆ ಪೂರಕವಾಗಿದೆ.
ನಿವೇಶನ ಅಥವಾ ಫ್ಲ್ಯಾಟ್‌ಗಳ ಬೇಡಿಕೆಗಿಂತ ಲಭ್ಯತೆ ಪ್ರಮಾಣ ಕೊಂಚ ಅಧಿಕವಾಗಿದೆ. ಹಾಗಾಗಿ, ಖರೀದಿದಾರರ ಮುಂದೆ ಹೆಚ್ಚು ಆಯ್ಕೆಗಳಿವೆ. ಮತ್ತೂಂದೆಡೆ ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಪ್ರಮಾಣ ಇಳಿಕೆ ಮಾಡಲಾಗಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೆ ಲಾಭದಾಯಕ ಆಗಲಿದ್ದು,
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಗೆ ಇದು ಸಕಾಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಿದೆ. ಇದರ ಲಾಭ ಸಹಜವಾಗಿ ಅಲ್ಲಿನ ಉದ್ಯೋಗಿಗಳಿಗೆ ವಿವಿಧ ರೂಪದಲ್ಲಿ ವರ್ಗಾವಣೆ ಆಗುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಫ್ಲ್ಯಾಟ್ ಗಳತ್ತ ಜನ ಮುಖಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಆ ಹೂಡಿಕೆದಾರರಿಗೆ ವರವಾಗುವ ನಿರೀಕ್ಷೆಯೂ ಇದೆ ಎಂದು ಭಾರತೀಯ ರಿಯಲ್ ಎಸ್ಟೇಟ್ ಡೆವೆಲಪರ್ ಸಂಘಗಳ ಒಕ್ಕೂಟ (ಕ್ರೆಡಾಯ್) ಅಧ್ಯಕ್ಷ ಸುರೇಶ್ ಹರಿ “ಉದಯವಾಣಿ’ಗೆ ತಿಳಿಸಿದರು.
ದೇಶದ ಉಳಿದ ಮಹಾನಗರಗಳಿಗೆ ಹೋಲಿಸಿದರೆ, ರಿಯಲ್ ಎಸ್ಟೇಟ್ ವ್ಯಾಪಾರ ಬೆಂಗಳೂರಿನಲ್ಲಿ ಕೊಂಚ ಭಿನ್ನ. ಇಲ್ಲಿ ಅಭಿವೃದ್ಧಿಯಲ್ಲಿ ಸುಸ್ಥಿರತೆ ಇದೆ. ಬೇಕಾಬಿಟ್ಟಿ ನಿರ್ಮಾಣ ಮಾಡಿ, ನಂತರ ಖಾಲಿ ಇಟ್ಟುಕೊಂಡು ಬನ್ನಿ ದಯವಿಟ್ಟು ಖರೀದಿಸಿ ಎಂದು ದುಂಬಾಲು ಬೀಳುವುದಿಲ್ಲ. ಇದೇ ಕಾರಣಕ್ಕೆ ಇವತ್ತಿಗೂ ಇಲ್ಲಿನ ಭೂಮಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಇಲ್ಲಿ ಪ್ರತಿ ವರ್ಷ ರಿಯಲ್ ಎಸ್ಟೇಟ್ ವೃದ್ಧಿ ದರ ಸರಾಸರಿ ಶೇ.10ರಷ್ಟಿದೆ. ದೇಶದಲ್ಲಿ ಇಷ್ಟೊಂದು ವೃದ್ಧಿ ಇರುವುದು ಬೆಂಗಳೂರಿನಲ್ಲಿ ಮಾತ್ರ. ಇನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.8.5ರಿಂದ ಶೇ.6.5ಕ್ಕೆ ಇಳಿಸಲಾಗಿದೆ. ಕ್ಷೇತ್ರದ ವೃದ್ಧಿ ದರಕ್ಕೆ ಹೋಲಿಸಿದರೆ, ಗ್ರಾಹಕರ ಪಾಲಿಗೆ ರಿಯಲ್ ಎಸ್ಟೇಟ್ ಲಾಭದಾಯಕ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದೂ ಅವರು ಪ್ರತಿಪಾದಿಸುತ್ತಾರೆ.
