ತಾಲೂಕಾದರೂ ಈಡೇರಿಲ್ಲ ಜನರ ಆಶಯ
ಜಿಲ್ಲೆಯಲ್ಲಿ ಏಳು ನೂತನ ತಾಲೂಕುಗಳು ರಚನೆಯಾಗಿದ್ದರೂ ಪ್ರಯೋಜನವಿಲ್ಲದಂತಾಗಿದೆ: ಆರೋಪ
Team Udayavani, Oct 5, 2019, 2:59 PM IST
ಶಂಕರ ಜಲ್ಲಿ
ಆಲಮಟ್ಟಿ: ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ಎನ್ನುವ ಧ್ಯೇಯೋದ್ದೇಶದಿಂದ ರಾಜ್ಯದಲ್ಲಿ ಜಗದೀಶ ಶೆಟ್ಟರ ನೇತೃತ್ವದ ಬಿಜೆಪಿ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ 43 ನೂತನ ತಾಲೂಕು ಘೋಷಣೆ ಮಾಡಿದ್ದರೂ ಕೂಡ ಇನ್ನೂವರೆಗೆ ಪೂರ್ಣ ಪ್ರಮಾಣದಲ್ಲಿ ತಾಲೂಕು ರಚನೆಯಾಗದಿರುವುದು ಜನರ ಪರದಾಟ ಇನ್ನೂ ತಪ್ಪಿಲ್ಲ.
ವಿಜಯಪುರ ಜಿಲ್ಲೆ ವಿಭಜನೆಯಾಗಿ ಬಾಗಲಕೋಟೆ ಜಿಲ್ಲೆಯಾದ ನಂತರ ವಿಜಯಪುರ ಕೇವಲ 5 ತಾಲೂಕು ಒಳಗೊಂಡ ಜಿಲ್ಲೆಯಾಗಿತ್ತು. ಅದಕ್ಕೂ ಮುಂಚಿತವಾಗಿಯೇ ಟಿ.ಎಂ. ಹುಂಡೇಕಾರ, ವಾಸುದೇವರಾವ್, ಪಿ.ಸಿ. ಗದ್ದಿಗೌಡರ, ಡಾ| ಎಂ.ಬಿ.ಪ್ರಕಾಶ ನೇತೃತ್ವದ ಆಯೋಗಗಳು ತಾಲೂಕು ರಚನೆಯ ಪ್ರಾಮುಖ್ಯತೆ, ಅದರಿಂದ ಜನರಿಗೆ ಹಣ ಹಾಗೂ ಸಮಯದ ಉಳಿತಾಯ ಹೀಗೆ ಹಲವಾರು ಕಾರಣಗಳನ್ನು ಉಲ್ಲೇಖೀಸಿ ಹೊಸ ತಾಲೂಕು ಕೇಂದ್ರಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚುನಾವಣೆ ಹೊಸ್ತಿಲಲ್ಲಿ ಅಂದರೆ 2013ರಲ್ಲಿ ನೂತನ ತಾಲೂಕುಗಳನ್ನು ಘೋಷಣೆ ಮಾಡಲಾಯಿತು. ಇದರ ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ನೂತನವಾಗಿ ನಿಡಗುಂದಿ, ಕೊಲ್ಹಾರ, ಚಡಚಣ, ದೇವರಹಿಪ್ಪರಗಿ, ತಿಕೋಟಾ, ಬಬಲೇಶ್ವರ, ತಾಳಿಕೋಟೆ ನೂತನ ಕೇಂದ್ರಗಳಾಗಿ ಅಸ್ತಿತ್ವಕ್ಕೆ ಬಂದವು.
ಏಳು ವರ್ಷಗಳು ಕಳೆದರೂ ನೂತನ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್ ಕಚೇರಿಯೊಂದನ್ನು ಬಿಟ್ಟು ಇನ್ನುಳಿದ ತಾಲೂಕಾಡಳಿತ 32 ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದೇ ಹಳೆ ತಾಲೂಕು ಕೇಂದ್ರಕ್ಕೆ ಅಲೆದಾಡುವ ಸ್ಥಿತಿ ಇನ್ನೂ ಇದೆ.
ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ತಾಲೂಕು ರಚನೆಯಲ್ಲಿ ಇನ್ನೂ ಕೆಲವು ನೂತನ ತಾಲೂಕುಗಳೆಂದು ಘೋಷಣೆ ಮಾಡಿ 43 ಇದ್ದ ತಾಲೂಕುಗಳ ಸಂಖ್ಯೆ 50ಕ್ಕೆ ಏರಿಕೆಯಾದರೂ ಕೂಡ ಕೇವಲ ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ್ ಕಚೇರಿಗಳು
ಮಾತ್ರ ಕಾರ್ಯಾರಂಭ ಮಾಡುತ್ತಿವೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಿಂದ ವಿಜಯಪುರ ಜಿಲ್ಲೆಯ ಆಲಮೇಲ ಹೋಬಳಿಯನ್ನೂ ತಾಲೂಕು ಕೇಂದ್ರ ರಚನೆ ಮಾಡಲಾಗಿದೆ ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಸಿ.ಮನಗೂಳಿಯವರು ಘೋಷಣೆ ಮಾಡಿದ್ದರಿಂದ ಈಗ ಜಿಲ್ಲೆಯಲ್ಲಿ ಒಟ್ಟು 13 ತಾಲೂಕು ಕೇಂದ್ರಗಳಾಗಿದ್ದರೂ ಕೂಡ ಎಲ್ಲ ತಾಲೂಕು ಕಚೇರಿಗಳನ್ನು ಹೊಂದಿರುವ ತಾಲೂಕು ಕೇಂದ್ರಗಳು ಕೇವಲ 5 ಮಾತ್ರ.
ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ, ಖಜಾನೆ, ಉಪ ನೋಂದಣಾಧಿಕಾರಿ, ಕಾರ್ಯ ಮತ್ತು ಪಾಲನಾ ವಿದ್ಯುತ್ ಉಪ ವಿಭಾಗ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತಾಲೂಕಾ ಪಂಚಾಯತ, ಪಶು ಸಂಗೋಪನಾ ಇಲಾಖೆ, ನ್ಯಾಯಾಲಯ ಅದರಂತೆ ಇನ್ನುಳಿದ ಎಲ್ಲ ತಾಲೂಕಾಡಳಿತ ಕಚೇರಿಗಳು ಹೊಸ ತಾಲೂಕು ಕೇಂದ್ರಗಳಲ್ಲಿ ಕಾರ್ಯಾರಂಭ ಆಗದೇ ಇರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.