ಹೆಚ್ಚು ಆಯ್ಕೆಗಳು: “ನನ್ನ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿದಾರರ ಪ್ರಾಬಲ್ಯ ಇದೆ. ಈ ಹಿಂದೆ ಯಾವುದಾದರೂ ಒಂದು ಸೈಟ್ ಅಥವಾ ಫ್ಲ್ಯಾಟ್ ನೋಡಿಕೊಂಡು ಬಂದು, ನಂತರ ಮೂರು ದಿನಬಿಟ್ಟು ಪುನಃ ಆ ಜಾಗಕ್ಕೆ ಭೇಟಿ ನೀಡಿದರೆ, ಅದರ ಬೆಲೆ ಹೆಚ್ಚಿಗೆ ಹೇಳುತ್ತಿದ್ದರು. ಆದರೆ, ಈಗ ಆ ಸ್ಥಿತಿ ಇಲ್ಲ. ಜನರ ಮುಂದೆ ಆಯ್ಕೆಗಳಿವೆ. ಕೈಗೆಟಕುವ ದರದಲ್ಲಿ ದೊರೆಯಲಿದೆ’ ಎಂದು ಮಾನಂದಿ ಡೆವಲಪರ್ ಪ್ರೈ.ಲಿ.,ನ ಮಾಲಿಕ ಮಾನಂದಿ ಸುರೇಶ್ ತಿಳಿಸುತ್ತಾರೆ.
ಈ ಮೊದಲು ತುಂಬಾ ಐಷಾರಾಮಿ ಮತ್ತು ದೊಡ್ಡ ಗಾತ್ರದ ಫ್ಲ್ಯಾಟ್‌ಗಳ ನಿರ್ಮಾಣ ಹೆಚ್ಚಾಗಿತ್ತು. ಇವುಗಳ ಬೆಲೆ 45-50 ಲಕ್ಷ ರೂ. ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನು ಗುರಿಯಾಗಿಟ್ಟುಕೊಂಡು 600ರಿಂದ 800 ಚದರಡಿಯಲ್ಲಿ 1 ಬಿಎಚ್‌ಕೆ ಮತ್ತು 2 ಬಿಎಚ್‌ಕೆ ಮನೆಗಳನ್ನು ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಇವುಗಳ ಬೆಲೆ 28ರಿಂದ 30 ಲಕ್ಷ ರೂ. ಇರುತ್ತದೆ. ಕುಟುಂಬಗಳ ಗಾತ್ರ ಕೂಡ ಕಡಿಮೆ ಆಗುತ್ತಿರುವುದು ಈ ಟ್ರೆಂಡ್‌ಗೆ ಕಾರಣ ಎಂದೂ ಅವರು ಹೇಳುತ್ತಾರೆ.
ನಗರದಾದ್ಯಂತ ಸುಮಾರು ಏಳು ಲಕ್ಷಕ್ಕೂ ಅಧಿಕ ಫ್ಲ್ಯಾಟ್‌ಗಳಿದ್ದು, ಈ ಪೈಕಿ ಐಟಿಪಿಎಲ್ ಸುತ್ತಲಿನ ಪ್ರದೇಶದಲ್ಲೇ ಮೂರೂವರೆಯಿಂದ ನಾಲ್ಕು ಲಕ್ಷ ಫ್ಲ್ಯಾಟ್‌ಗಳಿವೆ. ಹಾಗಂತ ಅವುಗಳ ದರ ಕಡಿಮೆ ಆಗಿಲ್ಲ. ಏಕೆಂದರೆ, ರಿಯಲ್ ಎಸ್ಟೇಟ್ ಪ್ರತಿ ವರ್ಷ ಪ್ರಗತಿ ಸಾಧಿಸುವ ಕ್ಷೇತ್ರವಾಗಿದೆ. ಹಲವು ಆಫರ್ ಗಳನ್ನು ಕೇಂದ್ರ ಸರ್ಕಾರ ನೀಡಿರುವುದರಿಂದ ಹೂಡಿಕೆಗೆ ಇದು ಉತ್ತಮ ಅವಕಾಶ ಎಂದು ಬಿಲ್ಡರ್ಅ ಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಕೇಂದ್ರದ ಅಧ್ಯಕ್ಷ ಎಸ್. ಶಿವಪ್ರಕಾಶ್ ತಿಳಿಸಿದರು.
ಬೆಂಗಳೂರು ಗಟ್ಟಿ ಮಾರ್ಕೆಟ್ ಏಕೆ? : ದೇಶದ ಇತರೆ ನಗರಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದರೂ, ಬೆಂಗಳೂರು ಅಷ್ಟೊಂದು ಸುಲಭವಾಗಿ ಜಗ್ಗುವುದಿಲ್ಲ. ಎಂಥ ಸಂದರ್ಭಗಳಲ್ಲೂ ತನ್ನ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಐಟಿ ಮತ್ತು ಸ್ಟಾರ್ಟಪ್ ವಲಯ. ಇತರೆ ಉದ್ಯಮಗಳ ಹಾಗೆ ಇವುಗಳಿಗೆ ಅಷ್ಟೊಂದು ಬೇಗ ದುಷ್ಪರಿಣಾಮ ಬೀರದು. ಬೆಂಗಳೂರು ಬಹುತೇಕ ಈ ಉದ್ಯಮದ ನೆರಳಲ್ಲೇ ಇದೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.